ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಅವರ ತವರೂರಲ್ಲಿ ಎಬಿವಿಪಿಯ ಪ್ರಮುಖ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಜೈಲಿನಿಂದಲೇ ವೀಡಿಯೋ ಕಾಲ್ ಮಾಡಿದ ಮೃತ ಹರ್ಷನ ಹತ್ಯೆಯ ಆರೋಪಿಗಳು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ನಿನ್ನೆ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಗಾಯಗೊಂಡಿರುವ ಎಬಿವಿಪಿ ಪ್ರಮುಖನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪ ನಿನ್ನೆ ಮಧ್ಯಾಹ್ನ ಈ ಗಲಾಟೆ ನಡೆದಿದ್ದು ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮನೆಗೆ ತೆರಳಲೆಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಕಾಲೇಜು ಆವರಣದಿಂದ ಹೊರಹೋಗುವ ಸಂದರ್ಭದಲ್ಲಿ ಕಾಲೇಜಿನ ಹೊರಭಾಗದಲ್ಲಿದ್ದ ಅದೇ ಕಾಲೇಜಿನ ಮತ್ತು ಇತರೆ ಇಬ್ಬರು ಯುವಕರು ಕಾರನ್ನ ತಡೆದು ಕಾರಿನ ಡೋರನ್ನ ಒಡೆದು ಕಾರಿನಲ್ಲಿರುವ ಇಬ್ಬರು ಯುವಕರನ್ನ ಹೊರಗೆ ಎಳೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರೆ ಹೊರಗಿನ ಯುವಕರು ಈ ಇಬ್ಬರು ಯುವಕರನ್ನ ಕಾರಿನಿಂದ ಹೊರಗೆ ಎಳೆದು ಥಳಿಸಿ ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ, ಕೈಕಾಲುಗಳಿಗೆ ಕಲ್ಲುಗಳಿಂದ ಥಳಿಸಿದ್ದಾರೆ. ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಜೀವಂತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಈ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಜಗಳ ಬಿಡಿಸಲು ಯತ್ನಿಸಿದ್ದು, ಇಬ್ಬರು ಯುವಕರನ್ನ 15 ಜನರ ಗ್ಯಾಂಗ್ ಬಿಡಲು ಸಿದ್ದವಿರಲಿಲ್ಲ ಎನ್ನಲಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಸ್ಥಳದಿಂದ ಚದರುವಂತೆ ಮಾಡಲಾಗಿದೆ.
ಈ ಘಟನೆ ಹಳೆಯ ದ್ವೇಷದಿಂದ ನಡೆದಿದೆ ಎಂದು ಆರೋಪಿಸಿ ಪ್ರತೀಕ್ ಗೌಡ, ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಹಳೆಯ ದ್ವೇಷ ಹಿಜಾಬ್ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾದ ಹೆಚ್ಚಿನ ಮಾಹಿತಿಗಳು ಹೊರಬೀಳಲಿದೆ.
ಘಟನಾ ಸಂಬಂಧ ಸ್ಥಳೀಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ನೀಡಿ ವಿದ್ಯಾರ್ಥಿಗಳ ನಡುವೆ ಇರುವ ಈ ರೀತಿಯ ದ್ವೇಷ ಭಾವನೆಯನ್ನು ಹೋಗಲಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


.jpeg)




0 Comments