ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ನೀರು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕದಿಯಲು ಕಳ್ಳರು ಯತ್ನಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಪತಿ ಸಾವು ಪತ್ನಿಯ ಸ್ಥಿತಿ ಗಂಭೀರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ಧಾಪುರದಲ್ಲಿ ಈ ಕೃತ್ಯ ನಡೆದಿದ್ದು, ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ ಕಾರಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಬಳಿಗೆ ತೆರಳಿ ನೀರು ಕೇಳಿದ್ದಾರೆ. ಈ ಸಮಯದಲ್ಲಿ ನೀರು ತರಲೆಂದು ಮಹಿಳೆ ತೆರಳಿದಾಗ ಓರ್ವ ಕಾರ್ ಒಳಗೆ ಕುಳಿತು ಹೊರಡಲು ತಯಾರಾಗಿದ್ದಾನೆ, ಮಹಿಳೆ ನೀರು ತಂದ ಕೂಡಲೇ ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಲು ಕಳ್ಳ ಯತ್ನಿಸಿದ್ದಾನೆ.
ಕೂಡಲೇ ಮಹಿಳೆಯು ಕಿರುಚಾಡಿದಾಗ ಅಕ್ಕ ಪಕ್ಕದಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ, ಈ ಸಂದರ್ಭದಲ್ಲಿ ಆತನು ಓಡಿ ಹೋಗಿದ್ದು ಕಾರಿನಲ್ಲಿದ್ದ ಇನ್ನೋರ್ವ ಎಲ್ಲೂ ಹೋಗಲಾರದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳು ಬಯಲುಸೀಮೆ ಮೂಲದವರಾಗಿದ್ದು, ಈ ಭಾಗದಲ್ಲಿ ಜೆಸಿಬಿ ಕೆಲಸವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಹಿಂದೆಯೂ ಕೂಡ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ದರೋಡೆ ನಡೆಸಲು ಯತ್ನಿಸಿದ್ದರು, ಈ ಘಟನೆಯ ಕುರಿತಾಗಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿರುವ ಈ ಸಂದರ್ಭದಲ್ಲಿ ಇನ್ನೊಂದು ಕಳ್ಳತನದ ಯತ್ನವು ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಈ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಕಾರ್ ಕೋಣಂದೂರು ಮೂಲದ ವ್ಯಕ್ತಿಯೋರ್ವರದ್ದು ಎನ್ನಲಾಗಿದ್ದು ಯಾವ ಕಾರಣಕ್ಕಾಗಿ ಕಾರ್ ತಂದಿದ್ದರು ಎಂದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
ಈ ಭಾಗದಲ್ಲಿ ಕೆಲಸ ಮಾಡುವ ನೆಪದಲ್ಲಿ ಬೇರೆ ಬೇರೆ ಊರುಗಳಿಂದ ಅನೇಕರು ಬರುತ್ತಿದ್ದು ಅವರುಗಳ ಪರಿಚಯ ಹಾಗೂ ಚಲನವಲನಗಳ ಮೇಲೆ ಯಾರಿಗೂ ಹೆಚ್ಚಿನ ಮಾಹಿತಿಗಳಿಲ್ಲದೆ ಇರುವ ಕಾರಣ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತುದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಘಟನಾ ಸಂಬಂಧ ಆರೋಪಿಗಳಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ಆಶ್ರಯ ಸಮಿತಿ ವತಿಯಿಂದ ೨೬೦ ಹಕ್ಕುಪತ್ರ ವಿತರಣೆ :
ಶಿವಮೊಗ್ಗ : ಶಿವಮೊಗ್ಗದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇಂದು ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಶಿವಮೊಗ್ಗ ನಗರದ ವಿದ್ಯಾನಗರದ ಕಲ್ಲರ್ಟಿ, ಜಟ್ ಪಟ್ ನಗರದ ೨೬೦ ಜನರಿಗೆ ಹಕ್ಕು ಪತ್ರಗಳನ್ನು ಶಿವಮೊಗ್ಗದ ಶಾಸಕರಾದ ಕೆ.ಎಸ್ ಈಶ್ವರಪ್ಪ ಅವರು ವಿತರಿಸಿದರು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರವು ಮನೆ ಕಟ್ಟಿಕೊಂಡು ಜೀವನ ನಡೆಸಲು ಪೂರಕವಾದ ಹಣದ ಸಹಾಯವನ್ನು ನೀಡುತ್ತದೆ.
ಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ೩.೫೦ ಲಕ್ಷ ಹಣವನ್ನು ಉಚಿತವಾಗಿ ನೀಡುತ್ತದೆ. ಒಂದು ಲಕ್ಷ ರೂಪಾಯಿವರೆಗಿನ ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ, ಯೋಜನೆಯನ್ನು ಅರ್ಹರು ಬಳಸಿಕೊಳ್ಳಬೇಕೆಂದರು.
ಹಕ್ಕುಪತ್ರಗಳನ್ನು ಪಡೆದ ಈ ಭಾಗದಲ್ಲಿ ವಾಸಮಾಡುತ್ತಿದ್ದ ಜನರು ಸಂತಸವನ್ನು ವ್ಯಕ್ತಪಡಿಸಿದರು. ಹಕ್ಕುಪತ್ರಗಳ ವಿತರಣಾ ಸಂದರ್ಭದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ ಸೇರಿದಂತೆ ಮೊದಲಾದ ಪದಾಧಿಕಾರಿಗಳು ಶಾಸಕರೊಂದಿಗಿದ್ದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ: : https://forms.gle/APPtk8M3ZDk2oMka6
.jpg)




0 Comments