ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಡಹಗಲೇ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ವರದಿಯಾಗಿದೆ. 

ಬೈಕಿನಲ್ಲಿ ಬಂದ ಇಬ್ಬರು ಹಂತಕರು ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯನ್ನು ಬಿಗಿದುಕೊಂದಿದ್ದಾರೆ. ಹತ್ಯೆಗೀಡಾದ ಮಹಿಳೆಯನ್ನು ಹಾಸನದ ಲಕ್ಷೀಪುರ ಬಡಾವಣೆಯ ಕುಮಾರ್ ಎಂಬುವವರ ಪತ್ನಿ ಮಂಜುಳಾ ಎನ್ನಲಾಗಿದೆ. ಚಿನ್ನದ ಅಂಗಡಿಯನ್ನು ಇಟ್ಟುಕೊಂಡು ವ್ಯವಹರಿಸುತ್ತಿದ್ದ ಕುಮಾರ್ ಅವರ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಮಂಜುಳಾ ಅವರನ್ನು ಬೆದರಿಸಿ ಲಾಕರ್ ನ ಕೀ ಪಡೆದು ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ದೋಚಿ ಆಕೆಯನ್ನು ಕೊಂದು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. 


ಮದ್ಯಾಹ್ನದ ವೇಳೆಗೆ ಊಟಕ್ಕೆಂದು ಮನೆಗೆ ಬಂದ ಪತಿ, ಕುಮಾರ್ ಈ ಘಟನೆಯನ್ನು ಕಂಡು ಪೊಲೀಸರಿಗೆ ಈ ಕುರಿತಾಗಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹಾಸನದ ಪೆನ್ಷನ್‌ಮೊಹಲ್ಲಾ ಠಾಣೆಯ ಪೊಲೀಸರು ಹಾಗೂ ಬೆರಳಚ್ಚು ತಜ್ಚರು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದಾರೆ. 

ಘಟನಾ ಸಂಬಂಧ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.