ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಎಲ್ಲೆಡೆ ಪೊಲೀಸರು ರೌಡಿ ಶೀಟರ್ ಗಳ ಪರೇಡ್ ನಡೆಸುವುದು ಸಾಮಾನ್ಯ ಆದರೆ ಚಿಕ್ಕಮಗಳೂರಿನ ಪೊಲೀಸರು ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುವವರ ಪರೇಡ್ ನ್ನು ಇಂದು ಮಾಡಿದ್ದಾರೆ.

ಇದನ್ನೂ ಓದಿ : ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆದ ಕಿಡಿಗೇಡಿ

ಈ ಹಿಂದಿನಿಂದಲೂ ಚಿಕ್ಕಮಗಳೂರು ನಗರಸಭೆಯು ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಗೋಮಾಂಸವನ್ನು ಹಾಗೂ ಇದರಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದರು.


ಇದರಲ್ಲಿ ಕೆಲವರ ಶೆಡ್ ಗಳು ಹಾಗೂ ಅಕ್ರಮ ಗೋಮಾಂಸ ತಯಾರಿಕಾ ಸ್ಥಳಗಳ ಮೇಲೂ ಜೆಸಿಬಿ ಪ್ರಯೋಗ ನಡೆದಿತ್ತು. 

ಈ ಕುರಿತಾಗಿ ಅಕ್ರಮ ಗೋಮಾಂಸ ಮಾರಾಟಗಾರರಿಗೆ ಎಚ್ಚರಿಕೆ ನೀಡುವ ಸಲುವಾಗಿ ಇಂದು ಪೊಲೀಸರು 30 ಜನ ಗೋಮಾಂಸ ಮಾರಾಟಗಾರರ ಪರೇಡ್ ನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮ ಕೃತವನ್ನು ಮುಂದುವರೆಸಿದ್ದೇ ಆದಲ್ಲಿ ಕಠಿಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಬುಲ್ಡೋಜರ್ ಬಾಬಾ ಸಮ್ಮುಖದಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ ; ಕಟ್ಟಡ ನೆಲಸಮ :

ಚಿಕ್ಕಮಗಳೂರು : ಚಿಕ್ಕಮಗಳೂರಿನ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರ ನೇತೃತ್ವದಲ್ಲಿ ಜೆಸಿಬಿ ಮೂಲಕ ಇನ್ನೊಂದು ಕಾರ್ಯಾಚರಣೆ ನಡೆದಿದೆ. 

ಕಳೆದ ಕೆಲದಿನಗಳ ಹಿಂದಷ್ಟೇ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದ ನಗರಸಭೆ, ಇದೀಗ ಅಧ್ಯಕ್ಷರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಇನ್ನೊಂದು ಕಾರ್ಯಾಚರಣೆ ನಡೆಸಿದೆ.

ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಬಳಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡಿ 30 ವರ್ಷಗಳಿಂದ ಅಕ್ರಮವಾಗಿ ಕಟ್ಟಡ ಕಟ್ಟಿ ಅದನ್ನು ಒಳಬಾಡಿಗೆ ವ್ಯಾಪಾರಕ್ಕೆ ನೀಡಿ, ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದ್ದ ಕಟ್ಟಡವನ್ನು ನಗರಸಭೆ ಜೆಸಿಬಿ ಮೂಲಕ ಧರೆಗುರುಳಿಸಿದೆ.

ಈ ಕುರಿತಾಗಿ ಮಾತನಮಾಡಿರುವ ಅವರು ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಅನೇಕ ಅಕ್ರಮ ಕಟ್ಟಡಗಳಿದ್ದು ಅವುಗಳನ್ನು ಪಟ್ಟಿ ಮಾಡಿ ಶೀಘ್ರವೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. 

ಅನಧಿಕೃತ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅನುಮತಿಯನ್ನು ಪಡೆಯದೇ ಇಟ್ಟಿರುವ ಅಂಗಡಿಗಳು ಸೇರಿದಂತೆ ಅನಧಿಕೃತ ಚಟುಟಿಕೆಗಳಿಗೆ ನಿರ್ಬಂಧ ಹೇರುವ ಸಲುವಾಗಿ ಹಾಗೂ ಜನರ ಹಿತಕ್ಕಾಗಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಾ ಕಾರ್ಯನಿರ್ವಹಿಸಲಿದ್ದಾರೆ ಎಂದರು.