ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ಕಾಲೇಜನ್ನು ದೇರಳಕಟ್ಟೆಗೆ ಸ್ಥಳಾಂತರ ಮಾಡಲು ಸರ್ಕಾರ ಆದೇಶಿಸಿದೆ.
ಈ ಆದೇಶವನ್ನು ವಿರೋಧಿಸಿ ಮುತ್ತಿನಕೊಪ್ಪದ ಗ್ರಾಮ ಪಂಚಾಯತ್ ಎದುರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಸಹ ಭಾಗಿಯಾಗಿದ್ದರು.
ಇದನ್ನೂ ಓದಿ : ಹಕ್ಕುಪತ್ರ ಹಗರಣದ ಬಳಿಕ ಶೃಂಗೇರಿಗೆ ಮೂರನೇ ತಹಸೀಲ್ದಾರ್ ಆಗಿ ಗೌರಮ್ಮ.ಪಿ ನೇಮಕ
ಮುತ್ತಿನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ಶಾಲೆಯನ್ನು ಮಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ, ಶಾಲೆ ಸ್ಥಳಾಂತರದ ಕುರಿತು ಶಾಸಕರ ಗಮನಕ್ಕೂ ತಾರದೆ ಕಳೆದ 26 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾಲೇಜನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಈ ಭಾಗದಲ್ಲಿ ಬಡವರ್ಗದ ಜನರ ಮಕ್ಕಳು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಜನರ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಲಾ ವಿಭಾಗ ಮಾತ್ರ ಈ ಕಾಲೇಜಿನಲ್ಲಿದ್ದು ಕಳೆದ ಸಾಲಿನಲ್ಲಿ 13 ಜನ ವಿದ್ಯಾರ್ಥಿಗಳು ದಾಖಲಾಗಿದ್ದು ಈ ಸಾಲಿನಲ್ಲಿ ಈಗಾಗಲೇ 12 ಜನರು ದಾಖಲಾಗಿದ್ದು ಕಾಲೇಜಿನ ಸ್ಥಳಾಂತರ ರದ್ದಾಗುವವರೆಗೂ ಸುದೀರ್ಘ ಹೋರಾಟ ನಡೆಸುವ ಎಚ್ಚರಿಕೆಯನ್ನು ಸ್ಥಳೀಯರು ಈ ಸಂದರ್ಭದಲ್ಲಿ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಮಾಜಿ ಸಚಿವ ಡಿ.ಎನ್ ಜೀವರಾಜ್ ರಿಂದ ಪತ್ರ :
ಮುತ್ತಿನಕೊಪ್ಪದ ಸರ್ಕಾರಿ ಕಾಲೇಜನ್ನು ವಿದ್ಯಾರ್ಥಿಗಳು ಕಡಿಮೆಯಿರುವ ಉದ್ದೇಶದಿಂದ ಸ್ಥಳಾಂತರ ಮಾಡಲು ಹೊರಡಿಸಿರುವ ಆದೇಶ ಸರಿಯಲ್ಲ. ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಕ್ರಮದಿಂದ ತೊಂದರೆಯಾಗುತ್ತದೆ, ಆದುದರಿಂದ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಪತ್ರದ ಮುಖಾಂತರ ಕೋರಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಶಾಸಕ ಟಿ.ಡಿ ರಾಜೇಗೌಡ ಮುಂದಿನ ದಿನಗಳಲ್ಲಿ ಸರ್ವಪಕ್ಷಗಳ ನಿಯೋಗ ಸಚಿವರನ್ನು ಸಂಪರ್ಕಿಸಿ ಕಾಲೇಜಿನ ಅವಶ್ಯಕತೆಯ ಕುರಿತು ಮನದಟ್ಟು ಮಾಡಲಿದೆ. ಮುಂದಿನ ಹೋರಾಟಕ್ಕೆ ನಾನು ನಿಮ್ಮೊಂದಿಗೆ ಸಿದ್ಧನಿದ್ದೇನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ರೀತಿಯ ಸಮಸ್ಯೆಗಳಾಗಳು ಬಿಡುವುದಿಲ್ಲ ಎಂದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಗಳು,ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸ್ಥಳೀಯರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


.jpeg)



0 Comments