ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಪಕ್ಷದ ವಿರುದ್ಧ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ :  ಬಾಳೆಹೊನ್ನೂರು : ಬೇಕರಿಯಲ್ಲಿ ಸಂಗ್ರಹಿಸಿದ್ದ ವೈನ್ ವಶ

ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ವಿರುದ್ಧ ಮಾತನಾಡಿದ ಅವರು, ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಾರೆ, ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ, ಸರ್ಕಾರದ ಎಲ್ಲಾ ಯೋಜನೆಗಳ ಕುರಿತು ಮೊದಲು ತಿಳಿದುಕೊಂಡು ನಂತರದಲ್ಲಿ ತಮಗಿರುವ ಅಸಮಾಧಾನಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದರು. 

ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ, ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದ  ರಾಹುಲ್ ಗಾಂಧಿ ವಿಚಾರಣೆಗೆ ಕರೆದರೆ ತಪ್ಪಾ, ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ, ವಿಚಾರಣೆಗೆ ಕರೆಯಲೇ ಬೇಡಿ ಎಂದು ನಿಮ್ಮ ಎಐಸಿಸಿಯಲ್ಲಿ ಒಂದು ರೆಸ್ಯೂಲುಷನ್ ಮಾಡಿ ಎಂದು ಕುಟುಕಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ಟೀಕೆಮಾಡಿದರು.

ಕಾಂಗ್ರೆಸ್ ಇಡೀ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗದೇ ಇರುವುದು  ಗಂಧ ಗಾಳಿಯೇ ಇಲ್ಲದ ಸಿದ್ದರಾಮಯ್ಯ, ಡಿಕೆಶಿ, ನಲಪಾಡ್ ಅಂತಹವರ ಕೈಯಲ್ಲಿ  ಕಾಂಗ್ರೆಸ್ ಜವಾಬ್ದಾರಿ ಇರುವುದರಿಂದ ಎಂಬುದಾಗಿ ವ್ಯಂಗ್ಯವಾಡಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧವಾಗಿ ಡಿ.ಕೆ ಶಿವಕುಮಾರ್ ಪುಸ್ತಕವನ್ನು ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಕುರಿತಾಗಿ ಮಾತನಾಡಿದ ಈಶ್ವರಪ್ಪ, ಪಠ್ಯ ಪುಸ್ತಕ ಹರಿದರೆ ಸರಸ್ವತಿಗೆ ಅವಮಾನ ಮಾಡಿದಂತೆ, ಕೈಯಲ್ಲಿ ಆಗದಿರುವವರು ಮೈಯೆಲ್ಲಾ ಪರಚಿಕೊಂಡರು ಎನ್ನುವಂತೆ ಏನೂ ಕೆಲಸ ಇಲ್ಲದಿರುವವರು ಈ ರೀತಿ‌ಯಾಗಿ ನಡೆದುಕೊಳ್ಳುತ್ತಾರೆ. ಇಂತಹ ನಡತೆಯನ್ನು ಸಹಿಸಲಾಗದು ಎಂದರು.