ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯೋರ್ವರನ್ನು ನಿಂದಿಸಿ ಥಳಿಸಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ನ್ಯಾಯಾಧೀಶರು 50 ಸಾವಿರ ರೂ. ಮೊತ್ತದ ಬಾಂಡ್ ನ್ನು ನ್ಯಾಯಾಲಯಕ್ಕೆ ನೀಡುವಂತೆ ಎಂದು ಕಡೂರು 2ನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿ ಗ್ರಾಮದ ನಿವಾಸಿ ಶೈಲಾ 2017ರ ಅಕ್ಟೋಬರ್ 27ರಂದು ತಮ್ಮ ತಾಯಿ ಸಾಕಮ್ಮ ಅವರೊಂದಿಗೆ ಮನೆಯಲ್ಲಿರುವಾಗ ಮನೆಗೆ ನುಗ್ಗಿದ ನಾಗರಾಜ ಹಾಗೂ ಮಂಜುಳಾ ಶೈಲಾ ಅವರನ್ನು ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ್ದ ಬಗ್ಗೆ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಾಗಿ ಆರೋಪಿಗಳನ್ನು ವಿಚಾರಣಿ ನಡೆಸಿದ ಕಡೂರು ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ನ ನ್ಯಾಯಾಧೀಶ ಎಂ.ಎನ್.ರಾಮ್‌ಪ್ರಶಾಂತ ಅವರು, ನಾಗರಾಜ ಮತ್ತು ಮಂಜುಳಾ ಅಪರಾಧ ಎಸಗಿರುವುದು ಸಾಬೀತಾಗಿದ್ದರಿಂದ ಪಿಒ ಆ್ಯಕ್ಟ್‌ನಡಿ ತಲಾ 50 ಸಾವಿರ ರೂ. ಮೊತ್ತದ ಬಾಂಡ್ ಅನ್ನು ನ್ಯಾಯಾಲಯಕ್ಕೆ ನೀಡುವಂತೆ ತೀರ್ಪು ನೀಡಿದ್ದಾರೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಪ್ರಕರಣದ ಸಂಬಂಧ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನಾಜಿಯಾ ಪರ್ವಿನ್ ವಾದ ಮಂಡನೆ ಮಾಡಿದ್ದರು.
ರೌಡಿಶೀಟರ್ ಹಂದಿಅಣ್ಣಿ ಹತ್ಯೆ ನಡೆಸಿದ್ದ ಪಾತಕಿಗಳ ಶರಣಾಗತಿ :
ಕಳೆದ ಕೆಲವು ದಿನಗಳ ಹಿಂದೆ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ರೌಡಿಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗತಿ ಹೊಂದಿದ್ದಾರೆ.
ಶಿವಮೊಗ್ಗದ ನಡು ರಸ್ತೆಯಲ್ಲಿ ಹಾಡಹಗಲೇ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಜನ ಬೆಚ್ಚಿ ಬೀಳುವಂತೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಬಳಿಕದಲ್ಲಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಈ ಮಧ್ಯೆ ನಿನ್ನೆ ತಡರಾತ್ರಿ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗತಿ ಹೊಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಅವರ ಕಛೇರಿಗೆ ಬಂದು ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿರುವ ಆರೋಪಿಗಳು ಸದ್ಯ ಚಿಕ್ಕಮಗಳೂರು ಪೊಲೀಸರ ವಶದಲ್ಲಿದ್ದು ಈ ಕುರಿತಾಗಿ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬೀಳಲಿದೆ.

.jpeg)



0 Comments