ಚಿಕ್ಕಮಗಳೂರು
ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶೃಂಗೇರಿ ಶಿವಣ್ಣ ಆಯ್ಕೆ :
ಕಡೂರು : ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಾ.ಬಿ ಶಿವಶಂಕರ್ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಜುಲೈ 09 ರಂದು ನಡೆಯಲಿರುವ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಹಾಗೂ ಜೆಸಿಐ ಘಟಕದ ಪೂರ್ವಾಧ್ಯಕ್ಷರಾದ ಡಾ.ಬಿ ಶಿವಶಂಕರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಡಾ.ಬಿ ಶಿವಶಂಕರ್ ಅವರು ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶೃಂಗೇರಿ ಜೆಸಿಐ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶೃಂಗೇರಿ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಪದಾಧಿಕಾರಿಗಳು ಹಾರೈಸಿದ್ದಾರೆ.
ಶೃಂಗೇರಿ ಪಟ್ಟಣದ ಹಳೆಯ ಆಸ್ಪತ್ರೆ ಜಾಗವನ್ನು ಸಧ್ಬಳಕೆ ಮಾಡಿಕೊಳ್ಳುವಂತೆ ಒತ್ತಾಯ :
ಶೃಂಗೇರಿ ಪಟ್ಟಣದಲ್ಲಿರುವ ಶೃಂಗೇರಿ ತಾಲೂಕು ಆಸ್ಪತ್ರೆಗೆ ಸೇರಿದ ಜಾಗವನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ಆ ಜಾಗವನ್ನು ಯಾರಿಗೂ ಹಸ್ತಾಂತರ ಮಾಡಬಾರದೆಂದು ತಾಲೂಕು ಆಡಳಿತ ವೈದ್ಯಾಧಿಕಾರಿಗಳನ್ನು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಕೋರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದ ಜಾಗವು ಶೃಂಗೇರಿ ಪಟ್ಟಣದ ಭಾರತೀ ಬೀದಿಯಲ್ಲಿದ್ದು ಅದು ಯಾವುದೇ ರೀತಿಯ ಬಳಕೆಗೆ ಒಳಪಟ್ಟಿರುವುದಿಲ್ಲ, ಪ್ರಸ್ತುತ ತಾಲೂಕು ಆಸ್ಪತ್ರೆ ಇರುವ ಕಟ್ಟಡದಲ್ಲಿಯೂ ಜಾಗದ ಕೊರತೆಯಿರುವ ಕಾರಣ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಾರ್ವಜನಿಕರಿಗೆ ಅನಾನುಕೂಲಗಳು ಉಂಟಾಗಿರುತ್ತದೆ ಈ ನಿಟ್ಟಿನಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಹಾಯವಾಗುವಂತೆ ಆ ಜಾಗದಲ್ಲಿ ಆಯುಷ್ ಚಿಕಿತ್ಸಾಲಯ, ಪ್ರಕೃತಿ ಚಿಕಿತ್ಸಾ ಕೇಂದ್ರ ಅಥವಾ ಹೆರಿಗೆ ಆಸ್ಪತ್ರೆ ಇವುಗಳಲ್ಲಿ ಯಾವುದಾದರೊಂದನ್ನು ಮಾಡಲು ಸೂಕ್ತವಾಗಿರುವ ಜಾಗವಾದ ಕಾರಣ ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ ಹಾಗೂ ಈಗಿರುವ ಸ್ಥಳಾವಕಾಶದ ಕೊರತೆ ಸರಿದೂಗಲಿದೆ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಾಲೂಕು ವೈದ್ಯಾಧಿಕಾರಿಗಳಿಗೆ
ಅಂತೆಯೇ ಶೃಂಗೇರಿ ಪಟ್ಟಣದಲ್ಲಿರುವ ಹಳೆಯ ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳು ಆಸ್ಪತ್ರೆ ಹೋರಾಟ ಸಮಿತಿಯ ಬಳಿಯಿದ್ದು, ಆ ಜಾಗವು ಆಸ್ಪತ್ರೆಯ ಹೆಸರಿನಲ್ಲೇ ಇದ್ದು ಪೂರಕವಾದ ದಾಖಲೆಗಳನ್ನು ಸಹ ಹೊಂದಿರುವ ಕಾರಣ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊರತು ಪಡಿಸಿ ಬೇರಾವುದೇ ವ್ಯಕ್ತಿ, ಸಂಸ್ಥೆ, ಅಥವಾ ಬೇರಾವುದೇ ಇಲಾಖೆಗೆ ಆಸ್ಪತ್ರೆ ಸುಪರ್ದಿಯಿಂದ ಹಸ್ತಾಂತರ ಮಾಡುವುದಕ್ಕೆ ಸಾರ್ವಜನಿಕರ ಹಾಗೂ ಆಸ್ಪತ್ರೆ ಹೋರಾಟ ಸಮಿತಿಯ ತಕರಾರಿದೆ ಎಂದು ತಿಳಿಸಿದೆ.
ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ
ಕಡೂರು : ಸಾಲ ಬಾಧೆಯಿಂದ ಬೇಸತ್ತ ರೈತ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಲಿಂಗ್ಲಾಪುರ ಗ್ರಾಮದ ಕೃಷಿಕ 45 ವರ್ಷದ ಯೋಗೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ರೈತ ಯೋಗೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯೋಗೀಶ್ ಅವರ ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಹಾಗೂ ಅವರ ದೊಡ್ಡಪ್ಪನ ಜಮೀನನ್ನು ಗುತ್ತಿಗೆ ಪಡೆದು ಟೊಮ್ಯಾಟೋ ಬೆಳೆಯನ್ನು ಬೆಳೆಯಲು ಸಂಘಗಳಲ್ಲಿ ಚೀಟಿ ವ್ಯವಹಾರ ಹಾಗೂ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು ಎನ್ನಲಾಗಿದ್ದು, ಪಡೆದ ಸಾಲವನ್ನು ಹಿಂದಿರುಗಿಸಲು ಟೊಮ್ಯಾಟೋ ಬೆಳೆಗೆ ರೋಗ ಬಂದು ಸಂಪೂರ್ಣ ನೆಲಕಚ್ಚಿದ ಪರಿಣಾಮ ನಷ್ಟ ಅನುಭವಿಸಿ ಸಾಲ ತೀರಿಸಲು ಸಾಧ್ಯವಾಗದ ಕಾರಣ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಚಿಕ್ಕಮಗಳೂರಿನಲ್ಲಿ ಜೆಸಿಬಿ ಘರ್ಜನೆ :
ಚಿಕ್ಕಮಗಳೂರು ನಗರದಲ್ಲಿ ಇಂದು ಮತ್ತೆ ಜೆಸಿಬಿಗಳು ಘರ್ಜಿಸಿದೆ. ಚಿಕ್ಕಮಗಳೂರು ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಗಳನ್ನು ಪಟ್ಟಿಮಾಡಿ ನಗರಸಭೆ ಅಧಿಕಾರಿಗಳ ಹಾಗೂ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಮ್ಮುಖದಲ್ಲಿ ಇಂದು ಮನೆಗಳನ್ನು ನೆಲಸಮ ಮಾಡುವ ಕಾರ್ಯಾಚರಣೆ ನಡೆದಿದೆ. ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಬೇರೆ ಬೇರೆ ಮೂಲಗಳ ಜನರು ವಾಸಿಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ನಗರಸಭೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ತೆರವು ಮಾಡುವ ಸಲುವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ನಗರಸಭೆಯ ಅಧಿಕಾರಿಗಳು ಹಾಗೂ ನಗರಸಭಾ ಅಧ್ಯಕ್ಷರು ಸೇರಿದಂತೆ ಅಧಿಕಾರಿಗಳಿದ್ದ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಆಕ್ರೋಶಕ್ಕೀಡಾದ ಅಲ್ಲಿನ ನಿವಾಸಿಗಳು ಜೆಸಿಬಿಯ ಮುಂದೆ ನಿಂತು ಮನೆಗಳನ್ನು ತೆರವು ಮಾಡದಂತೆ ವಿರೋಧಿಸಿದರು. ಜೆಸಿಬಿಯನ್ನು ನಮ್ಮೆಲ್ಲರ ಮೇಲೆ ಹತ್ತಿಸಿ ಆದರೆ ಮನೆಗಳ ಮೇಲೆ ಬೇಡ ಎಂಬ ಆಕ್ರೋಶ ಭರಿತ ಮಾತುಗಳನ್ನಾಡಿದರು.
ಶೃಂಗೇರಿ : ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಮನೆ ಕುಸಿಯುವ ಭೀತಿ
ಶೃಂಗೇರಿ : ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಹಿನ್ನೆಲೆ ಮನೆಗಳಿಗೆ ಹಾನಿ ಉಂಟಾಗುತ್ತಿದೆ, ಮನೆ ಕುಸಿಯುವ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೂಲಕ ಹಾದು ಹೋಗುವ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣಕ್ಕೆ ಸಂಬಂಧಿಸಿ ಕಾಮಗಾರಿಯು ಆರಂಭವಾಗಿದ್ದು, ಈ ಕಾಮಗಾರಿಯಿಂದಾಗಿ ಸಾರ್ವಜನಿಕರ ಮನೆಗಳಿಗೆ ಸಮಸ್ಯೆಯುಂಟಾಗಿದೆ ಮಳೆಗಾಲದ ಅವಧಿಯಲ್ಲಿ ಧರೆಯನ್ನು ತೆಗೆಯುತ್ತಿರುವ ಪರಿಣಾಮ ಮನೆಯು ಕುಸಿಯುವ ಭೀತಿ ಎದುರಾಗಿದೆ ತಡೆಗೋಡೆ ಇಲ್ಲದೆ ಇರುವುದೇ ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಧರೆಯ ಮಣ್ಣು ರಸ್ತೆಯ ಮೇಲೆ ನಿಂತಿದ್ದು ವಾಹನ ಸವಾರರಿಗೆ, ಹಾಗೂ ಈ ದಾರಿಯಲ್ಲಿ ಓಡಾಡುವವರಿಗೆ ಸಮಸ್ಯೆಯಾಗಿದೆ ಅತೀ ಶೀಘ್ರವಾಗಿ ತಡೆಗೋಡೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅರಳು ಮರಳಿಗೆ ತುತ್ತಾಗಿದ್ದಾರೆ ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಿಡಿ
ಭಾರತದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ ಕುರಿತಾಗಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದ ಮಾಜಿ ಪ್ರಧಾನಿ, ಹಿರಿಯ ರಾಜಕೀಯ ಮುತ್ಸದ್ಧಿಯಾದ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಅವರ ಕುರಿತು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅವರು ನಾಲಿಗೆ ಹರಿಬಿಟ್ಟು ಅವರ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ. ಹಿರಿಯ ಮುತ್ಸದ್ದಿ ದೇವೇಗೌಡ ಅವರ ಕುರಿತಾಗಿ ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ, ಅವರು ಅರಳು ಮರಳಿಗೆ ತುತ್ತಾದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜಾತಿ ಬೇಧವನ್ನು ಮರೆತು, ಪಕ್ಷಗಳ ಅಂತರವನ್ನೂ ಮೀರಿ, ಭಾರತದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಅನೇಕ ಗಣ್ಯರು ಗೌರವಿಸುವ ವ್ಯಕ್ತಿಯನ್ನು ಸ್ವತಃ ಕರ್ನಾಟಕದವರೇ ಆದ ರಾಜಣ್ಣನವರು ಇಂತಹ ಶ್ರೇಷ್ಠ ವ್ಯಕ್ತಿಯನ್ನು ಕಡೆಗಾಣಿಸಿ ಅವರ ಕುರಿತಾಗಿ ಟೀಕೆ ಮಾಡಿ ಮಾತನಾಡಿರುವುದು ಖಂಡನಾರ್ಹ ಎಂದರು. ರಾಜಣ್ಣನವರ ಶೈಲಿಯಲ್ಲಿಯೇ ಅವರಿಗೆ ನಾವು ತಿರುಗೇಟು ನೀಡಬಹುದು ಆದರೆ ಅದರಿಂದಾಗಿ ನಮಗೂ ಅವರಿಗೂ ಯಾವುದೇ ವ್ಯತ್ಯಾಸಗಳಿರುವುದು ಕಂಡು ಬರುವುದಿಲ್ಲ ಅಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ಕೀಳು ಮನಸ್ಥಿತಿ ಹೊಂದಿರುವ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ರಾಜಕೀಯ ನಿವೃತ್ತಿ ಪಡೆಯುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.
ದತ್ತಾತ್ರೇಯ ಪೀಠಕ್ಕೆ ಮುಸಲ್ಮಾನರಿಗೆ ಪ್ರವೇಶ ನೀಡಬೇಡಿ ; ಪ್ರಮೋದ್ ಮುತಾಲಿಕ್ ಆಗ್ರಹ :
ಮುಸಲ್ಮಾನರು ಗೋಮಾಂಸದ ಭಕ್ಷಣೆ ಮಾಡುತ್ತಾರೆ ದತ್ತಾತ್ರೇಯ ಪೀಠ ಪ್ರವೇಶಿಸಿ ಅವರು ಅಪವಿತ್ರ ಮಾಡುವುದಕ್ಕೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ ಮಾಡಿದ್ದಾರೆ. ಈ ಕುರಿತು ಧಾರವಾಡ ನಗರದಲ್ಲಿ ಮಾತನಾಡಿದ ಅವರು, ನಿನ್ನೆ ಸಂಪುಟ ಸಭೆಯಲ್ಲಿ ದತ್ತಾತ್ರೇಯ ಪೀಠದ ಬಗ್ಗೆ ಒಂದು ನಿರ್ಣಯ ಕೈಗೊಂಡಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಬಹಳ ವರ್ಷಗಳಿಂದ ಅಲ್ಲಿ ಹಿಂದೂ ಅರ್ಚಕನ ನೇಮಕ ಆಗಬೇಕು ಹಾಗೂ ತ್ರಿಕಾಲ ಪೂಜೆ ಆಗಬೇಕು ಎಂದಿತ್ತು. ನಿನ್ನೆ ಅದಕ್ಕೆ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು ಮುಜಾವರ್‌ನಲ್ಲಿ ಮತ್ತೆ ಬಂದು ಅಪವಿತ್ರ ಮಾಡುವುದು ಬೇಡ. ಅವರು ಗೋಮಾಂಸ ತಿಂತಾರೆ, ದೇವರನ್ನು ನಂಬಲ್ಲ. ನಾಸ್ತಿಕವಾದಿಗಳು, ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರ್ ಎನ್ನುವವರಿಗೆ ಅಲ್ಲಿ ಪ್ರವೇಶ ಬೇಡ, ಅವರು ಪ್ರವೇಶ ಮಾಡಿದರೆ ಅಪವಿತ್ರ ಆಗಲಿದೆ ಎಂದಿದ್ದಾರೆ.
ಶಿವಮೊಗ್ಗ :
ಬಸ್ ಗುದ್ದಿ ನ್ಯೂಸ್ ಪೇಪರ್ ವಿತರಕನ ಸಾವು
ಶಿವಮೊಗ್ಗ : ಕೆ ಎಸ್ ಆರ್ ಟಿ ಸಿ ಬಸ್ ಸೈಕಲ್ ನಲ್ಲಿ ಸವಾರ ಮಾಡುತ್ತಿದ್ದ ವ್ಯಕ್ತಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸೈಕಲ್ ಸವಾರ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಅಗ್ರಹಾರದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು ಕೆ ಎಸ್ ಆರ್ ಟಿ ಸಿ ಬಸ್ ಗುದ್ದಿದ ಪರಿಣಾಮ ಸೈಕಲ್ನ ಮೂಲಕ ಪತ್ರಿಕೆ ವಿತರಣೆ ನಡೆಸುತ್ತಿದ್ದ ಪತ್ರಿಕಾ ವಿತರಕ ದುರ್ಮರಣವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಗಾಂಧಿನಗರದ ಬೆಳಲಮಕ್ಕಿಯ ಗಣೇಶ್ (20) ಎಂದು ಗುರುತಿಸಲಾಗಿದ್ದು, ಪತ್ರಿಕಾ ವಿತರಣೆ ನಡೆಸಿಕೊಂಡು ನಂತರದಲ್ಲಿ ಪ್ಲಂಬಿಂಗ್ ನಡೆಸಿಕೊಂಡು ಮೃತ ಗಣೇಶ್ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು. ಮೃತನನ್ನು ಕಳೆದುಕೊಂಡಿರುವ ಮನೆಯವರು ಅತೀವವಾದ ನೋವನ್ನು ವ್ಯಕ್ತಪಡಿಸಿದ್ದಾರೆ.



0 Comments