ಚಿಕ್ಕಮಗಳೂರು : ಕಾಂಗ್ರೆಸ್ ನ ನಾಯಕಿ, ಮಾಜಿ ಸಚಿವೆ ಮೋಟಮ್ಮ ಬರಲಿರುವ ವಿಧಾನಸಭಾ ಚುನಾವಣೆ ಕುರಿತಾಗಿ ಮತ್ತು ಪಕ್ಷದ ಕೆಲವರಿಂದ ತಮಗಾಗಿರುವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಜಯಪುರ: ಮೇಗೂರು ಸಮೀಪದ ಎಸ್ಟೇಟ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಕಳೆದ ಚುನಾವಣೆಯಲ್ಲಿ ವೈಯಕ್ತಿಕವಾಗಿ ಹಣ ಖರ್ಚು ಮಾಡಿ ಚುನಾವಣೆಗೆ ಓಡಾಡಿದ್ದೇನೆ, ನನ್ನ ಮನೆಯನ್ನು ಕೂಡ ಲೀಸ್ ಗೆ ಹಾಕಿ ಚುನಾವಣೆ ಎದುರಿಸಿದ್ದೇನೆ, ಇದಲ್ಲದೇ ಇದುವರೆಗೆ ನಾನು 08 ಚುನಾವಣೆ ಎದುರಿಸಿದ್ದೇನೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ಮಗಳಿಗಾಗಿ ಚುನಾವಣೆಗೆ ಟಿಕೆಟ್ ಕೇಳಿದ್ದೇನೆ ಎಂದರು.

MPK ಕಾಂಗ್ರೆಸ್ ಸೇರ್ಪಡೆಗೆ ವಿರೋಧವಿದೆ :

ಕಾಂಗ್ರೆಸ್ ಪಕ್ಷಕ್ಕೆ ಎಂ. ಪಿ ಕುಮಾರಸ್ವಾಮಿ ಸೇರ್ಪಡೆ ಕುರಿತು ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವೆ ಮೋಟಮ್ಮ ವ್ಯಕ್ತಿ ಸರಿಯಿಲ್ಲ ಎಂದರೂ ಅವರೊಂದಿಗೆ ಸ್ನೇಹ ನಡೆಸುವುದು ಸಮಂಜಸವಲ್ಲ ಅಂತೆಯೇ ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ.ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿದರೆ ಪಕ್ಷದ ಗೌರವ ಎಲ್ಲಿಗೆ ಹೋಗುತ್ತದೆ MPK ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಕ್ಕೆ ನನ್ನ ವಿರೋಧವಿದೆ ಎಂದು ಆಕ್ರೋಶ ಹೊರಹಾಕಿದರು. 

ಕೆಲವರು ಆ ಸಂದರ್ಭದಲ್ಲಿ ಮೇವಿನ ಆಸೆಗಾಗಿ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದರು ಅಂತಹ ಸಾಲಿನಲ್ಲಿರುವವರು ಪಕ್ಷಕ್ಕೆ ಎಂದಿಗೂ ಬೇಡ. ಕುಮಾರಸ್ವಾಮಿಗೆ ಟಿಕೆಟ್ ನೀಡುವ ಬದಲು ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ ಅನೇಕರಿದ್ದಾರೆ, ಅವರ ಬದಲು ಬೂತ್ ಕಮಿಟಿ ಸದಸ್ಯರಿಗೆ ಟಿಕೆಟ್ ನೀಡಲಿ ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದರು. 

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ನನ್ನನು ಕಡೆಗಣನೆ ಮಾಡಿದರು ಆದರೆ ನಾನು ಅವರ ಗೆಲುವಿಗಾಗಿ ಪಕ್ಷದ ಹಿತಕ್ಕಾಗಿ ಸತತ ಪರಿಶ್ರಮಪಟ್ಟಿದ್ದೇನೆ, ಮಹಿಳಾ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು ಆದರೆ ಇದಾವುದನ್ನೂ ಸಿದ್ದರಾಮಯ್ಯ ಅವರು ಮಾಡಲಿಲ್ಲ ಇದರಿಂದಾಗಿ ನೋವಾಗಿದೆ ಎಂದರು. 

ತನು ಕೊಟ್ಟಿಗೆಹಾರ, ವರದಿಗಾರರು