ಚಿತ್ರದುರ್ಗ/ ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಜೋಗಿಮಟ್ಟಿ ರಸ್ತೆ ನಿವಾಸಿ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು (ಪದ್ದಣ್ಣ) ನಿಧನರಾಗಿದ್ದಾರೆ.
ಹಲವಾರು ವರ್ಷಗಳಿಂದ ಶ್ರೀ ಕೂಡಲಿ ಶೃಂಗೇರಿ ಮಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗದವರನ್ನು ಹಾಗೂ ಪರಿಚಯಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗಿದೆ. ಅಪಾರ ಸಂಖ್ಯೆಯ ಮಠದ ಭಕ್ತರು ಅವಧಾನಿಗಳಾದ ವೇದಬ್ರಹ್ಮ ಪದ್ಮನಾಭ ಅವಧಾನಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಶೃಂಗೇರಿ ಶ್ರೀ ಮಠದ ಭೋಜನಶಾಲೆಯ ಅಚ್ಚುಕಟ್ಟಾದ ವ್ಯವಸ್ಥೆಯ ಪೋಟೋ ಹಂಚಿಕೊಂಡು ಅಧ್ಬುತ ಎಂದ ಆನಂದ್ ಮಹೀಂದ್ರ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶ್ರೀ ಶಾರದಾ ಮಠದ ಭೋಜನ ಶಾಲೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ, ನೋಡಲು ಸುಂದರವಾಗಿ ಕಾಣುವಂತೆ ಜೋಡಿಸಿಟ್ಟಿರುವ ಊಟಕ್ಕೆ ಬಳಸುವ ಸ್ಟೀಲ್ ಪ್ಲೇಟ್ ಗಳ ಕುರಿತು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ ಇದೀಗ ಅವರು ಮಾಡಿರುವ ಟ್ವೀಟ್ ಬಹುತೇಕ ಕಡೆಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠದ ಭೋಜನ ಶಾಲೆಯಲ್ಲಿರುವ ಊಟದ ಸ್ಟೀಲ್ ಪ್ಲೇಟ್ ಗಳನ್ನು ಜೋಡಿಸಿಟ್ಟಿರುವ ಕುರಿತು ಆಶ್ಚರ್ಯ ವ್ಯಕ್ತಪಡಿಸಿ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ಈ ಜೋಡಣೆಯು ಕಲೆ, ನಿಖರತೆ ಹಾಗೂ ಕ್ರಿಯಾತ್ಮಕತೆಯ ಮಿಶ್ರಣವಾಗಿದೆ. ಇದನ್ನು ನೋಡಿ ಬೆರಗಾದೆನು ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಮುಂಬೈ ಮೂಲದ ಬಿಲಿಯನೇರ್ ಉದ್ಯಮಿ. ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರು. ಸಮಾಜದ ಅನೇಕ ವಲಯಗಳ ಜನರ ಕಷ್ಟಗಳಿಗೆ ಆನಂದ್ ಮಹೀಂದ್ರಾ ನೆರವಾಗುವ ಮೂಲಕ ಅವರ ಕಷ್ಟಕ್ಕೆ ಸ್ಪಂದನೆ ನೀಡಿದ್ದಾರೆ. ಇದೀಗ ಅವರು ಮಾಡಿರುವ ಒಂದು ಟ್ವೀಟ್ ಅನೇಕ ಕಡೆಗಳಲ್ಲಿ ವೈರಲ್ ಆಗುತ್ತಿದ್ದು, ಶೃಂಗೇರಿ ಶ್ರೀ ಮಠದಲ್ಲಿ ಸುಂದರವಾಗಿ ಜೋಡಿಸಿಟ್ಟಿರುವ ಪ್ಲೇಟ್ ಗಳ ಕುರಿತು ಅವರವರ ಆಲೋಚನಾ ದೃಷ್ಟಿಗೆ ಬಂದಂತೆ ಜನರು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.





0 Comments