ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಜೆಡಿಎಸ್ ಪಕ್ಷದ ವತಿಯಿಂದ ಬಾಳೆಹೊನ್ನೂರಿನಲ್ಲಿ ಶೃಂಗೇರಿ ಕ್ಷೇತ್ರದ ಹಿರಿಯ ಕಾರ್ಯಕರ್ತರ ಸಭೆ ನಡೆಯಿತು. ಕ್ಷೇತ್ರದಲ್ಲಿ ಜೆಡಿಎಸ್ ನ ಬಲವರ್ಧನೆ ಹಾಗೂ ಸಂಘಟನೆಯ ಕುರಿತು ಚರ್ಚೆ ನಡೆಯಿತು.
ಇದನ್ನೂ ಓದಿ : ಮೂಡಿಗೆರೆ : ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಬಾಳೆಹೊನ್ನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್ ಶೆಟ್ಟಿ ಕ್ಷೇತ್ರದ ಪ್ರತೀ ಬೂತ್ ನಲ್ಲಿಯೂ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ, ಅವರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಯ ಕೆಲಸವನ್ನು ಮಾಡಬೇಕು. ಕೇವಲ ವೈಯಕ್ತಿಕ ಕಾರ್ಯಗಳಿಗೆ ಪಕ್ಷವನ್ನು ಬಳಸಿಕೊಳ್ಳದೆ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಪಕ್ಷದೊಳಗಿದ್ದು ಪಕ್ಷವನ್ನು ಕೊಲ್ಲುವವರ ಅವಶ್ಯಕತೆ ಜಾತ್ಯಾತೀತ ಜನತಾದಳ ಪಕ್ಷಕ್ಕಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯ ಜನಪರ ಕಾರ್ಯಗಳನ್ನು, ರೈತ ಪರವಾದ ವಿವಿಧ ಯೋಜನೆಗಳನ್ನು ಹಾಗೂ ಅಭಿವೃದ್ಧಿಕಾರ್ಯಗಳ ಕುರಿತು ಜನರಿಗೆ ತಿಳಿಸುವಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಆ ಮೂಲಕ ಪಕ್ಷ ಸುಲಭವಾಗಿ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದರು.
ಬೆಂಬಲವಿರುವ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಸುಲಭ ಆದರೆ ಬೆಂಬಲವಿಲ್ಲದ ಕ್ಷೇತ್ರಗಳಲ್ಲಿ ಜನರಿಗೆ ಪಕ್ಷದ ಕುರಿತು ತಿಳಿಸಿ, ಈ ಹಿಂದಿನ ಅವಧಿಯ ಸಾಧನೆಗಳನ್ನು ವಿವರಿಸಿ ಸತತ ಪರಿಶ್ರಮದಿಂದ ಗೆಲ್ಲುವುದು ನಿಜವಾದ ಸಾಧನೆ ಈ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್ ಶೆಟ್ಟಿ ಅವರು ಸತತವಾಗಿ ಶ್ರಮಿಸುತ್ತಿದ್ದಾರೆ ನಾವೆಲ್ಲರೂ ಅವರೊಂದಿಗೆ ಕೈ ಜೋಡಿಸೋಣ ಎಂದು ಜೆಡಿಎಸ್ ಮುಖಂಡರಾದ ಹೆಚ್. ಟಿ ರಾಜೇಂದ್ರ ಮಾತನಾಡಿದರು.
ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ತೀವ್ರ ಅಸಮಾಧಾನ:
ಮಲೆನಾಡಿನ ಭಾಗದ ಸಮಸ್ಯೆಯನ್ನು ಕೇಂದ್ರಕ್ಕೆ ತಿಳಿಸಿ ಅವರ ಗಮನವನ್ನು ಸೆಳೆದು ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಲ್ಲಿಂದ ಆಯ್ಕೆಗೊಂಡು ಸಂಸದರಾಗಿರುವ ಹಾಗೂ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಸಂಪೂರ್ಣ ವಿಫಲರಾಗಿದ್ದಾರೆ ಇದಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆಯೇ ಹೊರತು ಇದರಿಂದಾಗಿ ಯಾರಿಗೂ ಪ್ರಯೋಜನಗಳಾಗಿಲ್ಲ, ಮಲೆನಾಡಿಗರ ಉತ್ತಮ ಜೀವನದ ಕುರಿತು ಜನಪರ ಆಡಳಿತದ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ನ ಹಿರಿಯ ಮುಖಂಡ ಹೆಚ್. ಟಿ ರಾಜೇಂದ್ರ ಕ್ಷೇತ್ರದ ಸಮಸ್ಯೆಯ ಕುರಿತು ಮಾತನಾಡಿದರು.
ಈ ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಮುಖಂಡರಾದ ಹೆಚ್.ಜಿ ವೆಂಕಟೇಶ್, ಹೆಚ್. ಟಿ ರಾಜೇಂದ್ರ, ದಿವಾಕರ್ ಭಟ್, ಕೆ.ಟಿ ಗೋವಿಂದೇಗೌಡ, ಕೆ.ಎನ್ ಮರಿಗೌಡ, ಜಂಶೀದ್ ಅಹ್ಮದ್, ಗಾಯನ್ ಗೌಡ, ಸತ್ಯದೇವ್, ಸುಮಾ ಅರುಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




0 Comments