ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ವೆರಿಕೋಸ್ ವೇಯ್ನ್ ತಜ್ಞವೈದ್ಯರಾದ ಡಾ.ಎಂ.ವಿ ಉರಾಳ್ ಅವರ ವೈದ್ಯಕೀಯ ಕ್ಷೇತ್ರದ ಸಾಧನೆ ಹಾಗೂ  ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಸಾಮಾಜಿಕ ಸೇವಾರತ್ನ  ಪ್ರಶಸ್ತಿ ನೀಡಿ ಗೌರವಿಸಿದೆ. 

ಮೂಲತಃ ಉಡುಪಿಯ ಮಣೂರು ರಾಧಾಕೃಷ್ಣ ಉರಾಳ್ ಹಾಗೂ ಮಹಾಲಕ್ಷ್ಮೀ ದಂಪತಿಗಳ ಪುತ್ರರಾದ ಡಾ. ಎಂ ವಿ ಉರಾಳ್ ಅವರು ವೆರಿಕೋಸ್ ವೆಯ್ನ್ ಖಾಯಿಲೆಯಿಂದ ಬಳಲುತ್ತಿದ್ದವರನ್ನು ಕಂಡು ಈ ಕಾಯಿಲೆಗೆ ಗುಣಮಟ್ಟದ ಹಾಗೂ ಸೂಕ್ತವಾದ ಔಷಧಿಯನ್ನು ಕಂಡುಹಿಡಿದು ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ Dr Urals vericose veins syrup ನ್ನು ಸಂಶೋಧನೆಯ ಮೂಲಕ ಕಂಡು ಹಿಡಿದರು.

ಶಸ್ತ್ರಚಿಕಿತ್ಸೆ ಇಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ವೆರಿಕೋಸ್ ವೇನ್ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ಇವರ ಬಳಿಯಲ್ಲಿ ಚಿಕಿತ್ಸೆ ಕಂಡುಕೊಂಡ ಅನೇಕರು ಇಂದು ರೋಗಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳನ್ನು ಪೂರೈಸುವ ಇವರು ಬಡವರ್ಗದ ಅನೇಕರಿಗೆ ಉಚಿತವಾಗಿ ಔಷಧಿಯನ್ನು ನೀಡಿದ್ದಾರೆ. ಅವರ ಈ ಸೇವಾ ಮನೋಭಾವನೆಯನ್ನು ಕಂಡು ಸಂಜೆ ಪ್ರಭ ಪತ್ರಿಕೆಯ ದಶಮ ಸಂಭ್ರಮ ಮಹೋತ್ಸವದಲ್ಲಿ ಡಾಕ್ಟರ್ ಎಂ.ವಿ ಉರಾಳ್ ಅವರಿಗೆ ಸಂಜೆಪ್ರಭ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಗೌರವಿಸಲಾಗಿದೆ. 

ವೆರಿಕೋಸ್ ವೆಯ್ನ್ ಖಾಯಿಲೆಯಿಂದ ಅನೇಕರು ನರಳಾಡುವುದನ್ನು ಕಂಡು ಇದಕ್ಕೊಂದು ಪರಿಣಾಮಕಾರಿಯಾದ ಔಷಧಿಯನ್ನು ಕಂಡು ಹಿಡಿದಿದ್ದೇನೆ, ಜನರ ಸೇವೆ ಮಾಡುವುದು ಒಂದು ಸೌಭಾಗ್ಯ ಈ ನಿಟ್ಟಿನಲ್ಲಿ ನನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದೇನೆ. ಪ್ರಶಸ್ತಿ ಲಭಿಸಿದ್ದು ಮನಸ್ಸಿಗೆ ಖುಷಿ ತಂದಿದೆ. - ಡಾ.ಎಂ.ವಿ ಉರಾಳ್, ವೆರಿಕೋಸ್ ವೆಯ್ನ್ ತಜ್ಞ ವೈದ್ಯರು ಶೃಂಗೇರಿ. 

ವೈದ್ಯ ಉರಾಳ್ ಅವರು ರಾಜ್ಯದ ಅನೇಕ ಕಡೆಗಳಲ್ಲಿ ತಮ್ಮ ಶಾಖೆಯನ್ನು ಹೊಂದಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ವೆರಿಕೋಸ್ ವೆಯ್ನ್ ಖಾಯಿಲೆ ಸಂಬಂಧಿತ ಉಚಿತವಾಗಿ ಅರಿವು ಮೂಡಿಸುವ ಹಾಗೂ  ಔಷಧಿಯನ್ನು ಒದಗಿಸುವ ಕಾಯಕವನ್ನು ನಡೆಸುತ್ತಿದ್ದಾರೆ. 

ಪ್ರಶಸ್ತಿಯನ್ನು ಪಡೆದಿರುವ ವೈದ್ಯ ಉರಾಳ್ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬಂದಿದ್ದು,  ಅನೇಕರು ಈ ಕುರಿತಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.