ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ರಾಜಸ್ಥಾನದಲ್ಲಿ ಇಬ್ಬರು ಮುಸಲ್ಮಾನರು ಬರ್ಬರವಾಗಿ ಓರ್ವ ಹಿಂದೂ ಟೈಲರ್ ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಬಂಧಿತರಿಗೆ ಗುಂಡೇಟು ಅಥವಾ ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಿ ನಾಳೆ ಮೂಡಿಗೆರೆ ಸ್ವಯಂ ಪ್ರೇರಿತ ಬಂದ್ ಘೋಷಣೆಯಾಗಿದೆ.
ಇದನ್ನೂ ಓದಿ : ಬಜರಂಗದಳದ ಕಾರ್ಯಕರ್ತರ ಹರ್ಷನ ಕೊಲೆ ಪ್ರಕರಣ ; NIA ಅಧಿಕಾರಿಗಳ ದಾಳಿ, ಪರಿಶೀಲನೆ
ರಾಜಸ್ಥಾನದ ಉದಯಪುರದ ಕನ್ಹಯ್ಯ ಲಾಲ್ ಎಂಬ ಸಾಮಾನ್ಯ ಹಿಂದೂ ಟೈಲರ್ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಇದು ಸಹಿಸುವ ಕೃತ್ಯವಲ್ಲ ಇದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕೆಂದು ಆಗ್ರಹಿಸಿ ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ನಾಳೆ ನಾಗರೀಕರು ಮೂಡಿಗೆರೆ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದಾರೆ.
ರಾಷ್ಟ್ರದ್ರೋಹಿಗಳನ್ನು ಸಾರ್ವಜನಿಕವಾಗಿ ನೇಣು ಬಿಗಿದು ಅಥವಾ ಕಲ್ಲು ಹೊಡೆಸಿ ಅಥವಾ ಬಹಿರಂಗ ಗುಂಡೇಟು ಶಿಕ್ಷೆ ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹವರ ಅಟ್ಟಹಾಸ ನಮ್ಮ ದೇಶದಲ್ಲಿ ಮರುಕಳಿಸದಂತೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕೆಂಬ ಆಗ್ರಹವನ್ನು ಸಾರ್ವಜನಿಕರು ಮುಂದಿಟ್ಟುಕೊಂಡು ನಾಳೆ ಬಂದ್ ಗೆ ಕರೆ ನೀಡಿದ್ದಾರೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಪ್ರತಿಭಟನೆ ಅಡ್ಯಂತಾಯ ರಂಗಮಂದಿರದಿಂದ ನಡೆಯಲಿದೆ, ಬೆಳಗ್ಗೆ ಆರರಿಂದ ಸಂಜೆ ಆರು ಗಂಟೆಯವರೆಗೆ ಸಂಪೂರ್ಣ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.






0 Comments