ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಟಿ. ರವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಚರಿಸಿದರು. 

ವೀಡಿಯೋ ನೋಡಿ : ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಬಿರುಕು

ಚಿಕ್ಕಮಗಳೂರು ನಗರದ ವಾರ್ಡ್ ನಂಬರ್ 34 ರ ಬಾಳೇಹಳ್ಳಿಯಲ್ಲಿರುವ ವಿದ್ಯಾನಗರ ಪಾರ್ಕ್ ಸ್ವಚ್ಛತೆ ಹಾಗೂ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಮಾನ್ಯ ಶಾಸಕರ ಹುಟ್ಟು ಹಬ್ಬವನ್ನು ಆಡಂಬರಗಳಿಂದ ಮಾಡದೆ, ಸರಳವಾಗಿ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ನಗರದ ವಿವಿಧಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಅಟಲ್ ಜೀ ಶಕ್ತಿಕೇಂದ್ರದ ಅಧ್ಯಕ್ಷರಾದ ಬಾಳೇಹಳ್ಳಿ ಪರಮೇಶ್, ಕಡೂರು ರುದ್ರೇಶ್, ಚೇತನ್, ಭೂತ್ ಅಧ್ಯಕ್ಷರಾದ ಕುಮಾರ್ ನಾಯಕ್,  ಚೇತನ್, ಸ್ಥಳೀಯ ಮುಖಂಡರುಗಳು ಹಾಗೂ ಸಾರ್ವನಿಕರು ಉಪಸ್ಥಿತರಿದ್ದರು. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6


ಪಾರ್ಕ್ ಸ್ವಚ್ಛತಾ ಕಾರ್ಯಕ್ರಮ :

ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಬಳಿ ಇರುವ ಶಾಲೆಯಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಮಯದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಪ್ರೇಮ್ ಕುಮಾರ್, ಬ್ಯಾಟರಿ ಮಂಜು, ಓಬಿಸಿ ಮೋರ್ಚಾದ ಸದಸ್ಯರಾದ ಶಂಕರ್, ವೆಂಕಟೇಶ್, ರಾಜು ,  ಗೋವಿಂದು, ಕೃಷ್ಣಮೂರ್ತಿ, ನವೀನ್, ಇತರೆ ಮುಖಂಡರು ಉಪಸ್ಥಿತರಿದ್ದರು. ಅಂತೆಯೇ ಚಿಕ್ಕಮಗಳೂರು  ನಗರದ ತಮಿಳು ಕಾಲೋನಿಯ ಪಾರ್ಕ್ ಸ್ವಚ್ಛತಾ ಕಾರ್ಯ ಹಾಗೂ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಕಾರ್ಯಕರ್ತರಿಂದ ನಡೆಯಿತು. ಈ ಸಮಯದಲ್ಲಿ ಅಲ್ಲಿದ್ದ ಕಾರ್ಯಕರ್ತರಿಗೆ ಸಿಹಿ ವಿತರಿಸುವುದು ಹಾಗೂ ಉಪಹಾರ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಗರಸಭಾ ನಾಮಿನಿ ಸದಸ್ಯರಾದ ರವಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರ್ ಅವರು, ಮುನ್ನಿ ಅವರು, ಸ್ಥಳೀಯ ಸಂಘಟನಾ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಾರ್ವಜನಿಕರಿಗೆ ಸಿಹಿ ವಿತರಣೆ :

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಟಿ ರವಿ ಅವರ ಹುಟ್ಟು ಹಬ್ಬದ ಅಂಗವಾಗಿ ಇಂದು ಮಾರ್ಕೆಟ್ ರಸ್ತೆಯ ಪೋಲಿಸ್ ಸ್ಟೇಷನ್ ಪಕ್ಕದಲ್ಲಿನ ಆಟೋ ರಿಕ್ಷಾ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಕೋವಿಡ್ ನ ಅವಧಿಯಲ್ಲಿ ಮುತುವರ್ಜಿ  ವಹಿಸಿ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ನಡೆಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ನಗರದ ವಾರ್ಡ್ ನಂಬರ್ 35 ರ ಕೆಂಪನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೋವಿಡ್ 19 ಬೂಸ್ಟರ್ ಡೋಸ್ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀ ವರಸಿದ್ಧಿ ವೇಣುಗೋಪಾಲ್ ರವರು ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಅವರು ನಗರದ ಜನರ ಉತ್ತಮ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಹತ್ತಿರದಲ್ಲಿ ಸುಲಭವಾಗಿ ಕೊವಿಡ್ ಲಸಿಕೆ ದೊರೆಯುವಂತೆ ಹಾಗೂ ಶಾಸಕರ ಹುಟ್ಟು ಹಬ್ಬದ ನೆನಪಿಗೋಸ್ಕರ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅತೀ ಸಂತೋಷವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಪುಷ್ಪರಾಜ್, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಕುರುವಂಗಿ ವೆಂಕಟೇಶ್, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ರವರಾದ ಸೀತಾರಾಮ್ ಭರಣ್ಯ, ಬಿಜೆಪಿ ಮುಖಂಡರುಗಳಾದ ಡಾಕ್ಟರ್ ಮೋಹನ್, ಬೂತ್  ಅಧ್ಯಕ್ಷರಾದ ರಾಜು, ಮಂಜುನಾಥ್, ಚೇತನ್ ಜಯಪ್ರಕಾಶ್, ನಗರಸಭೆಯ ಆಶ್ರಯ ಸಮಿತಿ ಸದಸ್ಯರಾದ ನವೀನ್ ಕುಮಾರ್ ವಾರ್ಡ್ ಪ್ರಮುಖರು ಈ ಕಾರ್ಯದಲ್ಲಿ ಭಾಗವಹಿಸಿದರು. 


ಗಿಡನೆಡುವ ಕಾರ್ಯಕ್ರಮ : 

ಸಿ.ಟಿ ರವಿ ಅವರ ಜನ್ಮ ದಿನದ ಪ್ರಯುಕ್ತ ಇಂದು ನಗರದ ತೊಗರಿಹಂಕಲ್ ವೃತ್ತದಲ್ಲಿ ರಸ್ತೆ ವಿಭಜಕಗಳ ನಡುವೆ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಮಾತನಾಡಿದ ನಗರ ಸಭಾ ಅಧ್ಯಕ್ಷರಾದ ಶ್ರೀಯುತ ವರಸಿದ್ಧಿ ವೇಣುಗೋಪಾಲ್ ರವರು ಚಿಕ್ಕಮಗಳೂರು ನಗರವನ್ನು ಹಸಿರು ನಗರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಸ್ತೆಯ ಎಲ್ಲ ವಿಭಾಜಕಗಳ ನಡುವೆ ಗಿಡಗಳನ್ನು ನೆಡುವ ಯೋಜನೆಯನ್ನು ನಗರಸಭೆಯು ಹೊಂದಿದೆ, ಮುಂದಿನ ದಿನಗಳಲ್ಲಿ ನಗರದ ಎಲ್ಲ ಕಡೆ ಗಿಡ ನೆಡುವ ಮೂಲಕ ನಗರವನ್ನು ಹಚ್ಚ ಹಸಿರಾಗಿಸುವ  ಯೋಜನೆಯಿದೆ, ಎಂದು ತಿಳಿಸಿದರು. ಈ ಸಮಯದಲ್ಲಿ ಅಲ್ಲಿನ ನಗರಸಭಾ ಸದಸ್ಯರಾದ ರೂಪ ಕುಮಾರ್ ರವರು, ನಗರಸಭಾ ಆಯುಕ್ತರದ ಬಸವರಾಜ್ ರವರು, AEE ಕುಮಾರ್ ಅವರು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಶಿ ಆಲ್ದೂರ್ ಸನಾತನ, ಮಹಿಳಾ ಮೋರ್ಚಾದ ನಗರಾಧ್ಯಕ್ಷರಾದ ಶೋಭಾ ರಾಜೇಶ್ ಅವರು, ಪವಿತ್ರ ರವರು, ಪ್ರೀತಿ ರವರು, ನಂದಿನಿ ರವರು, ಯಶೋಧ, ಗೀತಾ, ಮಹೇಶ್, ಸಂತೋಷ್ ಜೈನ್, ಪ್ರಮೋದ್, ಸಂಜು, ಸತೀಶ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.


ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಸಿಹಿ ವಿತರಣೆ : 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಟಿ ರವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಚಿಕ್ಕಮಗಳೂರಿನ ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಸಿಹಿ ವಿತರಿಸುವುದರ ಜೊತೆಗೆ ವೃದ್ಧಾಶ್ರಮದಲ್ಲಿರುವವರಿಗೆ  ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ, ಊಟ ಬಡಿಸುವುದರ ಜೊತೆಗೆ ಪದಾಧಿಕಾರಿಗಳು ಮಧ್ಯಾಹ್ನದ ಊಟವನ್ನು ಅಲ್ಲಿಯೇ ಅವರೊಂದಿಗೆ ಮಾಡಿದರು. ಊಟದ ಬಳಿಕ ಅಲ್ಲಿನ ಸಮಸ್ಯೆಗಳು ಹಾಗೂ ಅವರ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಸಾಧ್ಯವಾಗುವ ಸಹಾಯವನ್ನು ಮಾಡಲಾಗುವುದು ಎಂಬ ಭರವಸೆಯನ್ನು ಬಿಜೆಪಿಯ ಮುಖಂಡರು ಹಾಗೂ ಸಿ.ಟಿ ರವಿ ಆಪ್ತವಲಯದವರು ನೀಡಿದರು. ಈ ಸಮಯದಲ್ಲಿ ನಗರ ಸಭೆಯ ಅಧ್ಯಕ್ಷರಾದ ಶ್ರೀಯುತ ವರಸಿದ್ಧಿವೇಣುಗೋಪಾಲ್, ನಗರ ಸಭೆಯ ಮಾಜಿ ಅಧ್ಯಕ್ಷರಾದ ತಮ್ಮಯ್ಯ, ದೇವರಾಜ್ ಶೆಟ್ಟಿ, ಪ್ರೇಮ್ ಕುಮಾರ್, ಪುಷ್ಪರಾಜ್, ರಾಜಪ್ಪ, ರವಿ, ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.