ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಈಕೆಗೆ ತುರ್ತಾಗಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದ ಕಾರಣ ಆಕೆಯನ್ನು ಜೀರೋ ಟ್ರಾಫಿಕ್ ಹಾಗೂ ಮೂರು ಆಂಬುಲೆನ್ಸ್ ಗಳನ್ನು ಬಳಸಿಕೊಂಡು ವಿಶೇಷವಾಗಿ ಕರೆದೊಯ್ಯಲಾಗಿದೆ. 

ಇದನ್ನೂ ಓದಿ: ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ದೂರು ದಾಖಲು

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 18 ವರ್ಷ ಪ್ರಾಯದ ಯುವತಿ ಪಿತ್ತಜನಕಾಂಗದ ಸಮಸ್ಯೆಯನ್ನು ಹೊಂದಿ ಈ ಸಂಬಂಧ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಕೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಬೇಕಿದ್ದ ಅಗತ್ಯವಿತ್ತು ಈ ಹಿನ್ನೆಲೆ ಮೂರು ಆಂಬುಲೆನ್ಸ್ ಗಳನ್ನು ಬಳಕೆ ಮಾಡಿ ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಆಕೆಯನ್ನು ಬೆಂಗಳೂರಿಗೆ ಕಳುಹಿಸುವ ಏರ್ಪಾಡು ಮಾಡಲಾಗಿತ್ತು.

ನಗರದಾದ್ಯಂತ ಜೀರೋ ಟ್ರಾಫಿಕ್ ಮಾಡಲು, ಸರ್ವರೂ ಹೆಚ್ಚಿನ ಸಹಕಾರ ನೀಡಿದರು. ಮೂರು ಆಂಬುಲೆನ್ಸ್ ಗಳು ಒಂದರ ಹಿಂದೊಂದು ಝೀರೋ ಟ್ರಾಫಿಕ್ ನಲ್ಲಿ ತೆರಳುವುದನ್ನು ಜನರು ಕುತೂಹಲದಿಂದ ವೀಕ್ಷಿಸಿದರು.