ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವ್ಯಾಪ್ತಿಯ ಮುಡುಬ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು ಮುಡುಬದ ಚೌಡೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ಮಂಜುನಾಥ್ ಹೆಗ್ಡೆ ಎಂಬುವವರ ತೋಟಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿದೆ.
ಕಾರಿನ ಚಾಲನೆ ನಡೆಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತರನ್ನು ತರೀಕೆರೆಯ ವಕೀಲ ಸಂಪತ್ ಎಂದು ಗುರುತಿಸಲಾಗಿದೆ. ಅವರೊಂದಿಗೆ ಪತ್ನಿ ಹಾಗೂ ಮಗಳು ಸಹ ಪ್ರಯಾಣ ನಡೆಸುತ್ತಿದ್ದು ಇಬ್ಬರೂ ಪ್ರಾಣಾಪಾಯಾಗಳಿಂದ ಪಾರಾಗಿದ್ದಾರೆ. ಮಗನನ್ನು ಮೂಡುಬಿದ್ರೆ ಶಾಲೆಗೆ ಬಿಟ್ಟು ಬರುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದಾರೆ.







0 Comments