ಚಿಕ್ಕಮಗಳೂರಿನಲ್ಲಿ ಎಸಿಬಿ ರೈಡ್ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ :

ರಾಜ್ಯಾದ್ಯಂತ ಅನೇಕ ಅಧಿಕಾರಿಗಳ ಮನೆಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳ ಮನೆಗಳಿಗೆ ದಾಳಿ ನಡೆಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿರುವ SDA ಅಧಿಕಾರಿ ತಿಮ್ಮಯ್ಯ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ತಿಮ್ಮಯ್ಯ ಅವರಿಗೆ ಸಂಬಂಧಿಸಿದ ಅವರ ತಂದೆಯ ಬಸೂರು ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಲ್ಲದೆ ತಿಮ್ಮಯ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಜಂಪುರ ಪುರಸಭೆ ಕಚೇರಿ ಮೇಲೂ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ 8 ಅಧಿಕ ಹಣ ಗಳಿಸಿರುವ ಆರೋಪ ತಿಮ್ಮಯ್ಯ ಅವರ ಮೇಲಿತ್ತು, ಈ ಸಂಬಂಧ ದಾಳಿನಡೆಸಿರುವ ಎಸಿಬಿ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ ಅವರ ಬಳಿಯಿದ್ದ ಕಾಗದ ಪತ್ರಗಳು, ಒಡವೆ ಹಣವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.

ಉದ್ಯೋಗಾವಕಾಶ ಹಾಗೂ ತಜ್ಞರಿಂದ ವೃತ್ತಿ ಶಿಕ್ಷಣ ಕುರಿತಂತೆ ಕೋರ್ಸ್ ಕುರಿತು ಮಾಹಿತಿ ಕಾರ್ಯಗಾರ :

ಶೃಂಗೇರಿ : ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ, ಇಂಜಿನಿಯರಿಂಗ್, ಮೆಡಿಕಲ್ ವಿಭಾಗ, ಆಯುರ್ವೇದ, ಪ್ಯಾರಾ ಮೆಡಿಕಲ್, ಹೋಟೆಲ್ ಮ್ಯಾನೇಜ್ಮೆಂಟ್, ನರ್ಸಿಂಗ್, ಬಿಸಿಎ,ಸೇರಿದಂತೆ ಹೆಚ್ಚಿನ ಕೋರ್ಸ್ ಗಳ ಕುರಿತಾಗಿ ಮಂಗಳೂರು ಹಾಗೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ನುರಿತ ತಜ್ಞರಿಂದ ಕೋರ್ಸ್ ಮತ್ತು ಉದ್ಯೋಗಾವಕಾಶದ ಮಾಹಿತಿ, ಜೊತೆಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸ್ಕಾಲರ್ಶಿಪ್, ಸರ್ಕಾರದ ಉಚಿತ ಹಾಸ್ಟೆಲ್ , ಎಜುಕೇಶನ್ ಲೋನ್ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ. ಜೂನ್ 19 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಶೃಂಗೇರಿಯ ಗೌರೀಶಂಕರ ಸಭಾಂಗಣದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಆಸಕ್ತರು ಹಾಗೂ ಯಾವುದೇ ಊರಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಜೆಸಿಐ ಪದಾಧಿಕಾರಿಗಳು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

7892715641, 9964072897, 8277451466


ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಜರಂಗದಳದಿಂದ ಮನವಿ :

ಕೆಲ ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಭಗವಾನ್ ಶ್ರೀರಾಮನ ಕುರುಹು ಹಬ್ಬವಾದ ಪ್ರತಿಪದ ಮತ್ತು ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ದಾಳಿಗಳನ್ನು ನಡೆಸಲಾಯಿತು. ಇದರಿಂದಾಗಿ ಹಲವೆಡೆ ಕರ್ಫ್ಯೂ ವಿಧಿಸಲಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜವು ತಾಳ್ಮೆಯನ್ನು ಕಾಯ್ದುಕೊಂಡಿತು, ಇದರಿಂದಾಗಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ನಂತರ ಕೆಲವೆಡೆ ಶ್ರೀ ಹನುಮ ಜಯಂತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆಯಿತು. ಹಿಂದೂ ಸಮಾಜವು ತಮ್ಮ ದೇಶದಲ್ಲಿ ತಮ್ಮ ದೇವತೆಗಳ ಮೆರವಣಿಗೆಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆದವು. ಇತ್ತೀಚೆಗಷ್ಟೇ ಕಳೆದ ಎರಡು ಶುಕ್ರವಾರದಂದು ಸಹೋದರಿಯಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಹೇಳಿಕೆಯಿಂದ ಮಸೀದಿಗಳಿಂದ ಹೊರ ಬಂದು ಹಿಂದೂ ಸಮಾಜದ ಮೇಲೆ ದಾಳಿ, ಹಿಂದೂಗಳ ಮನೆಗಳು, ಅಂಗಡಿಗಳು, ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಸರ್ಕಾರಿ ಆಸ್ತಿ ಮತ್ತು ದೇವಸ್ಥಾನಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪೊಲೀಸ್ ಪಡೆಗಳ ಮೇಲೂ ದಾಳಿ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಜಿಹಾದಿಗಳು ಕಾನೂನನ್ನು ಕೈಗೆತ್ತಿಕೊಂಡು ಅಶಾಂತಿ ಗಲಭೆ ಮಾಡುತ್ತಿದ್ದಾರೆ. 

ಬಂಗಾಳ, ಕೇರಳದಂತಹ ರಾಜ್ಯಗಳ ಸರಕಾರಗಳು ಈ ಇಸ್ಲಾಮಿಕ್ ಜಿಹಾದಿಗಳೊಂದಿಗೆ ನಿಂತಿರುವುದು ಕಂಡುಬರುತ್ತದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ರಂಗನಾಥ, ಜಿಲ್ಲಾ ಕಾರ್ಯದರ್ಶಿ. ಯೋಗೇಶ್ ರಾಜ್ ಅರಸ್, ಜಿಲ್ಲಾ ಉಪಾಧ್ಯಕ್ಷರು. ನಗರ ಸಂಚಾಲಕ ಶ್ಯಾಮ್ ವಿ ಗೌಡ, ಗುರು ಜಿಲ್ಲಾ ವಿದ್ಯಾರ್ಥಿ ಪ್ರಮುಖ್, ಸುನಿಲ್ ರೋಹನ್ ಶಾಮ್ ಕೋಟೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಬದಲಾಯಿಸುತ್ತಿದ್ದ ಖತರ್ನಾಕ್ ಕಳ್ಳನ  ಬಂಧನ

ಮೂಡಿಗೆರೆಯ ಕಾಫಿ ಬೆಳೆಗಾರರಾದ ಉದಯ್ ಕುಮಾರ್ ಎಂಬುವವರು ಮೂಡಿಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಯಾರೋ ಅಪರಿಚಿತ ವ್ಯಕ್ತಿ ನನಗೆ ಹಣವನ್ನು ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ನನ್ನ ಕರ್ನಾಟಕ ಬ್ಯಾಂಕ್ ನ ಎಟಿಎಂ ಕಾರ್ಡ್ ನ್ನು ಬದಲಾಯಿಸಿಕೊಂಡು ಹೋಗಿ ಚಿಕ್ಕಮಗಳೂರು ಎಟಿಎಂನಲ್ಲಿ 25 ಸಾವಿರ ರೂ ಹಣವನ್ನು ಡ್ರಾ ಮಾಡಿದ್ಲಲ್ಲದೇ ಚಿಕ್ಕಮಗಳೂರಿನ ಅರಹಮ್ ಜ್ಯುವೆಲರಿ ಶಾಪ್ ನಲ್ಲಿ 75 ಸಾವಿರ ರೂ ಹಣವನ್ನು ಸ್ಟೈಪ್ ಮಾಡಿ ಚಿನ್ನವನ್ನು ಕರೀದಿ ಮಾಡಿ ನನಗೆ ಮೋಸ ಮಾಡಿರುತ್ತಾನೆ ಎಂದು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರು ಆದರಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಪ್ರಕರಣವನ್ನು ಮಾನ್ಯ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಉಪ ಅಧೀಕ್ಷಕರು. ಇವರ ಮಾರ್ಗದರ್ಶನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್ ಅವರ ನೇತೃತ್ವದಲ್ಲಿ ಮೂಡಿಗೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದರ್ಶ ಪೊಲೀಸ್ ಸಿಬ್ಬಂದಿಗಳಾದ ಗಿರೀಶ್. ಲೋಹಿತ್. ವಸಂತ್. ಮನು ಕುಮಾರ್. ಇವರ ತಂಡವು ಮಡಿಕೇರಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ. ತರೀಕೆರೆ. ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ ಆರ್ ಪೇಟೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಹಾಗೂ ಬೆಂಗಳೂರಿನಲ್ಲಿ ಎಟಿಎಂ ಗ್ರಾಹಕರಿಗೆ ಇದೇ ರೀತಿಯಲ್ಲಿ ಮೋಸ ಮಾಡಿ ಎಟಿಎಂ ಕಾರ್ಡ್ ಮೋಸದಿಂದ ಬದಲಾಯಿಸಿ ಎಟಿಎಂ ಮಿಷನ್ ಗಳಲ್ಲಿ ಹಣ ಪಡೆಯುವುದರ ಜೊತೆಗೆ ಜ್ಯುವೆಲರಿ ಗಳಲ್ಲಿ ಎಟಿಎಂ ಸ್ಟೈಪ್ ಮಾಡಿ ಚಿನ್ನವನ್ನು ಖರೀದಿಸಿರುತ್ತಾನೆ. ಈತ ಓರ್ವ ಅಂತರಾಜ್ಯ ಕಳ್ಳನಾಗಿದ್ದು ಈತನ ಮೇಲೆ ಈ ಹಿಂದೆ ತಮಿಳುನಾಡು ರಾಜ್ಯದಲ್ಲಿ ಒಟ್ಟು 11 ಕೇಸುಗಳು ವಿಚಾರಣೆ ಹಂತದಲ್ಲಿ ಇರುತ್ತವೆ. ಆರೋಪಿ ಹೆಸರು ತಂಬಿರಜು.

ಎಟಿಎಂ ಬಳಸುವ ಗ್ರಾಹಕರು ತಮ್ಮ ಪಿನ್ ಸಂಖ್ಯೆಯನ್ನು ಅಥವಾ ಎಟಿಎಂ ಕಾರ್ಡ್ ಅನ್ನು ಅಪರಿಚಿತರಿಗೆ ನೀಡದೆ ಜಾಗರೂಕತೆ ವಹಿಸಬೇಕು.


KSRTC ಬಸ್ ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ :

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದು ಹೋಗುವ ಸಮಯದಲ್ಲಿ ಸೂಕ್ತವಾದ ಬಸ್ ವ್ಯವಸ್ಥೆ ಇಲ್ಲವೆಂದು ಆರೋಪಿಸಿ ಹಾಗೂ ಕಾಲೇಜಿನ ಸಮಯಕ್ಕೆ ಹೆಚ್ಚುವರಿ ಬಸ್ ಗಳನ್ನು ಬಿಡಬೇಕೆಂದು ಆಗ್ರಹಿಸಿ ಇಂದು ಶೃಂಗೇರಿಯ ಜೆಸಿಬಿಎಂ ಕಾಲೇಜು ವಿದ್ಯಾರ್ಥಿಗಳು KSRTC ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಬಿಡುವುದಿಲ್ಲ, ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ತುಂಬಿಕೊಂಡು ಬರುತ್ತಿದ್ದಾರೆ, ಕೆಲವೊಂದು ಬಸ್ಸುಗಳಲ್ಲಿ ನಿಲ್ಲಲೂ ಜಾಗವಿರುವುದಿಲ್ಲ ಇದರಿಂದಾಗಿ ಕಾಲೇಜಿಗೆ ಬರಲು ತಡವಾಗುತ್ತಿದೆ, ಆರು ಬಾರಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಶಾಸಕರಿಗೆ, ksrtc ಸಂಸ್ಥೆಯ ಅಧಿಕಾರಿಗಳಿಗೆ ತಮ್ಮ ಸಮಸ್ಯೆಯ ಕುರಿತಾಗಿ ಮನವಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ಮುಂದಿನ ಹತ್ತು ದಿನಗಳೊಳಗೆ ಬಸ್ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದರು.


ಅಂಬೇಡ್ಕರ್ ಶಾಲೆ ಉದ್ಘಾಟನೆ :

ಸುಮಾರು 24.22 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿ ನಿರ್ಮಾಣಗೊಂಡ ಅಂಬೇಡ್ಕರ್ ವಸತಿ ಶಾಲೆಯ ಉದ್ಗಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರದಲ್ಲಿ ನೆರವೇರಿಸಿದ್ದು ಇಂದು ಶಾಲಾ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರು ಇಂದು ಪ್ರವೇಶ ಮಾಡುವ ಉದ್ಗಾಟನೆ ನೆರವೇರಿಸಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.


ಶಿವಮೊಗ್ಗ : 

ಅಧ್ಯಕ್ಷೆ ಸ್ಥಾನ ದೊರೆಯದ ಕಾರಣಕ್ಕೆ ವಿಷ ಸೇವನೆ :

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೋಣಭಘಟ್ಟದಲ್ಲಿ ಈ ಘಟನೆ ನಡೆದಿದ್ದು ಕೌಸರ್ ಬಾನು ಎಂಬ ಐವತ್ತು ವರ್ಷ ಪ್ರಾಯದ ಗ್ರಾಮ ಪಂಚಾಯತ್ ಸದಸ್ಯೆ ವಿಷ ಕುಡಿದಿದ್ದಾರೆ.ದೊಣಬಘಟ್ಟ ಗ್ರಾಮ ಪಂಚಾಯತ್ ನ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಸಲುವಾಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಈ ಪ್ರಕಿಯೆ ನಡೆದಿದ್ದು ಹೈಡ್ರಾಮಾಕ್ಕೆ ಎಡೆಮಾಡಿತ್ತು,ಅಧ್ಯಕ್ಷರಾಗಿ ಖಲೀಲ್, ಉಪಾಧ್ಯಕ್ಷರಾಗಿ ಮಾಲಮ್ಮ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಸರ್ ಭಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕೌಸರ್ ಬಾನು ಈ ಹಿಂದೆ ಖಲೀಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು 14 ತಿಂಗಳು ನಾನು ಬಳಿಕದ 14 ತಿಂಗಳು ನೀವು ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡುವುದು ಎಂಬುದಾಗಿ ನಿರ್ಧಾರಕ್ಕೆ ಬಂದಿದ್ದರು.ಆದರೆ ಮಾತಿನಂತೆ ಮುಂದಿನ ಬೆಳವಣಿಗೆಗಳು ನಡೆಯದ ಕಾರಣಕ್ಕಾಗಿ ಬೇಸರಗೊಂಡ ಕೌಸರ್ ಬಾನು ಬೇಸರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಹಾಸನ : ಭೀಕರ ರಸ್ತೆ ಅಪಘಾತ ; ಇಬ್ಬರ ದುರ್ಮರಣ

ಬಸ್ ಹಾಗೂ ಒಮಿನಿ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ದಂಪತಿಗಳ ಜೀವವನ್ನು ಕಸಿದುಕೊಂಡಿದೆ. ಸಕಲೇಶಪುರದಿಂದ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ಚಂದ್ರಶೇಖರ್ ಹಾಗೂ ಶಾರದಾ ಮೃತಪಟ್ಟಿದ್ದಾರೆ. ಮಗಳ ಮನೆಯಿಂದ ಪೂಜೆ ಮುಗಿಸಿ ತೆರಳುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.