ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೋರ್ವರ ದ್ವಿಚಕ್ರ ವಾಹನದಲ್ಲಿ ಸಿಲುಕಿದ್ದ ಹಾವೊಂದನ್ನು ಸ್ನೇಕ್ ನರೇಶ್ ಸೆರೆ ಹಿಡಿದಿದ್ದಾರೆ. 

ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಶಿವಪ್ರಸಾದ್ ಅವರ ಸ್ಕೂಟಿಯಲ್ಲಿ ಹಾವು ಸೇರಿಕೊಂಡಿತ್ತು, ಇದರಿಂದಾಗಿ ಆತಂಕಗೊಂಡ ಅವರು ಹಾವನ್ನು ಸುರಕ್ಷಿತವಾಗಿ ಹೊರತೆಗೆಯುವ ಸಲುವಾಗಿ ಸ್ನೇಕ್ ನರೇಶ್ ಅವರಿಗೆ ಕರೆ ಮಾಡಿ ಈ ಕುರಿತು ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ನರೇಶ್ ಸ್ಕೂಟಿಯಲ್ಲಿದ್ದ ಹಾವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಸ್ಕೂಟಿಯ ಕೆಲ ಭಾಗಗಳನ್ನು ತೆಗೆದು ಕಾರ್ಯಾಚರಣೆ ಆರಂಭಿಸಿದ ಸ್ನೇಕ್ ನರೇಶ್, ಒಳಸೇರಿದ್ದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹಾರುಂಬೆ ಹಾವು ವಾಹನದಲ್ಲಿ ಪತ್ತೆಯಾಗಿದ್ದು ಅದನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಪ್ರದೇಶಕ್ಕೆ ಬಿಡುವಲ್ಲಿ ಸ್ನೇಕ್ ನರೇಶ್ ಯಶಸ್ವಿಯಾದರು. 

ಮಳೆಗಾಲದ ಈ ಅವಧಿಯಲ್ಲಿ ಹಾವುಗಳು ಮರಿಮಾಡುವ ಸಮಯವಿದಾಗಿದ್ದು ಹೆಚ್ಚಿನ ಪ್ರದೇಶಗಳಲ್ಲಿ ಹಾವು ಹಾಗೂ ಹಾವಿನ ಮರಿಗಳು ಕಾಣ ಸಿಗುತ್ತದೆ. ಈ ನಿಟ್ಟಿನಲ್ಲಿ ವಾಹನಗಳನ್ನು ಕಾಡುಭಾಗಗಳಲ್ಲಿ ನಿಲ್ಲಿಸುವವರು ಒಮ್ಮೆ ತಪಾಸಣೆ ನಡೆಸಿ ನಂತರದಲ್ಲಿ ಪ್ರಯಾಣಿಸುವುದು ಕ್ಷೇಮಕರವಾಗಿದೆ. ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ನರೇಶ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.