ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿ ರಾಷ್ಟ್ರಮಟ್ಟಕ್ಕೆ ಶೃಂಗೇರಿಯ ವಿದ್ಯಾನಗರ ಶಾಲೆಯ ಶಿಕ್ಷಕ Y.J ರಾಮೇಗೌಡ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು : ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಆರು ಜನರನ್ನು ಸಾವಿರಾರು ರೂಪಾಯಿ ಹಣದೊಂದಿಗೆ ವಶಕ್ಕೆ ಪಡೆದ ಪೊಲೀಸರು
ಅತೀ ಹೆಚ್ಚಿನ ಸ್ಪರ್ಧೆ ಹಾಗೂ ಹೆಚ್ಚಿನ ಸಾಮರ್ಥ್ಯ ಹೊಂದಿದ್ದ ಸ್ಪರ್ಧಾಳುಗಳ ನಡುವೆ ಕ್ರೀಡೆಯಲ್ಲಿ ಭಾಗವಹಿಸಿ ವಿಜಯ ಸಾಧಿಸಿರುವುದು ಮನಸ್ಸಿಗೆ ಸಂತಸ ನೀಡಿದೆ. ಸತತ ಮೂರನೇ ಬಾರಿಗೆ ಈ ಸಾಧನೆಯನ್ನು ಮಾಡಿದ್ದೇನೆ. ಸಹಕರಿಸಿದ ಪ್ರತಿಯೋರ್ವರಿಗೂ ಧನ್ಯವಾದಗಳು - Y.J ರಾಮೇಗೌಡ ಶಿಕ್ಷಕರು, ವಿದ್ಯಾನಗರ ಶಾಲೆ ಶೃಂಗೇರಿ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶೃಂಗೇರಿ ತಾಲೂಕಿನ ವಿದ್ಯಾನಗರ ಶಾಲೆಯ ಶಿಕ್ಷಕರಾದ Y.J ರಾಮೇಗೌಡ ಅವರು ಡಿಸ್ಕಸ್ ಥ್ರೋ (ತಟ್ಟೆ ಎಸೆತ) ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪರಿಪಕ್ವವಾಗುವಂತೆ ಹೇಳಿಕೊಡುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿರುವ ಶಿಕ್ಷಕ ರಾಮೇಗೌಡ ಅವರನ್ನು ಅನೇಕರು ಅಭಿನಂದಿಸಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.
ನೆಚ್ಚಿನ ಶಿಕ್ಷಕ ರಾಮೇಗೌಡ ಅವರಿಗೆ ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕವೃಂದ, ಹಾಗೂ ಶೃಂಗೇರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಚಂದ್ರಶೇಖರ್ ನಾಯ್ಕ್ ಎಸ್,
ಕಾರ್ಯದರ್ಶಿ ಶ್ರೀ ಶಶಿಧರ್, ರಾಜ್ಯ ಪರಿಷತ್ ಸದಸ್ಯರಾದ ಶ್ರೀ ರವೀಂದ್ರ ಎಂ.ಬಿ, ಖಜಾಂಚಿ ಶ್ರೀ ಸೋಮಯ್ಯ ಹಾಗೂ ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





0 Comments