ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಉಜ್ವಲ ಭವಿಷ್ಯದ ಕನಸನ್ನು ಹೊಂದಿ ಎಲ್ಲರಂತೆಯೆ ಇದ್ದ ಯುವಕನಿಗೆ ಖಾಯಿಲೆಯೊಂದು ಬಾಧಿಸಿದ್ದು ಆತ ತುರ್ತಾಗಿ ಗುಣಮುಖನಾಗಬೇಕಿರುವ ಉದ್ದೇಶದಿಂದ ಕುಟುಂಬಸ್ಥರು ದಾನಿಗಳ ನೆರವಿಗೆ ಕೈ ಚಾಚಿದ್ದಾರೆ.
ಇದನ್ನೂ ಓದಿ : ಕಾಫಿನಾಡಲ್ಲೊಂದು ಹೇಯ ಕೃತ್ಯ ; ಜನ್ಮಕೊಟ್ಟ ತಾಯಿಗೆ ರಾಡಿನಲ್ಲಿ ಹೊಡೆದು ಹತ್ಯೆ ಮಾಡಿದ ಪಾಪಿ ಮಗ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂವೆ ಗ್ರಾಮದ ಬೀರ್ಗೂರು ದಿವಾಕರ ಹಾಗೂ ಶಾಲಿನಿ ದಂಪತಿಗಳ ಪುತ್ರ ರಿತ್ವಿಕ್ ಒಂದನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಎಲ್ಲರಂತೆ ಉತ್ತಮವಾಗಿದ್ದ ಆರು ವರ್ಷದ ಪುಟ್ಟ ಬಾಲಕ ರಿತ್ವಿಕ್ ಕಳೆದ ಎರಡೂವರೆ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ದೈಹಿಕವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗದೆ ನಿರಾಸಕ್ತಿಯೊಂದಿಗೆ ಬಳಲಿ ಕೊನೆಗೆ ಊಟವನ್ನು ಮಾಡಲು ನಿರಾಕರಿಸುವ ಸ್ಥಿತಿಗೆ ತಲುಪಿದ್ದನು. ಬಾಲಕನ ಈ ವರ್ತನೆಯನ್ನು ಕಂಡ ಪೋಷಕರು ಮಂಗಳೂರಿನ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಆತನಿಗೆ ಥಲೇಸ್ಸಿಮಿಯ ಖಾಯಿಲೆ ಇರುವುದನ್ನು ವೈದ್ಯರು ಧೃಢಪಡಿಸಿರುತ್ತಾರೆ.
ಈ ಬಳಿಕದಲ್ಲಿ ಪೋಷಕರು ಮಗನ ಚಿಕಿತ್ಸೆಗಾಗಿ ಸಾಕಷ್ಟು ವೆಚ್ಚ ಮಾಡುತ್ತಲೆ ಬಂದಿದ್ದು, ಮಧ್ಯಮ ವರ್ಗದ ಕೃಷಿ ಕುಟುಂಬಸ್ಥರಾದ ಈ ಕುಟುಂಬಕ್ಕೆ ಈಗ ಮಗನ ಬದುಕಿಸಿಕೊಳ್ಳಲು ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದ್ದು ರಿತ್ವಿಕ್ ಬದುಕನ್ನು ಹಸನು ಮಾಡಲು ಮಾನವೀಯ ಹೃದಯಗಳ ಸಹಾಯವನ್ನು ಯಾಚಿಸುತ್ತಿದೆ ಆತನ ಕುಟುಂಬ.
ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಿತ್ವಿಕ್ ನೋಡಲು ಲವಲವಿಕೆಯಿಂದ ಇದ್ದರೂ ತಿಂಗಳಾಂತ್ಯಕ್ಕೆ ಈತನಿಗೆ ರಕ್ತ ಕೊಡಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಖ ಬಿಳಿಚಿಕೊಳ್ಳುತ್ತದೆ, ಜ್ವರ ಬಂದರೆ ಕಡಿಮೆಯಾಗುವುದೇ ಇಲ್ಲ, ಬಿಳಿ ರಕ್ತ ಕಣ ಉತ್ಪತ್ತಿಯಾಗದೇ ಇರುವ ಖಾಯಿಲೆಯಾದ ಥಲೆಸ್ಸೀಮಿಯ
ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇರುವುದು ಬಿಳಿ ರಕ್ತಕಣಗಳಿಗೆ ಮಾತ್ರ, ಈ ಬಿಳಿ ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಯಾವುದಾದರೂ ಖಾಯಿಲೆ ಬಂದರೆ ಅದು ಕಡಿಮೆಯಾಗುವುದಿಲ್ಲ. ರಿತ್ವಿಕ್ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪತಿ ನಿಂತು ಹೋಗಿದೆ. ಸಾಮಾನ್ಯ ಜ್ವರ ಬಂದರೂ ಕೂಡ ಮೆದುಳಿಗೆ ಹತ್ತಿಕೊಳ್ಳುತ್ತದೆ. ಇದೀಗ ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿಗೆ ಹೋಗಿಬರುತ್ತಿದ್ದು, ಇತನಿಗೆ ಅಂಟಿದ ಕಾಯಿಲೆ ದೂರವಾಗಬೇಕಾದರೆ ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ ( ಬೋನ್ ಮ್ಯಾರೋ ಟ್ರಾನ್ಸ್ ಪ್ಲೇಟೇಶನ್) ಯಿಂದ ಸಾಧ್ಯ ಎಂದಿದ್ದಾರೆ ಬೆಂಗಳೂರಿನ ವೈದ್ಯರು ಆದರೆ ಇದಕ್ಕೆ 40 ಲಕ್ಷಗಳಷ್ಟು ಖರ್ಚು ಇದೆ ಎಂದಿದ್ದಾರೆ.
ಆದರೆ ಲಕ್ಷಗಟ್ಟಲೆ ಹಣವನ್ನು ಹೊಂದಿಸಲಾರದ ಕುಟುಂಬ ದಾನಿಗಳ ಸಹಾಯ ಹಸ್ತಕ್ಕೆ ಕೈ ಚಾಚಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಹಣವನ್ನು ಕುಟುಂಬಸ್ಥರು ರಿತ್ವಿಕ್ ನ ಆರೋಗ್ಯ ಅಭಿವೃದ್ಧಿಗಾಗಿ ವ್ಯಯಿಸಿದ್ದು ರೋಗದಿಂದ ಬಾಲಕ ಗುಣಮುಖನಾಗಬೇಕಿರುವ ಸಲುವಾಗಿ ಉಳ್ಳವರು, ಸಹಾಯ ಮಾಡುವ ಮನಸ್ಥಿತಿಯನ್ನು ಹೊಂದಿರುವ ಹೃದಯ ಶ್ರೀಮಂತರು ತಮ್ಮಕೈಲಾದ ಸಹಾಯ ಮಾಡಿ ತಮ್ಮ ಮಗನಿಗೆ ಬಂದಿರುವ ಖಾಯಿಲೆಯನ್ನು ಗುಣಪಡಿಸಲು ಧನ ಸಹಾಯ ಹಾಗೂ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಸಹಾಯ ಮಾಡುವವರು ರಿತ್ವಿಕ್ ರವರ ತಂದೆ ದಿವಾಕರ ಅವರ ಹೆಸರಿಲ್ಲಿರುವ ಕೆನರಾ ಬ್ಯಾಂಕ್ ಬನ್ನೂರು ಶಾಖೆಯ ಖಾತೆ ಸಂಖ್ಯೆ 5391101001255 ಕ್ಕೆ ಅಥವಾ 6363924671 ಮೊಬೈಲ್ ಸಂಖ್ಯೆಗೆ ಪೋನ್ ಪೇ / ಗೂಗಲ್ ಪೇ ಮೂಲಕ ಸಹಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ 6363924671 ಈ ನಂಬರ್ ನ್ನು ಸಂಪರ್ಕಿಸಬಹುದಾಗಿದೆ.






0 Comments