ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ಶಿವಮೊಗ್ಗದಲ್ಲೆಡೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಶಿವಮೊಗ್ಗ ನಗರದಲ್ಲಿ 50 ಚೆಕ್ ಪೋಸ್ಟ್ ತೆರೆದು ಅನುಮಾನಾಸ್ಪದವಾಗಿ ಓಡಾಡುವ ವಾಹನ ಮತ್ತು ವ್ಯಕ್ತಿಗಳ ತಪಾಸಣೆ ಮಾಡಿದ್ದಾರೆ.
ನಗರದ ವೈನ್ ಶಾಪ್ ಸುತ್ತ ಹಾಗೂ ನಿರ್ಜನ ಪ್ರದೇಶ ಗಳಲ್ಲಿ ಕುಡಿದು ಜನರಿಗೆ ತೊಂದರೆ ಕೊಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ಕೈಗೊಂಡು, 11 ಅಬಕಾರಿ ಪ್ರಕರಣಗಳು, 350 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು, 93 ಲಘು ಪ್ರಕರಣಗಳು, 96 ತಂಬಾಕು ಪ್ರಕರಣಗಳು , 10 ಗಾಂಜಾ ಸೇವನೆ ಮಾಡಿದ ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ 1 ತಲ್ವಾರ್, 4 ಹರಿತ ವಾದ ಡ್ಯಾಗರ್ ಗಳನ್ನೂ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಕಾರ್ಯಾಚರಣೆಯು ನಿರಂತರವಾಗಿ ನಡೆಯುತ್ತಿದ್ದು, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಒಂದು ಗಂಟೆಗಳ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.





0 Comments