ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)  ಮುಸ್ಲಿಂ ಅಸೋಸಿಯೇಷನ್ ವತಿಯಿಂದ ನಗರದ ಅಜಾದ್ ಪಾರ್ಕ್ ವೃತದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

ಜಿಲ್ಲೆಯ ಈ ತಾಲೂಕಿನ ಶಾಲೆಗಳಿಗೆ ಜುಲೈ 09ರ ವರೆಗೆ ರಜೆ ಘೋಷಣೆ ಮಾಡಿದ ಜಿಲ್ಲಾಡಳಿತ

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರು ಹಾಗೂ ಅಲ್ಪಸಂಖ್ಯಾತ ನಾಯಕ ಜನಪ್ರತಿನಿಧಿಗಳ ಮೇಲೆ ಅತಿಯಾದ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿದರು.


ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಹೋ  ರಂಜನ್  ಅಲ್ಪಸಂಖ್ಯಾತ ನಾಯಕರು ಹಾಗೂ ಚಾಮರಾಜಪೇಟೆ ಶಾಸಕರಾದ  ಜಮೀರ್ ಅಹಮದ್ ಖಾನ್ ಅವರನ್ನು ಇಡಿ ಹಾಗೂ ಎಸಿಬಿ ಮುಖಾಂತರ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಹತ್ತಿಕ್ಕುತ್ತಿರುವುದು ನೋಡಿದರೆ ಇದರ ಹಿಂದೆ ಸರ್ಕಾರಗಳು ಮುಂದೆ ಅಲ್ಪಸಂಖ್ಯಾತರ ಮತ್ತು ಜನಪ್ರತಿನಿಧಿಗಳಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ದಮನಿಸುವ ಸಂಚು ರೂಪಿಸುತ್ತಿರುವುದು ಎದ್ದು ಕಾಣುತ್ತಿದೆ.

ಇಡಿ ಹಾಗೂ ಎಸಿಬಿ ಅವರು ಜನಸಾಮಾನ್ಯರಿಗೆ ಸಂವಿಧಾನಾತ್ಮಕವಾದ ನ್ಯಾಯ ನೀಡದೆ ಸಂವಿಧಾನದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸಕ್ಕೆ ಅವರು ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ ಎಂದು ಆರೋಪ ಮಾಡಿದರು.


ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣ, ಪಿಎಸ್ಐ ಹಗರಣ, ಪಠ್ಯಪುಸ್ತಕದಲ್ಲಿ ಗೊಂದಲ ಹೀಗೆ ಹಲವಾರು ಹಗರಣಗಳನ್ನು ಮರೆಮಾಚಲು ಇಂತಹ ದಾಳಿ ಮಾಡುತ್ತಿದ್ದಾರೆ. ಎಸಿಬಿಗೆ ಸಹ ಈ ಹಿಂದೆ ನ್ಯಾಯಾಲಯವು ಚೀಮಾರಿ ಹಾಕಿದ್ದರು ಸಹ ಬುದ್ದಿ ಕಲಿಯದೆ ಸಂವಿಧಾನ ಹಾಗೂ ಕಾನೂನು ಪಾಲಿಸಿದೆ ಅಲ್ಪಸಂಖ್ಯಾತ ನಾಯಕರು ಹಾಗೂ ಜನಪ್ರತಿನಿಧಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ.

ಇದನ್ನು ತಮ್ಮ ಗಮನಕ್ಕೆ ತಂದಿದ್ದು ದಯವಿಟ್ಟು ತಾವು ಈ ಕೂಡಲೇ ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯವನ್ನು ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅಲ್ಪಸಂಖ್ಯಾತರ ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಕಾನೂನು ರಕ್ಷಣೆ ನೀಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಿಜ್ವಾನ್ ಖಾನ್ ಬಾಬರ್, ನಸಿರುಲ್ಲಾ ಜಮೀರ್ ನೈ ಮನ್ ಹಾಜರಿದ್ದರು.