ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ದರ್ಜಿ ಕನ್ಹಯ್ಯನ ಹತ್ಯೆ ಮಾಡಿರುವ ಇಬ್ಬರು ಮುಸಲ್ಮಾನರ ಕೃತ್ಯವನ್ನು ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಇದನ್ನೂ ಓದಿ : ಕ್ಯಾಂಟರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಬೈಕ್ ಚಾಲಕನ ದುರ್ಮರಣ
ಚಿಕ್ಕಮಗಳೂರಿನ ಅಜಾದ್ ವೃತ್ತದಲ್ಲಿ ಇಂದು ಬೆಳಗ್ಗೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಈ ಕೃತ್ಯವನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಆಗ್ರಹಿಸಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿ ದೇಶದ ಅಶಾಂತಿ ಮೂಡಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು, ದೇಶದಲ್ಲಿ ಹಿಂದೂಗಳು ಆತಂಕದಿಂದ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ, ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಗಾಗಿ ಇಂತಹ ಕೃತ್ಯಗಳನ್ನು ನಡೆಸುವವರಿಗೆ ಸಹಕಾರ ನೀಡುತ್ತಿದೆ ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಚಿತ್ರದುರ್ಗದ ಜಿಲ್ಲಾ ಬಿಜೆಪಿ ಪ್ರಭಾರಿಗಳಾದ ಶ್ರೀ ಪ್ರೇಮ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಬೆಳ್ಳವಾಡಿ, ಶ್ರೀ ದೇವರಾಜ್ ಶೆಟ್ಟಿ, ನಗರಸಭಾಧ್ಯಕ್ಷರಾದ ಮಧುಕುಮಾರ್ ಅರಸ್, ಗ್ರಾಮಾಂತರ ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಶ್ರೀ ಕೋಟೆ ರಂಗನಾಥ್, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಕೆ.ಪಿ ವೆಂಕಟೇಶ್,ವಕ್ತಾರರಾದ ದೀಪಕ್ ದೊಡ್ಡಯ್ಯ, ಯುವಮೋರ್ಚಾ ಅಧ್ಯಕ್ಷರಾದ ಸಂದೀಪ್, ಹಾಗೂ ಬಿಜೆಪಿಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು,ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಶೃಂಗೇರಿಯಲ್ಲಿ ನಡೆದ ಪ್ರತಿಭಟನೆ :
ರಾಜಸ್ಥಾನದಲ್ಲಿ ನಡೆದ ಘೋರ ಹತ್ಯೆಗೆ ಸಂಬಂಧಿಸಿದಂತೆ ಇಂದು ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ದಿವೀರ್ ಮಲ್ನಾಡ್ ಒಂದೆಡೆ ನಮ್ಮ ನಡುವೆಯೇ ಜಿಹಾದಿ ಮಾನಸಿಕತೆಯ ಹಲವರು ಬಲವಾಗಿ ಬೇರೂರಿದ್ದಾರೆ, ಮತ್ತೊಂದೆಡೆ ಜಾತ್ಯಾತೀತರು, ಬುದ್ದಿಜೀವಿಗಳು ಹಿಂದುತ್ವವನ್ನು ಒಪ್ಪದ ರೀತಿಯ ಮಾನಸಿಕತೆಯನ್ನು ಒಂದು ಸಮುದಾಯದ ಜನರಲ್ಲಿ ತುಂಬಿ ಬಹುತ್ವದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಈ ಸಮಾಜಘಾತುಕ ಶಕ್ತಿಗಳು ಮಾಡುತ್ತಿದೆ ಅದರ ಪರಿಣಾಮ ಜಾತಿಯ ಕಾರಣದಿಂದ ಹಲವರು ದೂರ ಆಗುತ್ತಿದ್ದಾರೆ, ಆ ಮೂಲಕ ಜಿಹಾದಿಗಳಿಗೆ ಪರೋಕ್ಷವಾಗಿ ಬೆಂಬಲವಾಗಿ ನಿಲ್ಲುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ, ಕೇವಲ ನೂಪುರ್ ಶರ್ಮಾಳ ಒಂದು ಪೋಸ್ಟ್ ನ್ನು ಶೇರ್ ಮಾಡಿದ್ದಕ್ಕಾಗಿ ನಡೆಸಿದ ಈ ಘೋರ ಕೃತ್ಯವನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ, ಹಾಗೆಯೇ ಈ ಘನಘೋರ ಘಟನೆಗೆ ದೇಶದ ಮುಸಲ್ಮಾನರು ಕ್ಷಮೆ ಕೇಳುವ ಪರಿಸ್ಥಿತಿ ಇದೆ ಆದರೆ ಯಾವುದೇ ಮುಸಲ್ಮಾನರು ಹಾಗೂ ರಾಜಕೀಯ ಪಕ್ಷದವರು ರಸ್ತೆಗೆ ಇಳಿಯುತ್ತಿಲ್ಲ ಎಂದು ಟೀಕಾಪ್ರಹಾರ ನಡಸಿದರು. ಈ ಕೃತ್ಯದ ಹಿಂದಿರುವ ಜಿಹಾದಿಗಳಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಶೃಂಗೇರಿ ಶಿವಣ್ಣ, ವೇಣುಗೋಪಾಲ್, ನೂತನ್ ಕುಮಾರ್, ಆದರ್ಶ ಕಾಂಚಿನಗರ, ಅನಿರುದ್ಧ, ಬಜರಂಗದಳದ ತಾಲೂಕು ಸಂಚಾಲಕ ರವಿಸಂಜಯ್, ಸುನೀಲ್ ಕುಲಾಲ್, ಸಚಿನ್ ಗುಬ್ಬಗೋಡು, ನಾಗೇಂದ್ರ, ಆಕಾಶ್ ಸೇರಿದಂತೆ ಹಲವರು ಹಾಜರಿದ್ದರು.






0 Comments