ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಲೂಟಿ ಮಾಡಿದ್ದ ಖದೀಮರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ : ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣವನ್ನು ದೋಚಿದ ಕಳ್ಳರು ; ಪ್ರಕರಣ ದಾಖಲು

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿ ಜೂನ್​ 12 ರಂದು ಬೀರುವಿನಲ್ಲಿದ್ದ 9 ರಿಂದ 10 ಲಕ್ಷ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದರು. ಸಿಸಿಟಿವಿ ಆಧಾರದ ಮೇಲೆ ಕಳ್ಳತನ ಮಾಡಿದ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಕುರ್ಬನ್ ಆಲಿ ಮತ್ತು ಮಹಿರುದ್ದೀನ್ ಆಲಿ ಬಂಧಿತ ಆರೋಪಿಗಳು.


ಬಂಧಿತರಿಂದ 11,70,000 ರೂಪಾಯಿ ಮೌಲ್ಯದ 247.1 ಗ್ರಾಂ ಚಿನ್ನಾಭರಣ ಹಾಗೂ ಪೀಚೆಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಡಗಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದ್ದು. ಈ ಪ್ರಕರಣಗಳಲ್ಲಿ ಅಸ್ಸಾಂ ಮೂಲದವರೇ ಹೆಚ್ಚಾಗಿ ಸಿಕ್ಕಿಬೀಳುತ್ತಿದ್ದಾರೆ. ಈ ವಲಸೆ ಕಾರ್ಮಿಕರನ್ನು ತೋಟದ ಕೃಷಿ ಕೆಲಸಕ್ಕಾಗಿ ಕರೆಸಲಾಗುತ್ತದೆ, ಕಡಿಮೆ ಸಂಬಳಕ್ಕೆ ಕೆಲವನ್ನರಸಿ ಬರುವ ಅವರು ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ಕಳ್ಳತನದಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ರೀತಿಯ ಪ್ರಕರಣಗಳು ಇನ್ನಷ್ಟು ಗಂಭೀರವಾಗುವ ಮೊದಲು ಕಾಫಿ ತೋಟದ ಮಾಲೀಕರು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. 

ಅಕ್ರಮ ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿದ ಚಿಕ್ಕಮಗಳೂರು ಪೊಲೀಸರು : 

ಚಿಕ್ಕಮಗಳೂರು : ಎಲ್ಲೆಡೆ ಪೊಲೀಸರು ರೌಡಿ ಶೀಟರ್ ಗಳ ಪರೇಡ್ ನಡೆಸುವುದು ಸಾಮಾನ್ಯ ಆದರೆ ಚಿಕ್ಕಮಗಳೂರಿನ ಪೊಲೀಸರು ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುವವರ ಪರೇಡ್ ನ್ನು ಇಂದು ಮಾಡಿದ್ದಾರೆ.


ಈ ಹಿಂದಿನಿಂದಲೂ ಚಿಕ್ಕಮಗಳೂರು ನಗರಸಭೆಯು ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಗೋಮಾಂಸವನ್ನು ಹಾಗೂ ಇದರಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದರು.

ಇದರಲ್ಲಿ ಕೆಲವರ ಶೆಡ್ ಗಳು ಹಾಗೂ ಅಕ್ರಮ ಗೋಮಾಂಸ ತಯಾರಿಕಾ ಸ್ಥಳಗಳ ಮೇಲೂ ಜೆಸಿಬಿ ಪ್ರಯೋಗ ನಡೆದಿತ್ತು. 

ಈ ಕುರಿತಾಗಿ ಅಕ್ರಮ ಗೋಮಾಂಸ ಮಾರಾಟಗಾರರಿಗೆ ಎಚ್ಚರಿಕೆ ನೀಡುವ ಸಲುವಾಗಿ ಇಂದು ಪೊಲೀಸರು 30 ಜನ ಗೋಮಾಂಸ ಮಾರಾಟಗಾರರ ಪರೇಡ್ ನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮ ಕೃತವನ್ನು ಮುಂದುವರೆಸಿದ್ದೇ ಆದಲ್ಲಿ ಕಠಿಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.