ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಶ್ರೀ ಜೆ.ಸಿ.ಬಿ.ಎಂ ಕಾಲೇಜು ವಿದ್ಯಾರ್ಥಿನಿ ನಕ್ಷಾ 98 ಶೇ. ಅಂಕಗಳನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಹಾಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ಎಸಿಬಿ ಬಲೆಗೆ ಬಿದ್ದ ಕಡೂರಿನ ಕುಬೇರನ ಪುತ್ರನ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್
ವಾಣಿಜ್ಯ ವಿಭಾಗದಲ್ಲಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿನಿ ನಕ್ಷಾ ಕೆ.ಆರ್ 98.67% (592 ಅಂಕ) ಪಡೆದು ಶೃಂಗೇರಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಶ್ರೀ ರಕ್ಷಿತ್ ಜಿ.ಎಂ 585 ಅಂಕಗಳನ್ನು ಪಡೆಯುವುದರ ಮೂಲಕ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಶೃಂಗೇರಿಯ ಜೆಸಿಬಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಮದನ್ ಎ.ಜಿ 585 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು, ವಿಜ್ಞಾನ ವಿಭಾಗದಲ್ಲಿ ಶ್ರೀ ವಿದ್ಯಾ ಎ.ಎಸ್ ಹಾಗೂ ಭೂಮಿಕಾ.ಡಿ 583 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಹಾಗೂ ಪೋಷಕರಿಗೆ, ಗುರುಗಳಿಗೆ ಕೀರ್ತಿಯನ್ನು ತಂದಿರುತ್ತಾರೆ. ಶೇ 92 % ಫಲಿತಾಂಶ ಈ ಬಾರಿ ಜೆಸಿಬಿಎಂ ಕಾಲೇಜಿಗೆ ದೊರಕಿದ್ದು ಈ ನಿಟ್ಟಿನಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಬಾರಿ ಜೆಸಿಬಿಎಂ ಕಾಲೇಜಿನ 272 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 250 ಜನ ಉತ್ತೀರ್ಣರಾಗಿದ್ದಾರೆ, ಚಿಕ್ಕಮಗಳೂರು ಜಿಲ್ಲೆಗೆ ಈ ಬಾರಿ 69.42 % ಫಲಿತಾಂಶ ಬಂದಿದ್ದು ರಾಜ್ಯದಲ್ಲಿ 09 ನೆಯ ಸ್ಥಾನ ಕಾಫಿನಾಡು ಚಿಕ್ಕಮಗಳೂರಿಗೆ ದೊರಕಿದೆ.
ನಮ್ಮ ಕಾಲೇಜು ಉತ್ತಮವಾದ ಫಲಿತಾಂಶವನ್ನು ಪಡೆದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಸಮಾರು 64 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕು.ನಕ್ಷಾ ಕೆ.ಆರ್ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ. ವಿಜ್ಞಾನ ವಿಭಾಗದಲ್ಲಿ ಉತ್ತಮವಾದ ಫಲಿತಾಂಶ ಬಂದಿರುವುದು ಸಂತೋಷವಾಗಿದೆ. ಫಲಿತಾಂಶ ಬರಲು ಮಾರ್ಗದರ್ಶನ ನೀಡಿದ ಪ್ರಾಂಶುಪಾಲರಾದ ಡಾ. ಸ್ವಾಮಿ ಎಂ ರವರಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ, ಪೋಷಕರಿಗೆ, ವಿಧ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. - ಪ್ರಶಾಂತ ಎ.ಜಿ, ಸಂಚಾಲಕರು, ಶ್ರೀ ಜೆ.ಸಿ.ಬಿ.ಎಂ ಕಾಲೇಜು, ಶ್ರಂಗೇರಿ.
ಸರ್ಕಾರಿ ಪಿಯು ಕಾಲೇಜಿಗೆ ಶಶಾಂಕ್ ಪ್ರಥಮ :
ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶಶಾಂಕ B.S 566 (94%) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ, ಕಲಾ ವಿಭಾಗದಲ್ಲಿ ಲಕ್ಷ್ಮೀಶ 522 (87%) ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳೆಲ್ಲರಿಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಆತ್ಮವಿಶ್ವಾದಿಂದ ಮುನ್ನಡೆಯಬೇಕು. ಎಲ್ಲಾ ವಿದ್ಯಾರ್ಥಿಗಳೆಲ್ಲರಿಗೂ ಅಭಿನಂದನೆಗಳು. - ಅರುಣ್ ಕುಮಾರ್, ಪ್ರಾಂಶುಪಾಲರು, ಸರ್ಕಾರಿ ಪಿಯು ಕಾಲೇಜು, ಶೃಂಗೇರಿ
ನುರಿತ ತಜ್ಞರಿಂದ ಉದ್ಯೋಗಾವಕಾಶ ಮಾಹಿತಿ ಹಾಗೂ ತಜ್ಞರಿಂದ ವೃತ್ತಿ ಶಿಕ್ಷಣ ಕುರಿತಂತೆ ಕೋರ್ಸ್ ಕುರಿತು ಮಾಹಿತಿ ಕಾರ್ಯಗಾರ :
ಶೃಂಗೇರಿ : ದ್ವಿತೀಯ ಪಿಯುಸಿ ಮುಗಿಸಿ ನಂತರದಲ್ಲಿ ಏನು ಎಂಬ ಪ್ರಶ್ನೆಯೊಂದಿಗಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಮುಂದೆ ಯಾವ ರೀತಿಯ ಶಿಕ್ಷಣವನ್ನು ಪಡೆಯಬೇಕು ಅಥವಾ ಯಾವ ರೀತಿಯ ವೃತ್ತಿ ಪರವಾದ ಕೋರ್ಸ್ ಮಾಡಬೇಕೆಂಬುದಕ್ಕೆ ಸಲಹೆ ನೀಡಿ ಅವರ ಪೂರಕ ಕಲಿಕೆ ಅಥವಾ ವೃತ್ತಿ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಶೃಂಗೇರಿಯ ಜೆಸಿಐ ಸಂಸ್ಥೆಯು ಮಾಹಿತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ.
ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ, ಇಂಜಿನಿಯರಿಂಗ್, ಮೆಡಿಕಲ್ ವಿಭಾಗ, ಆಯುರ್ವೇದ, ಪ್ಯಾರಾ ಮೆಡಿಕಲ್, ಹೋಟೆಲ್ ಮ್ಯಾನೇಜ್ಮೆಂಟ್, ನರ್ಸಿಂಗ್, ಬಿಸಿಎ,ಸೇರಿದಂತೆ ಹೆಚ್ಚಿನ ಕೋರ್ಸ್ ಗಳ ಕುರಿತಾಗಿ ಮಂಗಳೂರು ಹಾಗೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ನುರಿತ ತಜ್ಞರಿಂದ ಕೋರ್ಸ್ ಮತ್ತು ಉದ್ಯೋಗಾವಕಾಶದ ಮಾಹಿತಿ, ಜೊತೆಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸ್ಕಾಲರ್ಶಿಪ್, ಸರ್ಕಾರದ ಉಚಿತ ಹಾಸ್ಟೆಲ್ , ಎಜುಕೇಶನ್ ಲೋನ್ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ.
ಜೂನ್ 19 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಶೃಂಗೇರಿಯ ಗೌರೀಶಂಕರ ಸಭಾಂಗಣದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಆಸಕ್ತರು ಹಾಗೂ ಯಾವುದೇ ಊರಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಜೆಸಿಐ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
7892715641, 9964072897, 8277451466




0 Comments