ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಕಾಲೇಜಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಗೆ ಅದೇ ಊರಿನ ಪಕ್ಕದ ಗ್ರಾಮಸ್ಥ ಬಲಾತ್ಕಾರ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿನಿ ಕಾಲೇಜಿನಿಂದ ತರಗತಿಯನ್ನು ಮುಗಿಸಿಕೊಂಡು ಹಿಂದಿರುಗಿ ಮನೆಗೆ ಬರುವ ಸಮಯದಲ್ಲಿ, ಊರಿನ ಪಕ್ಕದ ಗ್ರಾಮದವರಾದ ದೇವರಾಜ್ ಎಂಬುವವರು ನಿನ್ನನ್ನು ಊರಿಗೆ ಬಿಟ್ಟು ಹೋಗುತ್ತೇನೆಂದು ಹೇಳಿ, ಬೈಕಿನಲ್ಲಿ ಕುಳಿತ ಬಳಿಕ ಅವಾಚ್ಯವರ್ತನೆ ಮಾಡಿದ್ದಾನೆಂದು ಯುವತಿಯು ಆರೋಪಿಸಿದ್ದಾಳೆ.
ಈ ವರ್ತನೆಯನ್ನು ಕಂಡು ಆಕೆಯು ಬೈಕಿನಿಂದ ಇಳಿಯಲು ಪ್ರಯತ್ನಿಸಿದಾಗ ಮೈಮೇಲೆ ಕೈಹಾಕಿ ಬಲಾತ್ಕಾರ ನಡೆಸಲು ಯತ್ನಿಸಿದ್ದಾನೆ ಹಾಗೂ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಯುವತಿಯು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ ಹಾಗೂ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾಳೆ.
ಘಟನಾ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಕಾಮುಕನಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಕೋರಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು





0 Comments