ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಒಂದರಲ್ಲಿ ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಪ್ಯಾಕೆಟ್ ಹಾಲು ಕಳ್ಳತನ ನಡೆಸಿರುವ ಘಟನೆ ವರದಿಯಾಗಿದೆ. 

ಇದನ್ನೂ ಓದಿ : ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಉಚಿತ ದಂತ ತಪಾಸಣಾ ಶಿಬಿರ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಬೈಕ್ ನಲ್ಲಿ ಬುರ್ಖಾ ಧರಿಸಿ ಆಗಮಿಸಿದ ಇಬ್ಬರು ಕಳ್ಳರು ಪಟ್ಟಣದ ಅಂಗಡಿ ಮುಂಭಾಗದಲ್ಲಿಟ್ಟಿದ್ದ ಹಾಲಿನ ಕ್ರೇಟ್ ಗಳಿಂದ ಹಾಲನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. 

ಲೀಟರ್ ಹಾಲಿನಲ್ಲಿ ದೊರೆಯುವುದು ಕೇವಲ ರೂಪಾಯಿಗಳ ಲಾಭ ಆದರೆ ಈ ಕಳ್ಳರು ಎಗರಿಸಿರುವ ಹಾಲಿನ ಪ್ರಮಾಣದಿಂದ ನಷ್ಟ ಅನುಭವಿಸಿರುವ ಮಾಲೀಕರು ತಮಗೆ ಕಳ್ಳರ ಕೃತ್ಯದಿಂದ ಉಂಟಾಗಿರುವ ನಷ್ಟದ ಕುರಿತು ತಿಳಿಸಿದ್ದಾರೆ. 

ಈ ಹಿಂದಿನಿಂದಲೂ ಈ ಭಾಗದಲ್ಲಿ ನಡೆಯುತ್ತಿದ್ದ ಕಳ್ಳತನದ ನಿಯಂತ್ರಣಕ್ಕಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು ಆದರೆ ಕ್ಯಾಮೆರಾ ಅಳವಡಿಕೆಯ ನಂತರವೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ಮುಂದುವರೆಸಿರುವುದು ನಮ್ಮನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದರು. ಬುರ್ಖಾ ಧರಿಸಿ ಬೈಕ್ ಓಡಿಸಿಕೊಂಡು ಬಂದ ಇಬ್ಬರು ಕಳ್ಳರು ಯಾರೆಂದು ಇನ್ನಷ್ಟೇ ಪತ್ತೆಯಾಗಬೇಕಿದೆ.

ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಸೂಪರ್ ವೈಸರ್ ಎಸಿಬಿ ಅಧಿಕಾರಿಗಳ ಬಲೆಗೆ : 

ಮೂಡಿಗೆರೆ : ಲಂಚ ಪಡೆಯುತ್ತಿದ್ದ ವೇಳೆ ಮೂಡಿಗೆರೆಯ ತಾಲೂಕು ಕಛೇರಿ ಸೂಪರ್ವೈಸರ್ ಓರ್ವನನ್ನು ಹಣ ಪಡೆಯುವ ವೇಳೆಯಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಛೇರಿಯಲ್ಲಿ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ  ಪ್ರಕಾಶ್ ಎಂಬ ಅಧಿಕಾರಿಯು, ಗೋಣಿಬೀಡು ಗ್ರಾಮದ ಮಹೇಶ್ ಎಂಬುವವರಿಂದ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣ ಪಡೆಯುವಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಕಾಶ್ ನ್ನು ಸೆರೆಹಿಡಿದಿದ್ದಾರೆ. 

ಈ ಕಾರ್ಯಾಚರಣೆಯು ಮೂಡಿಗೆರೆಯ ತಾಲೂಕು ಕಛೇರಿ ಬಳಿಯಲ್ಲಿ ನಡೆದಿದ್ದು, ಎಸಿಬಿ ಎಸ್ಪಿ ಸೈಮನ್, ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ಭಾಗಿಯಾಗಿದ್ದರು. ಈ ಸಂಬಂಧ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.