ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಾಕಿ ಇರುವ ಪಹಣಿ ತಿದ್ದುಪಡಿ ಹಾಗೂ ವಿಲೇವಾರಿ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಂದಾಯ ಅದಾಲತ್ ನ್ನು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜನೆ ನಡೆಸಲಾಗಿದೆ.
ಇದನ್ನೂ ಓದಿ : ಸ್ಕೂಟಿಯೊಳಗೆ ಪತ್ತೆಯಾದ ಹಾವು
ಚಿಕ್ಕಮಗಳೂರು ಉಪವಿಭಾಗ ವಾಪ್ತಿಯ ಶೃಂಗೇರಿ, ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ತಾಲೂಕುಗಳಲ್ಲಿ ಬಾಕಿಯಿರುವ ಪಹಣಿ ತಿದ್ದುಪಡಿ ವಿಲೇವಾರಿ ಕುರಿತಂತೆ ಹಿರಿಯ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ನಡೆಸಿ, ಆ ಸಂದರ್ಭಗಳಲ್ಲಿ 11ಇ, ಆರ್.ಟಿ.ಸಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಪ್ಪ ತಾಲೂಕಿನಲ್ಲಿ ದಿನಾಂಕ 17.06.2022 ರಂದು, ಕಳಸದ ತಾಲೂಕು ಕಛೇರಿಯಲ್ಲಿ ದಿನಾಂಕ ೨೧.೦೬.೨೦೨೨ ರಂದು, ಚಿಕ್ಕಮಗಳೂರಿನ ಕಳಸಾಪುರ ನಾಡಕಛೇರಿಯಲ್ಲಿ ದಿನಾಂಕ 23.06.2022 ರಂದು ಹಾಗೂ ಶೃಂಗೇರಿಯ ತಾಲೂಕು ಕಛೇರಿಯಲ್ಲಿ 28.06.2022 ರಂದು ಕಂದಾಯ ಅದಾಲತ್ ನಡೆಯಲಿದೆ.
ತಮ್ಮ ತಮ್ಮ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಪಹಣಿ ತಿದ್ದುಪಡಿ ಹಾಗೂ ಫವತಿ ಬದಲಾವಣೆ ಪ್ರಕರಣಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕಂದಾಯ ಅದಾಲತ್ ನಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಬೇಕೆಂದು ಕಸಬಾ ಹೋಬಳಿ ಹಾಗೂ ಕಿಗ್ಗಾ ಹೋಬಳಿಯ ರಾಜಸ್ವ ನಿರೀಕ್ಷಕರಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ಶೃಂಗೇರಿ ತಹಸೀಲ್ದಾರ್ ಡಾ. ಲೋಕೇಶ್ ಸೂಚಿಸಿದ್ದಾರೆ.





0 Comments