ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ದ್ವಿತೀಯ ಪಿಯುಸಿ ಮುಗಿಸಿ ನಂತರದಲ್ಲಿ ಏನು ಎಂಬ ಪ್ರಶ್ನೆಯೊಂದಿಗಿರುವ  ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಮುಂದೆ ಯಾವ ರೀತಿಯ ಶಿಕ್ಷಣವನ್ನು ಪಡೆಯಬೇಕು ಅಥವಾ ಯಾವ ರೀತಿಯ ವೃತ್ತಿ ಪರವಾದ ಕೋರ್ಸ್ ಮಾಡಬೇಕೆಂಬುದಕ್ಕೆ ಸಲಹೆ ನೀಡಿ ಅವರ ಪೂರಕ ಕಲಿಕೆ ಅಥವಾ ವೃತ್ತಿ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಶೃಂಗೇರಿಯ ಜೆಸಿಐ ಸಂಸ್ಥೆಯು ಮಾಹಿತಿ ಕಾರ್ಯಾಗಾರವನ್ನು  ಆಯೋಜನೆ ಮಾಡಿದೆ. 

ಇದನ್ನೂ ಓದಿ : ಶೃಂಗೇರಿ : ಹಸುವಿಗೆ ಲಾರಿಯಿಂದ ಗುದ್ದಿ ಎಸ್ಕೇಪ್ ಆಗಲು ಯತ್ನಿಸಿದವರಿಂದಲೇ ಅಂತ್ಯ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು

ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ, ಇಂಜಿನಿಯರಿಂಗ್, ಮೆಡಿಕಲ್ ವಿಭಾಗ, ಆಯುರ್ವೇದ, ಪ್ಯಾರಾ ಮೆಡಿಕಲ್, ಹೋಟೆಲ್ ಮ್ಯಾನೇಜ್ಮೆಂಟ್, ನರ್ಸಿಂಗ್, ಬಿಸಿಎ,ಸೇರಿದಂತೆ ಹೆಚ್ಚಿನ ಕೋರ್ಸ್ ಗಳ ಕುರಿತಾಗಿ  ಮಂಗಳೂರು ಹಾಗೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ನುರಿತ ತಜ್ಞರಿಂದ  ಕೋರ್ಸ್ ಮತ್ತು ಉದ್ಯೋಗಾವಕಾಶದ ಮಾಹಿತಿ,  ಜೊತೆಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸ್ಕಾಲರ್ಶಿಪ್, ಸರ್ಕಾರದ ಉಚಿತ ಹಾಸ್ಟೆಲ್ , ಎಜುಕೇಶನ್ ಲೋನ್  ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ. 

ಜೂನ್ 19 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಶೃಂಗೇರಿಯ ಗೌರೀಶಂಕರ ಸಭಾಂಗಣದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಆಸಕ್ತರು ಹಾಗೂ ಯಾವುದೇ ಊರಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಜೆಸಿಐ ಪದಾಧಿಕಾರಿಗಳು ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

7892715641, 9964072897, 8277451466