ಹಾಸನ : (ನ್ಯೂಸ್ ಮಲ್ನಾಡ್ ವರದಿ) ಭಾರೀ ಪ್ರಮಾಣದ ಮಳೆಯಾದ ಹಿನ್ನೆಲೆ ಹಾಗೂ ಭೂಕುಸಿತ ಉಂಟಾದ ಹಿನ್ನೆಲೆ ವಾಹನ ಸಂಚಾರಕ್ಕೆ ಶಿರಾಡಿ ಘಾಟಿಯಲ್ಲಿ ನಿರ್ಬಂಧ ಹೇರಲಾಗಿತ್ತು, ಪ್ರಸ್ತುತ ಲಘು ವಾಹನಗಳಿಗೆ ಸಂಚಾರ ನಡೆಸಲು ಅವಕಾಶ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಮಳೆ ಸೃಷ್ಟಿಸಿದ ಅವಾಂತರ ; ಶೃಂಗೇರಿಯಿಂದ ಹೊರನಾಡು ಸಂಪರ್ಕ ಕಲ್ಪಿಸುವ ಕೊಗ್ರೆ ಸೇತುವೆ ಕುಸಿತ
ಬೆಂಗಳೂರು ಹಾಗೂ ಮಂಗಳೂರಿನೆಡೆಗೆ ಪ್ರಯಾಣ ಬೆಳೆಸುವ ಪ್ರವಾಸಿಗರು ಹೆಚ್ಚಾಗಿ ಶಿರಾಡಿ ಘಾಟ್ ನ ಮೂಲಕವೇ ಪ್ರಯಾಣ ನಡೆಸುತ್ತಾರೆ. ಭಾರೀ ಮಳೆಯ ಹಿನ್ನೆಲೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಶಿರಾಡಿ ಘಾಟ್ ನ ಪರ್ಯಾಯ ಮಾರ್ಗದ ಮುಖೇನ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.
ಕಾರುಗಳು, ಜೀಪ್, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಹಾಗೂ ಆಂಬುಲೆನ್ಸ್ ಗಳು ಮಾತ್ರ ಪರ್ಯಾಯ ಮಾರ್ಗದಲ್ಲಿ ಓಡಾಡಲು ಅನುಮತಿ ಸೂಚಿಸಲಾಗಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ತಲುಪಲು ಸಕಲೇಶಪುರ - ಆನೆಮಹಲ್- ಕ್ಯಾನಹಳ್ಳಿ- ಚಿನ್ನಳ್ಳಿ- ಕಡಗರವಳ್ಳಿ- ಮಾರನಹಳ್ಳಿ ಮಾರ್ಗದ ಮೂಲಕ ಮಂಗಳೂರು ತಲುಪಬಹುದು ಅಂತೆಯೇ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಮಾರನಹಳ್ಳಿ - ಕಾಡುಮನೆ - ಹಾರ್ಲೆ - ಕೂಡಿಗೆ - ಆನೆಮಹಲ್ - ಸಕಲೇಶಪುರ ಮಾರ್ಗದ ಮೂಲಕ ಮಂಗಳೂರು ತಲುಪುವುದು ಹಾಗೂ ಈ ಭಾಗದಲ್ಲಿ ಸಂಚಾರ ನಡೆಸುವವರು ವೇಗದ ಮಿತಿ 30 ಕಿ.ಮಿ / ಪ್ರತಿ ಗಂಟೆಗೆ ಎಂದು ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಸಿಂಗಲ್ ಲೇನ್ ಸಂಚಾರಕ್ಕೆ (ಏಕಮುಖ ಸಂಚಾರ) ಮಾತ್ರ ಅವಕಾಶ ನೀಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಗಳಾದ ಆರ್ ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಕಾಲುಜಾರಿ ಹಳ್ಳಕ್ಕೆ ಬಿದ್ದು ಮಹಿಳೆ ದುರ್ಮರಣ :
ತೋಟದ ಕೆಲಸಕ್ಕೆಂದು ಹೋಗಿದ್ದ ಮಹಿಳೆಯೋರ್ವರು ಹಳ್ಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದ್ದು, ಮೃತ ಮಹಿಳೆಯನ್ನು ಭವಾನಿ ಶಂಕರ್ ಎಂದು ಗುರುತಿಸಲಾಗಿದೆ.
ಎಂದಿನಂತೆ ಮಹಿಳೆಯು ತೋಟದ ಕೆಲಸಕ್ಕೆಂದು ತೆರಳಿದ್ದು ಸಂಜೆಯಾದರೂ ಮನೆಗೆ ಬಾರದ್ದನ್ನು ಕಂಡು ಕುಟುಂಬಸ್ಥರು ಆತಂಕದಿಂದ ಮಹಿಳೆಯನ್ನು ಹುಡುಕಾಡಿದ್ದರೆ. ಸುಮಾರು ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಮಹಿಳೆಯ ಶವ ಬಾಳೆಹಿತ್ತಲು ಹಳ್ಳದಲ್ಲಿ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆಯು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕಳೆದುಕೊಂಡಿರುವ ಕುಟುಂಬವರ್ಗ ಹಾಗೂ ಸ್ಥಳೀಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.




.jpeg)

0 Comments