ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿಯೋರ್ವ ಸಿಇಟಿ ಪರೀಕ್ಷೆಗೆ ಮೊಬೈಲ್ ತೆಗೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ : ಎಸಿಬಿ ಬಲೆಗೆ ಬಿದ್ದ ಕಡೂರಿನ ಕುಬೇರನ ಪುತ್ರನ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್
ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೋರ್ವ ಮೊಬೈಲ್ ಫೋನನ್ನು ತನ್ನೊಡನೆ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಬಂದಿದ್ದಾನೆ. ಇದನ್ನು ಗಮನಿಸಿದ ಕೊಠಡಿಯ ಮೇಲ್ವೀಚಾರಕರು ಕೂಡಲೇ ಮೇಲಧಿಕಾರಿಗಳಿಗೆ ಈ ಸಂಬAಧ ಮಾಹಿತಿ ನೀಡಿ ಆತನು ಪರೀಕ್ಷೆ ಬರೆಯದಂತೆ ನಿರ್ಬಂಧ ಹೇರಿ ಪೊಲೀಸರಿಗೊಪ್ಪಿಸಿದ್ದಾರೆ.
ಹೆಚ್ಚಿನ ತಪಾಸಣೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅನುವುಮಾಡಿ ಕೊಟ್ಟರೂ ಕೂಡ, ಈ ರೀತಿಯಾಗಿ ಘಟನೆ ನಡೆದಿರುವುದು ಎಲ್ಲರಲ್ಲೂ ಪ್ರಶ್ನೆಯಾಗಿ ಮೂಡಿದೆ. ಘಟನಾ ಸಂಬAಧ ಪ್ರಕರಣದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯನ್ನು ಮೈಸೂರು ಮೂಲದವನು ಎನ್ನಲಾಗಿದೆ.




0 Comments