ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ನಾಲ್ಕು ದಿನಗಳ ಹಿಂದೆ ಶಾಲೆಯಿಂದ ಮನೆಗೆ ಮರಳುವ ವೇಳೆ ಕೈಕಾಲು ಹಾಗೂ ಛತ್ರಿಯನ್ನು ತೊಳೆಯುವ ಸಲುವಾಗಿ ರಭಸವಾಗಿ ಹರಿಯುತ್ತಿದ್ದ ಹಳ್ಳಕ್ಕೆ ತೆರಳಿ ಕೊಚ್ಚಿ ಹೋದ ಬಾಲಕಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. 

ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ, ಬಾಲಕಿಯ ಕುರಿತು  ಯಾವುದೇ ಸುಳಿವುಗಳು ಸಿಗದೇ ಇರುವುದು ಪೋಷಕರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ. 

ಇದನ್ನೂ ಓದಿ : ಅಂತಿಮ ವಿಧಿ ವಿಧಾನ ನಡೆಯುವ ವೇಳೆ ಸಾವಿನ ಕುರಿತು ವ್ಯಕ್ತವಾದ ಅನುಮಾನ

ಚಿಕ್ಕಮಗಳೂರಿನ ಹೊಸಪೇಟೆ ಗ್ರಾಮದಲ್ಲಿರುವ ಹಳ್ಳದಲ್ಲಿ ಬಾಲಕಿ ಸುಪ್ರೀತಾ ಕೊಚ್ಚಿಹೋಗಿದ್ದಳು, ಈ ನಂತರದಲ್ಲಿ ಆಕೆಯನ್ನು ಪತ್ತೆ ಮಾಡುವ ಸಲುವಾಗಿ SDRF, ಅಗ್ನಿಶಾಮಕದಳ, ಧರ್ಮಸ್ಥಳ ವಿಪತ್ತು ಸಿಬ್ಬಂದಿ ಸೇರಿ ಮೂರು ರಕ್ಷಣಾ ತಂಡಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ. ಆದರೆ ಬಾಲಕಿಯ ಕುರಿತಾಗಿ ಯಾವುದೇ ಮಾಹಿತಿಗಳು ಈ ವರೆಗೆ ಲಭ್ಯವಾಗಿಲ್ಲ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6


ಶೋಧ ನಡೆಸುತ್ತಿರುವ ಸಿಬ್ಬಂದಿಗಳಿಗೆ ಇತ್ತ ​ಹೊಸಪೇಟೆ, ಕಟ್ಟೆಹೊಳೆ, ಹಿರೇಬಿದ್ದರೇ, ಸಿದ್ದರಹಳ್ಳಿ ಗ್ರಾಮಗಳ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ, ಆದರೂ ಬಾಲಕಿ ಕುರಿತಾದ ಯಾವುದೇ ಗುರುತುಗಳು ಈ ವರೆಗೆ ಪತ್ತೆಯಾಗಿಲ್ಲ. 

ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಮನೆಯವರಿಗೆ ಧೈರ್ಯ ತುಂಬುತ್ತಿದ್ದಾರೆ. ಬಾಲಕಿಯನ್ನು ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರೆದಿದ್ದು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ರಘುವೀರ್ ಭಟ್ ನಿಧನ : 

ತೀರ್ಥಹಳ್ಳಿ : ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ರಘುವೀರ್ ಭಟ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರಥಬೀದಿಯ ನಿವಾಸದಲ್ಲಿ ಇಂದು ರಘುವೀರ್ ಭಟ್ (90) ಅವರು ನಿಧನರಾಗಿದ್ದು ಮೃತರ ಅಗಲುವಿಕೆಯ ಕುರಿತು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. 


ಮೃತ ರಘುವೀರ್ ಭಟ್ ಅವರು 1947 ರಲ್ಲಿ ನಡೆದ ಭಾರತದ ಮೊಟ್ಟ ಮೊದಲ ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಿದ್ದರು, ಸಮಾಜಕ್ಕಾಗಿ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದ ಅವರು ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತೀರ್ಥಹಳ್ಳಿ ಭಾಗದ ಹಿರಿಯ ಬಿಜೆಪಿ ಮುಖಂಡರಾಗಿದ್ದರು. ಇಂದು ಸಂಜೆ ತೀರ್ಥಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. 

ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಮೃತರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನವನ್ನು ಪಡೆದುಕೊಳ್ಳುವ ಸಲುವಾಗಿ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಆತ್ಮೀಯರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.