ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಹೊರವಲಯವಾದ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇನೋವಾ ಕಾರ್ ಒಂದು ಗುದ್ದಿದ ಪರಿಣಾಮ ಶಾಲಾ ಮಕ್ಕಳಿದ್ದ ಕಾರ್ ಪಲ್ಟಿಯಾಗಿದೆ.
ಇದನ್ನೂ ಓದಿ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಎಸ್ಕೇಪ್ ಆದ ಯುವಕ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳಿದ್ದ ಸ್ಕೂಲ್ ಟ್ರಿಪ್ ಓಮಿನಿ ಕಾರಿಗೆ ಇನೋವಾ ಕಾರ್ ಗುದ್ದಿದ ಪರಿಣಾಮ ಓಮಿನಿ ಕಾರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಯಾವುದೇ ಅಪಾಯಕ್ಕೊಳಗಾಗದೆ ಪಾರಾಗಿದ್ದಾರೆ.
ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಮಾಡುವವರ ವಿರುದ್ಧವಾಗಿ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ RTO ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ, ಶೃಂಗೇರಿಯ ಠಾಣಾಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಪೋಷಕರು ಕೂಡ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಾಗಿ ಹಳದಿ ಬೋರ್ಡ್ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿ ಅವರನ್ನು ಕಳುಹಿಸಬೇಕು - ದಿನೇಶ್ ಹೊಲ್ಮ, ಅಧ್ಯಕ್ಷರು, ವಾಹನ ಚಾಲಕರು ಮತ್ತು ಮಾಲೀಕರ ಸಂಘ ಶೃಂಗೇರಿ.
ಶೃಂಗೇರಿಯ ಮೆಣಸೆ ಬಳಿ ಈ ಅವಘಡ ಸಂಭವಿಸಿದ್ದು ಓಮಿನಿ ವಾಹನವು ಸಂಪೂರ್ಣ ನುಜ್ಜುಗುಜ್ಜಾಗಿದೆ, ಶೃಂಗೇರಿಯ ಎರಡು ಖಾಸಗೀ ಶಾಲೆಗಳ ಮಕ್ಕಳು ಈ ವಾಹನದಲ್ಲಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಎಂಬಂತೆ ಯಾವುದೇ ತೊಂದರೆಗೀಡಾಗದೆ ವಾಹನದಲ್ಲಿದ್ದ ಮಕ್ಕಳು ಪಾರಾಗಿದ್ದಾರೆ.
ಘಟನಾ ಕುರಿತಾಗಿ ನನ್ನ ಗಮನಕ್ಕೂ ವಿಷಯ ಬಂದಿದೆ, ಈ ಹಿಂದೆ ಚಾಲಕರ ಸಂಘದ ಮನವಿಯ ಮೇರೆಗೆ ಕಾರ್ಯಾಚರಣೆಯ ಮೂಲಕ ವೈಟ್ ಬೋರ್ಡ್ ನಲ್ಲಿ ಬಾಡಿಗೆ ಮಾಡುವವರನ್ನು ಎಚ್ಚರಿಸಿದ್ದೆವು, ಘಟನಾ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುವುದು - ಮುರುಗೆಂದ್ರ ಶಿರೊಳ್ಕರ್, RTO
ವೈಟ್ ಬೋರ್ಡ್ ಕಾರಿನಲ್ಲಿ ಸ್ಕೂಲ್ ಟ್ರಿಪ್:
ಓಮ್ನಿ ಹಾಗೂ ಇನೋವಾ ನಡುವಿನ ಅಪಘಾತದಲ್ಲಿ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ವೈಟ್ ಬೋರ್ಡ್ ಹೊಂದಿದ ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಶಾಲಾ ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಯಾರಾದರೂ ತೀವ್ರತರವಾದ ಗಾಯಕ್ಕೀಡಾದಲ್ಲಿ ಅಥವಾ ಬೇರಾವುದೇ ಅಪಾಯಗಳಾಗಿದ್ದಲ್ಲಿ ಯಾವುದೇ ವಿಮೆ ಸಿಗುವುದಿಲ್ಲ, ಅಂತಹ ಸಂಧರ್ಭದಲ್ಲಿ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ. ಈ ರೀತಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗಾಗಿ ಬಳಸುತ್ತಿರುವುದರ ಕುರಿತು RTO ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ.





0 Comments