ಹಾಸನ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.
ಇದನ್ನೂ ಓದಿ : ಬಾಗಿಲು ಮುರಿದು ಮನೆಯೊಳಗೆ ನುಗ್ಗಲು ಯತ್ನಿಸಿದ ಕಾಡಾನೆ
ಹಾಸನದ ಹೊರವಲಯವಾದ ಬೂವನಹಳ್ಳಿ ವೃತ್ತದಲ್ಲಿ ಬೈಕ್ ಹಾಗೂ ಕ್ಯಾಂಟರ್ ನಡುವೆ ಈ ಅಪಘಾತ ಸಂಭವಿಸಿದ್ದು ಅರಕಲಗೂಡು ತಾಲೂಕು ಬೋಳ ಕ್ಯಾತನಹಳ್ಳಿಯ ರಾಕೇಶ್ ಎಂಬ 22 ವರ್ಷದ ಯುವಕ ಮೃತ ದುರ್ದೈವಿ. ಯುವಕನು ಹಂಪ್ ನ್ನು ಹಾರಿಸಲೆಂದು ವಾಹನವನ್ನು ಸಂಪೂರ್ಣವಾಗಿ ನೊಧಾನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕ್ಯಾಂಟರ್ ಚಾಲಕ ಹಿಂದಿನಿಂದ ಬೈಕ್ ಗೆ ಗುದ್ದಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಎಸ್ಕೇಪ್ ಆಗುತ್ತಿದ್ದ ಚಾಲಕನನ್ನು ಬೆನ್ನಟ್ಟಿದ ಸ್ಥಳೀಯರು :
ಬೈಕ್ ಗೆ ಗುದ್ದಿದ ಕ್ಯಾಂಟರ್ ನ ಚಾಲಕ ವಾಹನದಿಂದ ಕೆಳಗಿಳಿಯದೇ ಕೂಡಲೇ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಕಾರಿನಲ್ಲಿ ಬೆನ್ನಟ್ಟಿದ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿ ಚಾಲಕನನ್ನು ಸೆರೆ ಹಿಡಿದಿದ್ದಾರೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಆರೋಪಿಯನ್ನು ಸ್ಥಳೀಯರೇ ಹಿಡಿದುಕೊಟ್ಟಿದ್ದಾರೆ. ಈ ಕುರಿತಾಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ್ನು ಕಳೆದುಕೊಂಡಿರುವ ಮನೆಯವರು ಹಾಗೂ ಸಂಬಂಧಿಕರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.






0 Comments