ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದೆರಡು ವಾರಗಳ ಹಿಂದೆ ಸುರಿದಿದ್ದ ರಣಮಳೆಯ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಚಿಂದಿ ಆಯುವ ವ್ಯಕ್ತಿ ಸತತ  14 ದಿನಗಳ ಬಳಿಕ ದಿಢೀರ್ ಪ್ರತ್ಯಕ್ಷವಾಗಿದ್ದಾನೆ. 


ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇದಾಸರಹಳ್ಳಿ ರಾಜಕಾಲುವೆಯಲ್ಲಿ ಈ ವ್ಯಕ್ತಿ ಕೊಚ್ಚಿ ಹೋಗಿದ್ದರು. ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕೊಚ್ಚಿ ಹೋಗಿದ್ದ ವ್ಯಕ್ತಿಗಾಗಿ ರಣ ಮಳೆಯಲ್ಲೂ ಅಗ್ನಿಶಾಮಕದಳದ ಸಿಬ್ಬಂದಿಗಳು ಬಿಟ್ಟುಬಿಡದೇ ಶೋಧ ಕಾರ್ಯವನ್ನು ನಡೆಸಿದ್ದರು.

ಇಂದು ಬೆಳಗ್ಗೆ ಕಾರಿನಲ್ಲಿ ತೆರಳುವ ಐಸಿಐಸಿ ಬ್ಯಾಂಕ್ ಸಮೀಪ ಉಂಡೆದಾಸರಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಹಾಗೂ ಆತನೊಂದಿಗೆ ಮಹಿಳೆ ಕಂಡುಬಂದಿದ್ದು, ವಿಚಾರಿಸಿದಾಗ ಆತನೇ ಎಂದು ದೃಢಪಟ್ಟಿದೆ. ಪೋಲಿಸರು ಈ ಕುರಿತಾಗಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದಾರೆ - ವರಸಿದ್ದಿ ವೇಣುಗೋಪಾಲ್, ಚಿಕ್ಕಮಗಳೂರು ನಗರಸಭಾಧ್ಯಕ್ಷರು

ಆದರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ರಸ್ತೆಯಲ್ಲಿ ಪ್ರಸ್ತುತ ಬಿಂದಾಸ್ ಆಗಿ ಓಡಾತ್ತಿದ್ದು, ವ್ಯಕ್ತಿಯ ಓಡಾಟ ಕಂಡು ಸ್ಥಳೀಯರು, ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಯಾರಿಗೂ ಕಾಣದ ಹಾಗೆ ಸುರೇಶ್ ನೀರಿನಿಂದ ಎದ್ದು ಬಂದಿದ್ದು ಸ್ಥಳೀಯರನ್ನು ನಿಬ್ಬೆರಗು ಮಾಡಿದೆ. 14 ದಿನಗಳ ಬಳಿಕ ನಗರದಲ್ಲಿ ಪ್ರತ್ಯಕ್ಷವಾಗಿ ಈ ವ್ಯಕ್ತಿ ಓಡಾಡುತ್ತಿದ್ದಾರೆ ಇದನ್ನು ಕಂಡ ಅದದ ಈ ವೇಳೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್​ ಅವರು ಸುರೇಶ್​ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಎಲ್ಲಿದ್ದಿ, ಅಧಿಕಾರಿಗಳಿಗೆ ಮಾಹಿತಿಯನ್ನಾದರೂ ನೀಡಬಹುದಿತ್ತು ಎಂದು ಕೇಳಿದ್ದಾರೆ. ಸತ್ತಿದ್ದಾನೆಂದು ತಿಳಿದ ವ್ಯಕ್ತಿ ಬದುಕಿ ಬಂದಿರುವುದಕ್ಕೆ ಆತನ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.