ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬದುಕಿರುವ ವ್ಯಕ್ತಿಯು ಸಾವನ್ನಪ್ಪಿದ್ದಾನೆ ಎಂದು ಆತನ ಮರಣ ಪತ್ರವನ್ನು ತಯಾರು ಮಾಡಿ ಅಕ್ರಮವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆಯನ್ನು ಬದಲಾವಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ನರಸೀಪುರ ಗ್ರಾಮದ ಸರ್ವೇ ನಂಬರ್ 21 ರಲ್ಲಿ ತಿಮ್ಮಯ್ಯ ಬಿನ್ ರಂಗಪ್ಪ ಯಗಟಿ ಹೋಳಿ ದೊಣ್ಣೆಕೋರನಹಳ್ಳಿ ಅವರು 03 ಎಕರೆ 37 ಗುಂಟೆ ಜಾಗವನ್ನು ಹೊಂದಿದ್ದು, ಅವರು ಬದುಕಿರುವಾಗಲೇ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಸ್ವ ನಿರೀಕ್ಷಕ ರಮೇಶ್ ಮೇಲೆ ಘಟನಾ ಸಂಬಂಧ ಶೋಕಾಸ್ ನೋಟಿಸ್ ಜಾರಿಯಾಗಿದ್ದು ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಬಡವರಿಗೆ ಹಾಗೂ ಕೃಷಿಕರಿಗೆ ಈ ರೀತಿಯ ತೊಂದರೆಗಳಾಗದಂತೆ ಸ್ವತಃ ಅಧಿಕಾರಿಗಳೇ ಕಾರ್ಯನಿರ್ವಹಿಸಬೇಕು, ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾಗಬೇಕು - ನೂತನ್.ವಿ ಸ್ಟೇಟ್ ಜನರಲ್ ಸೆಕ್ರೆಟರಿ, IHRC
ಇದನ್ನೂ ಓದಿ : ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ; ಸಾರ್ವಜನಿಕರ ಆರೋಪ
ಇಲ್ಲಿನ ರಾಜಸ್ವ ನಿರೀಕ್ಷಕರಾದ ರಮೇಶ್ ಎಂಬುವವರು ಹಣದ ಆಮಿಷಕ್ಕಾಗಿ ಯಾವುದೇ ಗ್ರಾಮಲೆಕ್ಕಿಗರ ವರದಿಯನ್ನು ಸ್ವೀಕರಿಸದೆ ನಕಲಿ ದಾಸ್ತಾವೇಜುಗಳನ್ನು ಸೃಷ್ಠಿಸಿ ಹಣಕ್ಕಾಗಿ ಬೇರೊಬ್ಬರ ಹೆಸರಿಗೆ ಪೌತಿಖಾತೆಯನ್ನು ದಾಖಲಿಸಿರುತ್ತಾರೆ ಎಂದು ಆರೋಪಮಾಡಲಾಗಿದೆ.
ಈ ಕುರಿತು ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಕೋರಿರುವ ಮಾನವ ಅಧಿಕಾರ ಪರಿಷದ್ ಈ ಪ್ರಕರಣವನ್ನು ಮೇಲಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಖಾತೆಯನ್ನು ರದ್ದುಗೊಳಿಸಿ ನೊಂದ ರೈತನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಇದಲ್ಲದೆ ಈ ಹಿಂದೆ ನಡೆದ ಅಕ್ರಮ ಸಾಗುವಳಿ ಚೀಟಿಯಲ್ಲಿ ಈ ಅಧಿಕಾರಿಯ ಕೈವಾಡವಿದ್ದು ಅದರ ಬಳಿಕವೂ ಅದೇ ಸ್ಥಳದಲ್ಲಿ ಮುಂದುವರೆಯಲು ಬಿಟ್ಟಿರುವುದು ಮೇಲಧಿಕಾರಿಗಳ ನಿರ್ಲಕ್ಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ ಹಾಗೂ ಈ ಘಟನೆಗೆ ಕಾರಣವಾದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.




0 Comments