ಕಡೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರಳಿವೆ. ಕಡೂರಿನ ಬ್ರಹ್ಮ ಸಮುದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಗಾಳಿ, ಮಳೆಯಿಂದಾಗಿ ಈ ಅನಾಹುತ ಸಂಭವಿಸಿದ್ದು ರೈತರು ಬೆಳೆದ ಟೊಮ್ಯಾಟೋ ಬೆಳೆ ಕೂಡ ನಾಶವಾಗಿದೆ. ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು ಅನೇಕರು ಈ ಮಳೆಯಿಂದಾಗಿ ನಷ್ಟ ಅನುಭವಿಸಿದರು.
ಕೃಷಿಕರಾದ ಯತೀಶ್ ಬಾಬು, ಈಶ್ವರಪ್ಪ, ರವಿಶಂಕರ್, ಲೋಕೇಶ್, ಸೇರಿದಂತೆ ಅನೇಕರು ಬೆಳೆದ ಬೆಳೆನಾಶವಾಗಿದ್ದು ಸರ್ಕಾರ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಾವು ಹೊಂದಿದ ಬೆಳೆನಾಶದ ಕುರಿತು ವರದಿ ತಯಾರಿಸಿ ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ವರ್ಗಾಯಿಸಬೇಕು. ಸಚಿವರು ಹಾಗೂ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ಬೆಳೆನಾಶ ಹೊಂದಿದ ರೈತರು ಕೋರಿದರು. ಈ ಹಿಂದೆ ಕಡೂರಿನ N.G ಕೃಷ್ಣಮೂರ್ತಿ ಎಂಬುವವರ ಎರಡು ಎಕರೆ ಟೊಮ್ಯಾಟೋ ಬೆಳೆ ಕೂಡ ಮಳೆಯಿಂದಾಗಿ ಸಂಪೂರ್ಣ ನಾಶವಾಗಿತ್ತು. ಒಕ್ಕೊರಲಿನಿಂದ ರೈತರು ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು





0 Comments