ಬೀರೂರು : (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನಕ್ಕೆ ಸಂಬಂಧಿಸಿದ ಎರಡು ಬಸವಗಳನ್ನು ಗೋಕಳ್ಳರು ಕದ್ದೊಯ್ದಿದ್ದು ಈ ಪೈಕಿ ಒಂದು ಬಸವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಬಸವಗಳು ಎಂದು ಹೆಸರುವಾಸಿಯಾಗಿದ್ದ, ಎರಡು ಬಸವಗಳನ್ನು ಗೋಹಂತಕರು ಕದ್ದೊಯ್ದಿದ್ದರು. ಕಳೆದ ಹದಿಮೂರು ದಿನಗಳಿಂದ ಕಾಣೆಯಾಗಿದ್ದ ಎರಡು ಬಸವಗಳಲ್ಲಿ ದೊಡ್ಡ ಬಸವಣ್ಣನನ್ನು ತುಮಕೂರಿನ ಆರಕ್ಷಕರು ರಕ್ಷಣೆ ಮಾಡಿದ್ದಾರೆ.
ಮೂಡಿಗೆರೆ : ಭಾರೀ ಮಳೆಗೆ ಮನೆ ಕುಸಿತ ; ಮನೆ ಸಂಪೂರ್ಣ ನೆಲಸಮ
ತುಮಕೂರಿನ ಬೀಸನೆಲೆ ಅರಣ್ಯ ಪ್ರದೇಶದಲ್ಲಿ ಗೋವುಗಳನ್ನು ಹತ್ಯೆ ಮಾಡಲೆಂದು ಮೂವರು ಸಿದ್ಧತೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿಯನ್ನು ಹೊಂದಿದ ಪೊಲೀಸರು ತುರ್ತಾಗಿ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ 350 ಕೆ.ಜಿ ಗೋಮಾಂಸ, ಎರಡು ದ್ವಿಚಕ್ರ ವಾಹನ ಹಾಗೂ ಒಂದು ಟಾಟಾ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಧೆ ಮಾಡಲೆಂದು 13 ಕೋಣ, 14 ಹಸು ಸೇರಿ 27 ಜಾನುವಾರುಗಳ ಪೈಕಿ ಒಂದು ಬಸವ ಬೀರೂರಿನ ಬಸವನಂತೆ ಹೋಲಿಕೆ ಕಂಡಿದ್ದು ತುಮಕೂರು ಪೊಲೀಸರು ಬೀರೂರು ಠಾಣೆಯ ಪೊಲೀಸರ ಸಹಕಾರ ಪಡೆದು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಪ್ರಸ್ತುತ ಬಸವಣ್ಣ ಸುರಕ್ಷಿತವಾಗಿದ್ದು ಸಂಪೂರ್ಣ ನಿಯಮಾವಳಿಗಳನ್ನು ಪೂರೈಸಿದ ಬಳಿಕದಲ್ಲಿ ಬಸವಣ್ಣನನ್ನು ಮರಳಿ ದೇವಾಲಯಕ್ಕೆ ತರೆತರಬಹುದು ಎಂದರು. ಅಮೃತೂರು ಠಾಣೆಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬಸವಣ್ಣನ ಪತ್ತೆಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.


.jpeg)



0 Comments