ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಮನೆಗೆ ಎನ್.ಎಸ್.ಯು.ಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿರುವುದನ್ನು ಖಂಡಿಸಿ ಇಂದು ಚಿಕ್ಕಮಗಳೂರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ : NR PURA : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರ ದುರ್ಮರಣ

ರಾಜ್ಯದ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ಅವರ ಮನೆ ಆವರಣಕ್ಕೆ ನುಗ್ಗಿ ದಾಂಧಲೆ, ದುಷ್ಕೃತ್ಯ ನಡೆಸಿದವರ ವಿರುದ್ಧ ನಿರ್ದ್ಯಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಯುವ ಮೋರ್ಚಾದ ಕಾರ್ಯಕರ್ತರುಗಳು ಹಾಗೂ ಪಕ್ಷದ ಪ್ರಮುಖರು ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪದಾಧಿಕಾರಿಗಳು ಸಂವಿಧಾನವನ್ನು ವಿರೋಧ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ಸಿಗರು ಹೊಂದಿದ್ದಾರೆ. ಅಧಿಕಾರವಿದ್ದಾಗಲೂ ಇಲ್ಲದಾಗಲೂ ಕಾಂಗ್ರೆಸ್ ಇಂತಹ ಕಿಡಿಗೇಡಿ ಕೃತ್ಯಕ್ಕಿಳಿಯುತ್ತದೆ. ಎಂದಿಗೂ ನಾವಿದನ್ನು ಸಹಿಸಲಾರೆವು. ಪೊಲೀಸರು ಗೂಂಡಾಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು. 

ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರ ಮನೆಯ ಮೇಲೆ ದಾಳಿ ನಡೆಸಿರುವುದು ಕಾಂಗ್ರೆಸ್ ನ ಗೂಂಡಾ ಸಂಸ್ಕೃತಿಗೆ ಹಿಡಿದ ಕೈಗನ್ನಡಿ. ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಕೊತ್ವಾಲ್ ರಾಮಚಂದ್ರನ ಶಿಶ್ಯ, ಇನ್ನೊಬ್ಬ ಯುವ ರಾಜ್ಯಾಧ್ಯಕ್ಷ ಮರಿಪುಡಾರಿಗಳ ಸೈನ್ಯ ಕಟ್ಟಿಕೊಂಡಿರುವ ಪುಂಡರ ಗ್ಯಾಂಗಿನ ಲೀಡರ್.ಇವರ ನೇತೃತ್ವದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದಿಂದ ಏನನ್ನೂ ಒಳಿತನ್ನು ನಿರೀಕ್ಷಿಸಲು ಸಾಧ್ಯವಿಲ್ಲ.ಈ ಘಟನೆ ನೋಡಿದಾಗ ಹಿಂದೂ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಎಲ್ಲೆಡೆ ಶಸ್ತ್ರ ತರಬೇತಿ ನೀಡುವ ಅವಶ್ಯಕತೆಯಿದೆ ಎನಿಸುತ್ತದೆ. - ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವಮೋರ್ಚಾ ಚಿಕ್ಕಮಗಳೂರು

 


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ವರಸಿದ್ಧಿ ವೇಣುಗೋಪಾಲ್,ಜಿಲ್ಲಾ ಉಪಾಧ್ಯಕ್ಷರದ ಪ್ರೇಮ್ ಅಣ್ಣ, ನಗರಸಭೆ ಸದಸ್ಯರು ಮಣಿಕಂಠ,ಮಲ್ಲೇಶ್,ಯುವ ಮೋರ್ಚಾ ನಗರ ಅಧ್ಯಕ್ಷ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್  ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಜೀವನ್, ಸಚಿನ್ ನಗರ ಪ್ರಧಾನ ಕಾರ್ಯದರ್ಶಿ ಪುನೀತ್, ಗ್ರಾಮ ಪಂಚಾಯಿತಿ ಸದಸ್ಯ ಸ್ವರೂಪ್, ಹಿರೇಮಗಳೂರು ಕೇಶವ್, ಇಂದವರ ಯತೀಶ್, ಶಾಮ ಕೋಟೆ, ಲೋಹಿತ್,ವಿಜಯ್, ಪಾರ್ಥಿಬನ್, ಇನ್ನಿತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಗುರುವಿಗೆ ತಿರುಗುತ್ತರ ನೀಡಿದ ವಿದ್ಯಾರ್ಥಿ, ಸಿಟ್ಟಿಗೆದ್ದ ಶಿಕ್ಷಕನಿಂದ ಬಾಸುಂಡೆ ಬರುವಂತೆ ಏಟು

ಕೊಪ್ಪ : ಶಿಕ್ಷಕರೋರ್ವರ ಮಾತಿಗೆ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ, ಶಿಕ್ಷಕ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ಕೊಪ್ಪದಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡಿಗಡೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಂಬ ಆರನೇ ತರಗತಿ ಬಾಲಕನಿಗೆ ಕನ್ನಡ ಪಾಠ ಮಾಡುತ್ತಿದ್ದ ಶಿಕ್ಷಕ ನಾಗರಾಜ್ ಶಾಲೆಯಲ್ಲಿ ಸರಿಯಾಗಿ ಬರೆಯುವಂತೆ  ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ ವಿದ್ಯಾರ್ಥಿಯ ಕಾಲಿಗೆ ಬೆನ್ನಿಗೆ ಶಿಕ್ಷಕ ನಾಗರಾಜ್ ಮನ ಬಂದಂತೆ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಕನ್ನಡ ಪಾಠ ಮಾಡುವ ಶಿಕ್ಷಕನ ಪ್ರಶ್ನೆಗೆ ವಿದ್ಯಾರ್ಥಿ ಎದುರುತ್ತರ ನೀಡಿದ್ದಾನೆ ಈ ಸಂದರ್ಭದಲ್ಲಿ ಶಿಕ್ಷಕ ಕೋಪಗೊಂಡು ಹೊಡೆದಿದ್ದಾರೆ, ಘಟನಾ ಸಂಬಂಧ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದು ಕಾನೂನಿನ ಅನ್ವಯ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲಾಗುವುದು - ಆಂಥೋನಿ ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪ

ಘಟನೆಯ ಕುರಿತು ಬಾಲಕನ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನ ಮೆಲೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.