ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರ್.ಎಸ್.ಎಸ್ ಕುರಿತಾಗಿ ಪರ ವಿರೋಧ ಹಾಗೂ ಚರ್ಚೆ ನಡೆಯುತ್ತಿದ್ದು ಈ ಸಂಬಂಧ ಕಾಂಗ್ರೆಸ್ ಆರ್.ಎಸ್.ಎಸ್ ಚಡ್ಡಿಗಳನ್ನು ಸುಟ್ಟು ಪ್ರತಿಭಟಿಸುತ್ತಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಬಿಜೆಪಿಗರು ಚಡ್ಡಿಯನ್ನು ಕಾಂಗ್ರೆಸ್ ಕಛೇರಿಗೆ ಪೋಸ್ಟ್ ಮಾಡಿ ಠಕ್ಕರ್ ನೀಡಿದ್ದಾರೆ. 


ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯ ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 15  ಕ್ಕೂ ಹೆಚ್ಚು ಚಡ್ಡಿಗಳನ್ನು ಪೋಸ್ಟ್ ನ ಮೂಲಕ ಬಿಜೆಪಿಯ ಪದಾಧಿಕಾರಿಗಳು ಕಳುಹಿಸಿದರು. ಕೈಯಲ್ಲಿ ಚಡ್ಡಿ ಹಿಡಿದುಕೊಂಡು ಕಾಂಗ್ರೆಸ್ ನ ವಿರುದ್ಧ ಪ್ರತಿಭಟಿಸಿದ ಬಿಜೆಪಿಗರು ಆರ್.ಎಸ್.ಎಸ್ ನ ಕುರಿತು ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದ ಮಾತನಾಡಬೇಕು. ಸಿದ್ದರಾಮಯ್ಯ ಹಾಗೂ ನಲಪಾಡ್ ಗೆ ಸಂಘದ ಕುರಿತು ಮಾತನಾಡುವ ಯಾವುದೇ ನೈತಿಕತೆಯಿಲ್ಲ, ಅವರು ನಿಗಾವಹಿಸಿ ಮಾತನಾಡಬೇಕು ಎಂದರು.

ಆರ್.ಎಸ್.ಎಸ್ ಹೆಸರನ್ನು ಹೇಳುವ ನೈತಿಕತೆ ಯುವ ಕಾಂಗ್ರೆಸ್ ನ ನಲಪಾಡ್ ಗೆ ಇಲ್ಲ, ಇದೇ ರೀತಿಯ ದುರ್ವರ್ತನೆಗಳು ಮುಂದುವರೆದಲ್ಲಿ ದೆಹಲಿಯ ಕಾಂಗ್ರೆಸ್ ಕಛೇರಿಗೂ ಲೋಡ್ ಗಟ್ಟಲೆ ಚಡ್ಡಿಯನ್ನು ಕಳುಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಪ್ರತಿಭಟನೆ ಹಾಗೂ ಅಂಚೆಮಾಡುವ ಸಂದರ್ಭದಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.