ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಜನಪರ ಒಕ್ಕೂಟ ಹಾಗೂ ವಿಶ್ವ ಮಾನವ ಸಂದೇಶ ವೇದಿಕೆ ಕೊಪ್ಪ ಇವರ ವತಿಯಿಂದ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಾಗಿ ನಾಡು ಕಟ್ಟಿದ ಧೀಮಂತರಿಗೆ ಯಾಕೀ ಅವಮಾನ ಪಠ್ಯ ಪುಸ್ತಕವೋ, ಪಕ್ಷಪಾತವೋ ಎಂಬ ಶೀರ್ಷಿಕೆಯಡಿಯಲ್ಲಿ ಸಂವಾದ, ಚರ್ಚೆ ಹಾಗೂ ಮುಂದೇನು ಎಂಬ ಕುರಿತಾಗಿ ಕಾರ್ಯಕ್ರಮ ಆಯೋಜನೆಗೊಂಡಿದೆ.
ಪರಿಷ್ಕೃತ ಪಠ್ಯವನ್ನು ಕೈಬಿಟ್ಟು ಹಳೆಯ ಪುಸ್ತಕವನ್ನೇ ವಿದ್ಯಾರ್ಥಿಗಳಿಗೆ ನೀಡಬೇಕು ಈ ಪರಿಷ್ಕೃತ ಪಠ್ಯದಲ್ಲಿ ಸಮಾಜ ಸುಧಾರಕರಾದ ಅಂಬೇಡ್ಕರ್, ಬ್ರಹ್ಮಶ್ರೀ ನಾರಾಯಣ ಗುರುಗಳು, ಕನಕದಾಸರು ಸೇರಿದಂತೆ ಅನೇಕ ಗಣ್ಯರ ಪಠ್ಯಗಳನ್ನು ಕಿತ್ತು ಹಾಕಿ ಅವರಿಗೆ ಅವಮಾನ ಮಾಡಲಾಗಿದೆ, ಇದಲ್ಲದೇ ಆದಿ ಶಂಕರಾಚಾರ್ಯರ ಕುರಿತಾಗಿ ತಪ್ಪು ಮಾಹಿತಿ ನೀಡಿರುವ ಪರಿಷ್ಕರಣಾ ಸಮಿತಿಯನ್ನು ಒಪ್ಪಬೇಕೆ? ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ನೇತೃತ್ವ ವಹಿಸಿರುವ ವ್ಯಕ್ತಿ ನಾಡಗೀತೆಯನ್ನು ತಿರುಚಿ ನಾಡಿಗೆ ಅವಮಾನ ಮಾಡಿದ್ದು ಇಂತಹವುಗಳನ್ನು ಎಂದಿಗೂ ಒಪ್ಪಲಾಗುವುದಿಲ್ಲ ಎಂದು ಸಮಿತಿಯು ಆಕ್ರೋಶ ಹೊರಹಾಕಿದೆ.
ಈ ನಿಟ್ಟಿನಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಾಗಿ ಸಂವಾದ ವಿಸ್ಕೃತ ಚರ್ಚೆ ಹಾಗೂ ಮುಂದೇನು ಎಂಬ ನಿರ್ಣಯವನ್ನು ಕೈಗೊಳ್ಳುವ ಸಲುವಾಗಿ ನಾಳೆ ದಿನಾಂಕ 04.07.2022 ರ ಸೋಮವಾರ ಮಧ್ಯಾಹ್ನ 03 ಗಂಟೆಗೆ ಕೊಪ್ಪದ ಪುರಭವನದಲ್ಲಿ ಪಠ್ಯ ಪುಸ್ತಕವೋ ಪಕ್ಷ ಪುಸ್ತಕವೋ ನಾಡು ಕಟ್ಟಿದ ಧೀಮಂತರಿಗೆ ಯಾಕೀ ಅವಮಾನ ಎಂಬ ಶೀರ್ಷಿಕೆಯಡಿಯಲ್ಲಿ ಮಲೆನಾಡು ಜನಪರ ಒಕ್ಕೂಟ ಹಾಗೂ ವಿಶ್ವ ಮಾನವ ಸಂದೇಶ ವೇದಿಕೆ ಕೊಪ್ಪದ ವತಿಯಿಂದ ಆಯೋಜನೆಗೊಂಡಿದೆ.
ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅರಳು ಮರಳಿಗೆ ತುತ್ತಾಗಿದ್ದಾರೆ ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಿಡಿ
ಶೃಂಗೇರಿ : ಭಾರತದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ ಕುರಿತಾಗಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ದೇಶದ ಮಾಜಿ ಪ್ರಧಾನಿ, ಹಿರಿಯ ರಾಜಕೀಯ ಮುತ್ಸದ್ಧಿಯಾದ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಅವರ ಕುರಿತು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅವರು ನಾಲಿಗೆ ಹರಿಬಿಟ್ಟು ಅವರ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ. ಹಿರಿಯ ಮುತ್ಸದ್ದಿ ದೇವೇಗೌಡ ಅವರ ಕುರಿತಾಗಿ ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ, ಅವರು ಅರಳು ಮರಳಿಗೆ ತುತ್ತಾದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜಾತಿ ಬೇಧವನ್ನು ಮರೆತು, ಪಕ್ಷಗಳ ಅಂತರವನ್ನೂ ಮೀರಿ, ಭಾರತದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಅನೇಕ ಗಣ್ಯರು ಗೌರವಿಸುವ ವ್ಯಕ್ತಿಯನ್ನು ಸ್ವತಃ ಕರ್ನಾಟಕದವರೇ ಆದ ರಾಜಣ್ಣನವರು ಇಂತಹ ಶ್ರೇಷ್ಠ ವ್ಯಕ್ತಿಯನ್ನು ಕಡೆಗಾಣಿಸಿ ಅವರ ಕುರಿತಾಗಿ ಟೀಕೆ ಮಾಡಿ ಮಾತನಾಡಿರುವುದು ಖಂಡನಾರ್ಹ ಎಂದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ರಾಜಣ್ಣನವರ ಶೈಲಿಯಲ್ಲಿಯೇ ಅವರಿಗೆ ನಾವು ತಿರುಗೇಟು ನೀಡಬಹುದು ಆದರೆ ಅದರಿಂದಾಗಿ ನಮಗೂ ಅವರಿಗೂ ಯಾವುದೇ ವ್ಯತ್ಯಾಸಗಳಿರುವುದು ಕಂಡು ಬರುವುದಿಲ್ಲ ಅಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ಕೀಳು ಮನಸ್ಥಿತಿ ಹೊಂದಿರುವ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ರಾಜಕೀಯ ನಿವೃತ್ತಿ ಪಡೆಯುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.







0 Comments