ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕಾರ್ ಹಾಗೂ ಬೈಕಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ. 

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗುಡ್ಡೆಹೊಸೂರು ಬಳಿ ಈ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಪ್ರಯಾಣ ನಡೆಸುತ್ತಿದ್ದ ಬೈಕ್ ಸವಾರರಾದ ಸಚಿನ್ (23) ಹಾಗೂ ಪೊನ್ನಪ್ಪ (28) ಮೃತ ದುರ್ದೈವಿಗಳು.

ಇದನ್ನೂ ಓದಿ : ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಸಕರು, ಸಂಸದರು ವಿಫಲರಾಗಿದ್ದಾರೆ : ಟಿ.ಸಿ ರಾಜೇಂದ್ರ

ಕಾರ್ ಹಾಗೂ ಬೈಕ್ ನ ಬಹುತೇಕ ಭಾಗಗಳು ನಜ್ಜುಗುಜ್ಜಾಗಿದ್ದು, ಈ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಅಂತ್ಯ ಕಂಡಿದ್ದಾರೆ. 

ಮೃತರನ್ನು ಕಳೆದುಕೊಂಡಿರುವ ಮನೆಯವರು ಹಾಗೂ ಮೃತ ಯುವಕರ ಸ್ನೇಹಿತರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದು, ಘಟನಾ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಸಂಬಂಧ ಪರಿಶೀಲನೆ ನಡೆಸಿದ್ದಾರೆ. 

ಕೊಡಗು ಹಾಗೂ ಹಾಸನ ಜಿಲ್ಲೆಯ ಹಲವು ಕಡೆಗಳಲ್ಲಿ ಕಂಪಿಸಿದ ಭೂಮಿ : 

ಹಾಸನ  ಜಿಲ್ಲೆಯ ಕೆಲಭಾಗಗಳಲ್ಲಿ ಭೂಕಂಪನವಾಗಿರುವ ಅನುಭವ ಸ್ಥಳೀಯರಿಗುಂಟಾಗಿದೆ.

 ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅರಕಲಗೂಡು ತಾಲೂಕಿನ ಹಣೆಮಾರನಹಳ್ಳಿ, ಕಾರಹಳ್ಳಿ, ಮುದ್ದನಹಳ್ಳಿಯಲ್ಲಿ ಇಂದು ಬೆಳಗಿನಜಾವ 4.38ಕ್ಕೆ ಭೂಕಂಪನವಾಗಿದೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6

ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡು ತಕ್ಷಣವೇ ಮನೆಯಿಂದ ಹೊರಬಂದಿದ್ದಾರೆ. 

ಅಂತೆಯೇ ಕೊಡಗಿನಲ್ಲೂ ಇಂದು ಬೆಳಗ್ಗೆ ಭೂಕಂಪನವಾಗಿದೆ. ಕೊಡಗಿನ ಗೌಡಳ್ಳಿ, ಮೆಗಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಕೊಡಗಿನ ಜನರಿಗಾಗಿದೆ.

ಈ ಭೂ ಕಂಪನದ ಕೇಂದ್ರಬಿಂದು ಹಾಸನವಾಗಿದ್ದು ಒಂದೇ ಸಮಯದಲ್ಲಿ ಎರಡು ಕಡೆಗಳಲ್ಲೂ ಭೂಕಂಪನದ ಅನುಭವ ಅನೇಕ ಜನರಿಗಾಗಿದೆ.