ಕಡೂರು : (ನ್ಯೂಸ್ ಮಲ್ನಾಡ್ ವರದಿ) ಸಾಲ ಬಾಧೆಯಿಂದ ಬೇಸತ್ತ ರೈತ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಶೃಂಗೇರಿಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KSRTC ಬಸ್ ಹಾಗೂ KKB ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಲಿಂಗ್ಲಾಪುರ ಗ್ರಾಮದ ಕೃಷಿಕ 45 ವರ್ಷದ ಯೋಗೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ರೈತ ಯೋಗೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6

ಯೋಗೀಶ್ ಅವರ ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಹಾಗೂ ಅವರ ದೊಡ್ಡಪ್ಪನ ಜಮೀನನ್ನು ಗುತ್ತಿಗೆ ಪಡೆದು ಟೊಮ್ಯಾಟೋ ಬೆಳೆಯನ್ನು ಬೆಳೆಯಲು ಸಂಘಗಳಲ್ಲಿ ಚೀಟಿ ವ್ಯವಹಾರ ಹಾಗೂ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು ಎನ್ನಲಾಗಿದ್ದು, ಪಡೆದ ಸಾಲವನ್ನು ಹಿಂದಿರುಗಿಸಲು ಟೊಮ್ಯಾಟೋ ಬೆಳೆಗೆ ರೋಗ ಬಂದು ಸಂಪೂರ್ಣ ನೆಲಕಚ್ಚಿದ ಪರಿಣಾಮ ನಷ್ಟ ಅನುಭವಿಸಿ ಸಾಲ ತೀರಿಸಲು ಸಾಧ್ಯವಾಗದ ಕಾರಣ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾವಿನ ಕುರಿತು ಕಂಬನಿ ಮಿಡಿದಿರುವ ಕುಟುಂಬವರ್ಗ ಹಾಗೂ ಸ್ಥಳೀಯರು ದೇಶದ ಬೆನ್ನೆಲುಬಾದ ರೈತನಿಗೆ ಇಂತಹ ಸ್ಥಿತಿ ಬಂದಿರುವುದು ಶೋಚನೀಯ, ಸರ್ಕಾರ ರೈತರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿ ಅವರ ಜೀವನಕ್ಕೆ ನೆರವಾಗಬೇಕು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಶಾಹೀದ್ ಖುರೇಷಿ : 

ಶಿವಮೊಗ್ಗ : ಪೊಲೀಸರು ಆರೋಪಿಯನ್ನು ಬಂಧಿಸಲೆಂದು ತೆರಳಿದಾಗ ಪೊಲೀಸರಿಗೇ ಚೂರಿ ಇರಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹಳೇ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಶೀಟರ್ ಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಚಾಕು ಇರಿತ ನಡೆದಿದೆ. 



ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಸಿಬ್ಬಂದಿಗಳಾದ ಗುರುನಾಯ್ಕ್ ಹಾಗೂ ರಮೇಶ್ ಹಲ್ಲೆಗೊಳಗಾದವರು. ಪೊಲೀಸರು ಬಂಧಿಸಲೆಂದು ತೆರಳಿದ ಸಂದರ್ಭದಲ್ಲಿ ಶಾಹೀದ್ ಖುರೇಷಿ ಎಂಬ ರೌಡಿ ಶೀಟರ್ ಪೊಲೀಸ್ ಪೇದೆಯ ಎದೆಗೆ ಚಾಕು ಇರಿದಿದ್ದಾನೆ. ಪೊಲೀಸರು ಪುನಃ ಹಿಡಿಯಲು ತೆರಳಿದಾಗ ಮತ್ತೆ ಲಾಂಗು ಬೀಸಿದ ಪರಿಣಾಮ ಜೀವ ರಕ್ಷಣೆಯ ಸಲುವಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. 

ಗಾಯಗೊಂಡಿರುವ ಇಬ್ಬರು ಪೊಲೀಸರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಹ್ಯಾದ್ರಿ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಆಸ್ಪತ್ರೆಗೆ ಭೇಟಿ ನೀಡಿರುವ ಎಸ್ಪಿ ಲಕ್ಷ್ಮೀಪ್ರಸಾದ್ ಪೊಲೀಸ್ ಸಿಬ್ಬಂದಿಗಳಾದ ಗುರುನಾಯ್ಕ್ ಹಾಗೂ ರಮೇಶ್ ಅವರ ಆರೋಗ್ಯ ವಿಚಾರಣೆ ನಡೆಸಿದರು.