ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದಲ್ಲಿರುವ ಬಾಳೆಲೆ ವ್ಯಾಪ್ತಿಯ ಸುಳುಗೋಡುವಿನ ಕಾಫಿ ತೋಟದಲ್ಲಿ ಆನೆಯು ಮೃತಪಟ್ಟಿದೆ.
ಮೃತಪಟ್ಟಿರುವುದು ಹೆಣ್ಣಾನೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದು ಆನೆಯ ಸಾವಿಗೆ ಕಾರಣಗಳೇನು ಎಂದು ಆನೆಯ ಮರಣೋತ್ತರ ಪರೀಕ್ಷೆಯ ನಂತರದಲ್ಲಿ ತಿಳಿಯಲಿದೆ.
ಇದನ್ನೂ ಓದಿ : ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ
ಘಟನಾ ಸಂಬಂಧ ತಿತಿಮತಿ ವಲಯದ ಅರಣ್ಯ ಅಧಿಕಾರಿಗಳಾದ ಎಸಿಎಫ್ ಉತ್ತಪ್ಪ, ಆರ್.ಎಫ್ ಒ ಅಶೋಕ್ ಹುನಗುಂದ ಚೇತನ ಅವರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ.
ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ಯತ್ನಿಸಿದ ಇಬ್ಬರು ಸಿಐಡಿ ಪೊಲೀಸರ ಬಲೆಗೆ ; ಚಿಪ್ಪನ್ನು ವಶಕ್ಕೆ ಪಡೆದ ಅಧಿಕಾರಿಗಳು
ಕೊಡಗು : ಅಕ್ರಮವಾಗಿ ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.
ಕೊಡಗಿನ ತಾಳತ್ ಮನೆ ಜಂಕ್ಷನ್ ಬಳಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ಇಮ್ತಿಯಾಜ್ ಹಾಗೂ ಬಿ.ಮನೋಜ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ತಯಾರಾಗಿದ್ದರು ಎನ್ನಲಾಗಿದೆ. ಬಂಧಿತರಿಂದ 17.50 ಕೆಜಿ ತೂಕದ ಮುಳ್ಳು ಹಂದಿ ಚಿಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪಿಎಸೈ ಸಿ.ಯು ಸವಿ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :






0 Comments