ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ)  ಶಾಲಾ ವಿದ್ಯಾರ್ಥಿಯೋರ್ವನಿಗೆ ಬಾಸುಂಡೆ ಬರುವಂತೆ ಹೊಡೆದ ಆರೋಪದ ಮೇಲೆ ಅಮಾನತುಗೊಂಡಿದ್ದ ಶಿಕ್ಷಕನನ್ನು ಮರಳಿ ಶಾಲೆಗೆ ನೇಮಕ ಮಾಡುವಂತೆ ಕೋರಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡೀಗಡಿ ಶಾಲೆಯ ಶಿಕ್ಷಕ ನಾಗರಾಜ್, ಈ ಹಿಂದೆ ವಿದ್ಯಾರ್ಥಿಯೋರ್ವ ಎದುರುತ್ತರ ನೀಡಿದ ಕಾರಣದಿಂದಾಗಿ ಆತನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದರು. 

ಆ ಬಳಿಕದಲ್ಲಿ ಶಿಕ್ಷಕನಿಂದ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದ ವಿದ್ಯಾರ್ಥಿಯ ಪೋಷಕರು, ಶಿಕ್ಷಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಅಂತೆಯೇ ವಿದ್ಯಾರ್ಥಿಗೆ ಹೊಡೆದಿದ್ದ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿತ್ತು. 

ಇದನ್ನೂ ಓದಿ : ಚಾರ್ಮಾಡಿ ಘಾಟಿಯಲ್ಲಿ ಸಿಲುಕಿದ 12 ಚಕ್ರದ ಲಾರಿ ; ಕೆಲ ಘಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿ

ಅಮಾನತುಗೊಂಡಿರುವ ಭಂಡಿಗಡಿಯ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕೆಂದು ಬಂಡಿಗಡಿ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಾಲೆಯಲ್ಲಿ 130 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ, ಈ ಮಧ್ಯೆ ಇರುವ ಶಿಕ್ಷಕನನ್ನು  ಕಳೆದುಕೊಂಡರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಬಿಇಓ ಅಂತೋಣಿರಾಜ್ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಜಾಕ್, ಚಂದ್ರಪ್ಪ, ಸುರೇಶ್ ಅರೆಕಲ್ಲು, ಪ್ರಶಾಂತ್, ಸುರೇಶ್ ಇತರರು ಇದ್ದರು.