ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ದುರ್ಮರಣವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. 

ಇದನ್ನೂ ಓದಿ : ಶೃಂಗೇರಿ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ; ಮಹಿಳೆಗೆ ಗಂಭೀರಗಾಯ

ಚಿಕ್ಕಮಗಳೂರು ಜಿಲ್ಲೆಯ ಹಿರೆಗೌಜ ಸಮೀಪ ಈ ದುರಂತ ಸಂಭವಿಸಿದ್ದು ಸೇತುವೆಗೆ ಕಾರು ಗುದ್ದಿದ ಪರಿಣಾಮ ದೊಡ್ಡದೊಂದು ಅನಾಹುತ ಸಂಭವಿಸಿದೆ. ಕಡೂರು ಕಡೆಯಿಂದ ಕಾರ್ ಚಿಕ್ಕಮಗಳೂರಿನ ಕಡೆಗೆ ತೆರಳುತ್ತಿದ್ದ ವೇಳೆಯಲ್ಲಿ ಈ ದುರಂತ ನಡೆದಿದೆ. 

ಹೊಂಗೆಕಟ್ಟೆ ತಿರುವಿನಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಕೆಳಬಿದ್ದಿದೆ. ಅಪಘಾತದ ತೀವ್ರತೆಗೆ ಚಾಲಕ ಗಂಭೀರವಾಗಿ ಗಾಯಗೊಂಡಿದ್ದ, ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಗಂಭೀರವಾಗಿ ಗಾಯಕ್ಕೀಡಾಗಿದ್ದ ಚಾಲಕ ಚಿಕಿತ್ಸೆಗೆ ಸೂಕ್ತ ಸ್ಪಂದನೆ ನೀಡದೇ ದುರ್ಮರಣವನ್ನಪ್ಪಿದ್ದಾನೆ.