ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಕಾನೂನು ನಿಯಮ ಮೀರಿ ಜಮೀನು ಮಂಜೂರು ಮಾಡಿದ್ದ ಮೂವರು ನೌಕರರನ್ನು ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸಿ  ಅಮಾನತುಗೊಳಿಸಿದ್ದಾರೆ. 

ಇದನ್ನೂ ಓದಿ : ಶೃಂಗೇರಿ: ಸ್ಕೂಲ್ ಟ್ರಿಪ್ ವಾಹನಕ್ಕೆ ಗುದ್ದಿದ ಇನೋವಾ ಕಾರು; ಅದೃಷ್ಟವಶಾತ್ ಮಕ್ಕಳು ಪಾರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯ ಸರ್ವೇ ನಂಬರ್ 168 ರಲ್ಲಿ 11 ಜನರಿಗೆ 4.38 ಎಕರೆ ಜಾಗವನ್ನು ಕಾನೂನಿನ ವಿರುದ್ಧವಾಗಿ ಮಂಜೂರು ಮಾಡಲಾಗಿತ್ತು, ಈ ಹಿನ್ನೆಲೆ ವ್ಯಕ್ತಿಯೋರ್ವರು ದೂರು ಸಲ್ಲಿಸಿದ್ದರು. 

ಈ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮಂಜುನಾಥ್ ಎಂಬುವವರು ಸಲ್ಲಿಸಿದ  ದೂರಿನನ್ವಯ ತನಿಖೆ ನಡೆಸಿದ ಅಧಿಕಾರಿಗಳು ನಿಯಮ ಮೀರಿ ನೌಕರರು ಜಾಗ ಮಂಜೂರು ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. 

ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಜಾಗ ಮಂಜೂರು ಮಾಡುವ ಸಂದರ್ಭದಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಹೆಚ್.ಸಿ. ಹಿಂದಿನ ರಾಜಸ್ವ ನಿರೀಕ್ಷಕರು, ಎ.ಎನ್ ಗಿರೀಶ್ ಗ್ರಾಮ ಲೆಕ್ಕಿಗರು ಹಾಗೂ ಹಿಂದಿನ ಗ್ರಾಮ ಲೆಕ್ಕಿಗರಾಗಿದ್ದ ಗೀತಾ ಬಿ.ವೈ ಈ ಮೂವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು