ಮೂಡಿಗೆರೆ : ವ್ಯಕ್ತಿಯೋರ್ವ ಕಾಲುಜಾರಿ ಬಿದ್ದು ದುರ್ಮರಣವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅಲೇಕಾನ್ ಗ್ರಾಮದ ಗುಳಿಗ ದೈವದ ಗುಡಿಯ ಸಮೀಪ ಈ ಘಟನೆ ಸಂಭವಿಸಿದ್ದು, ಆಕಸ್ಮಿಕವಾಗಿ ಕಾಲುಜಾರಿದ ಪರಿಣಾಮ ವ್ಯಕ್ತಿಯು ಕೆಳಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತನನ್ನು ಬಾಳೂರಿನ ದರ್ಬಾರ್ ಪೇಟೆಯ ಗಾರೆ ಕೆಲಸ ಮಾಡುತ್ತಿದ್ದ 45 ವರ್ಷ ಪ್ರಾಯದ ರಾಜು ಎಂದು ಗುರುತಿಸಲಾಗಿದೆ. ಘಟನಾ ಸಂಬಂಧ ಆತನ ಸ್ನೇಹಿತರು ಹಾಗೂ ಪರಿಚಯಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು





0 Comments