05.06.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕೊಡಗು, ಆಗುಂಬೆ, ಮಂಡ್ಯ, ಚಾಮರಾಜನಗರ, ರಾಮನಗರ, ಚೆನ್ನರಾಯಪಟ್ಗಣ, ಬೆಂಗಳೂರು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ. 

ಮುಂಗಾರು : ದುರ್ಬಲ ಮುಂಗಾರು ಮುಂದುವರಿಯಲಿದೆ. ಈಗಿನ ಪ್ರಕಾರ ಜೂನ್ 10ರ ನಂತರವೂ ಮುಂಗಾರು ಚುರುಕಾಗುವ ಲಕ್ಷಣಗಳಿಲ್ಲ.

ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶ್ರೀ ವಿಶ್ವಭಾರತಿ ಸೇವಾ ಟ್ರಸ್ಟ್ ನಿಂದ ಬ್ಯಾಗ್, ಪುಸ್ತಕ, ಪೆನ್ ವಿತರಣೆ

ಶ್ರೀ  ವಿಶ್ವ ಭಾರತೀಯ ಸೇವಾ ಟ್ರಸ್ಟ್. (ರಿ )      ಸೇವಾಕರ್ತರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಸಂಸ್ಥೆಯ, ದೆಯೋದ್ದೇಶಗಳಲ್ಲಿ ಒಂದಾದ ಕಾರ್ಯಕ್ರಮ,ವಿದ್ಯಾಭ್ಯಾಸಕ್ಕೆಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವರ್ಷ ದ  ಮೊದಲ ಕಾರ್ಯಕ್ರಮ ವಾಗಿ ದಿನಾಂಕ 28/05/22ರಂದು ಮೀಗ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗೂ, ಹಾಗೂ ನೋಟ್ ಪುಸ್ತಕ, ಪೆನ್ನು,ವಿತರಿಸಲಾಯಿತು. , ಹಾಗೂ ಅಂಗನವಾಡಿಮಕ್ಕಳಿಗೆ ಬ್ಯಾಗ್ ಗಳನ್ನು ಗೌರವ ಪೂರ್ವಕವಾಗಿ ನೀಡಲಾಯಿತು. ಈ ಕಾರ್ಯಕ್ರಮ ಕ್ಕೆ ಧಾನಿಗಳಾಗಿ ಸಹಕರಿಸಿದ ಭಾಗ್ಯಲಕ್ಷ್ಮಿ ಫ್ಯಾನ್ಸಿ ಸ್ಟೋರ್ ಶೃಂಗೇರಿ ಹಾಗೂ ಸ್ವಾಮಿಫ್ಯಾನ್ಸಿ ಮೂಡಲಗಿರಿ ಕಂಪ್ಲೆಕ್ಸ್ , ಹಾಗೂ ಮಂಜು. ಮಲ್ನಾಡ್ ಮಳಿಗೆ,ಇವರಿಗೆ ಶಾಲೆಯ ಮಕ್ಕಳು, ಹಾಗೂ ಪೋಷಕರು, ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಿ.ಎಫ್.‌ಐ ಬ್ಯಾಂಕ್‌ ಖಾತೆ ತಾತ್ಕಾಲಿಕವಾಗಿ ಸ್ಥಗಿತ, ಖಂಡಿಸಿ ಚಿಕ್ಕಮಗಳೂರಿನಲ್ಲಿ PFI ಪ್ರತಿಭಟನೆ

ಚಿಕ್ಕಮಗಳೂರು : PFI ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಈಡಿಯ ದಮನಕಾರಿ ನೀತಿಯನ್ನು ಖಂಡಿಸಿ PFI ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಆಝಾದ್ ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ PFI ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಚಾಂದ್ ಪಾಷ ದೇಶದಾದ್ಯಂತ ಶೋಷಿತರ, ದಮನಿತರ, ಹಿಂದುಳಿದವರ ಆಶಾಕಿರಣವಾಗಿರುವ ಸಂಘಟನೆಯನ್ನು ಈಡಿ ಮತ್ತು ಎನ್ಐಎ ಮೂಲಕ ಆರ್.ಎಸ್. ಎಸ್, ಬಿಜೆಪಿ ಹೆದರಿಸಲು ನೋಡುತ್ತಿದೆ, ಇದು ಅಧಿಕಾರದ ದುರ್ಬಳಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ನಿರಾಕರಣೆಯಾಗಿದೆ. ಯಾವುದೇ ಕಾರಣಕ್ಕೂ ಇಂತಹ ಬೆದರಿಕೆ ಗಳಿಗೆ ಹೆದರುವುದಿಲ್ಲ ಎಂದರು.

ಚಾರ್ಮಾಡಿ ಘಾಟಿಯಲ್ಲಿ ಸಿಲುಕಿದ 12 ಚಕ್ರದ ಲಾರಿ : 

ಮೂಡಿಗೆರೆ : ಚಾರ್ಮಾಡಿ ಘಾಟಿಯಲ್ಲಿ ದೊಡ್ಡ ಲಾರಿಯೊಂದು ಕೆಟ್ಟುನಿಂತ ಪರಿಣಾಮ ಕೆಲಕಾಲ ರಸ್ಥೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಮಾರ್ಗವಾದ ಚಾರ್ಮಾಡಿ ಘಾಟ್ ನ 07 ನೇ ತಿರುವಿನಲ್ಲಿ ಲಾರಿಯು ಹಾಳಾದ ಪರಿಣಾಮ ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಸಂಪರ್ಕಕ್ಕೆ ಸಮಸ್ಯೆಯಾಗಿತ್ತು. ರಜಾದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಈ ರಸ್ಥೆಯಮೂಲಕ ಸಂಚರಿಸುವ ಕಾರಣ ವಾಹನದಟ್ಟಣೆ ಹೆಚ್ಚಾಗಿ ಕಂಡುಬಂತು

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ ಶೃಂಗೇರಿ ಶಿಕ್ಷಕ 
ಕರ್ನಾಟಕ  ರಾಜ್ಯ  ಸರ್ಕಾರಿ ನೌಕರರ ಸಂಘದ ವತಿಯಿಂದ  ಬೆಂಗಳೂರಿನ ಕಂಠೀರವ  ಕ್ರೀಡಾಂಗಣದಲ್ಲಿ  ನಡೆದ  ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶೃಂಗೇರಿ ತಾಲೂಕಿನ  ವಿದ್ಯಾನಗರ ಶಾಲೆಯ ಶಿಕ್ಷಕರಾದ Y.J ರಾಮೇಗೌಡ ಅವರು  ಡಿಸ್ಕಸ್ ಥ್ರೋ (ತಟ್ಟೆ ಎಸೆತ)  ವಿಭಾಗದಲ್ಲಿ  ಪ್ರಥಮ ಸ್ಥಾನಗಳಿಸಿ  ರಾಷ್ಟ್ರಮಟ್ಟಕ್ಕೆ  ಆಯ್ಕೆಯಾಗಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪರಿಪಕ್ವವಾಗುವಂತೆ ಹೇಳಿಕೊಡುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿರುವ ಶಿಕ್ಷಕ ರಾಮೇಗೌಡ ಅವರನ್ನು ಅನೇಕರು ಅಭಿನಂದಿಸಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದ್ದಾರೆ. 

ನರಸಿಂಹರಾಜಪುರದಲ್ಲಿ ಬಜರಂಗದಳದ ಹೋರಾಟಕ್ಕೆ ಸಂದ ಜಯ  

ಅನಧಿಕೃತವಾಗಿ ನರಸಿಂಹರಾಜಪುರದ ಕಡಹೀನ ಬೈಲು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನರಸಿಂಹರಾಜಪುರ ಘಟಕ ಈ ಹಿಂದೆ ಬೃಹತ್ ಪ್ರತಿಭಟನೆ ಹಾಗೂ ಕರಗುಂದ ಚಲೋ ನಡೆಸಿತ್ತು ಹಾಗೂ ಅಧಿಕಾರಿಗಳಿಗೆ ಗಡುವು ನೀಡಿತ್ತು ಈ ಹೋರಾಟದ ಬಳಿಕದಲ್ಲಿ ಇದೀಗ ಪ್ರಸ್ತುತ   ಶಿಲುಬೆಯನ್ನು ತೆರವುಗೊಳಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳದ ಹೋರಾಟಕ್ಕೆ ಸಂದ ಜಯ ಇದಾಗಿದೆ, ಇಂತಹ ಹೋರಾಟಗಳಲ್ಲಿ ಬಜರಂಗದಳ ಸದಾ ಮುನ್ನೆಲೆಯಲ್ಲಿರುತ್ತದೆ, ಇಂತಹ ವಿಚಾರಗಳ ಮೇಲೆ ಜಿಲ್ಲಾಡಳಿತ ಸೂಕ್ತ ನಿಗಾವಹಿಸಬೇಕು ಆರ್. ಡಿ ಮಹೇಂದ್ರ ತಿಳಿಸಿದರು.

ತರೀಕೆರೆ :  ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಆರು ಜನ ಪೊಲೀಸರ ವಶಕ್ಕೆ 

ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಎಪಿಎಂಸಿ ಹತ್ತಿರದಲ್ಲಿ, ಜೂಜಾಟದಲ್ಲಿ ಭಾಗಿಯಾಗಿದ್ದ ಆರುಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೂಜುಕೋರರು ಜೂಜಾಟಕ್ಕೆಂದು ಬಳಸಿದ್ದ 16,090 ರೂಪಾಯಿ ನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯು ತರೀಕೆರೆ ಪಿಎಸ್ಸೈ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು,  ಠಾಣೆಯ ಸಿಬ್ಬಂದಿವರ್ಗದವರು ಸಹ ಭಾಗಿಯಾಗಿದ್ದರು.

ಜಲಪ್ರವಾಹ ಮತ್ತು ಭೂ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿದ ಕೊಡಗು ಜಿಲ್ಲಾಡಳಿತ 

ಈ ಬಾರಿ ಕೊಡಗು ಜಿಲ್ಲೆಯಲ್ಲಿ 44 ಕಡೆ ಭೂಕುಸಿತ ಹಾಗೂ 43 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ, ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ. ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆಯನ್ನು ಅಧಿಕಾರಿಗಳ ತಂಡ ನೀಡಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸುರಕ್ಷತಾ ಕಾರ್ಯವನ್ನು ಆರಂಭಿಸಿದೆ. ಮಳೆಗಾಲದಲ್ಲಿ ಆತಂಕದಿಂದ ಜೀವನ ನಿರ್ವಹಣೆ ಮಾಡಬೇಕಿರುವ ಅಸುರಕ್ಷಿತ ಭಾಗಗಳ ಜನರಿಗೆ ನೊಟೀಸ್ ನೀಡಿ ಸುರಕ್ಷಿತವಾಗಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಜನರ ಸುರಕ್ಷತೆಯ ದೃಷ್ಟಿಯಿಂದ ಈಗಾಗಲೇ ಸಿದ್ಧತೆಗಳನ್ನು ಜಿಲ್ಲಾಡಳಿತ ಆರಂಭಿಸಿದೆ, ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳು ಸೇರಿದಂತೆ ಅಗ್ನಿ ಶಾಮಕದಳ, ಪೊಲೀಸ್ ಇಲಾಖೆ ಎಲ್ಲರನ್ನು ಸೇರಿಸಿ ತಂಡದ ರಚನೆ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.