ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸಾಕಿ ಸಲಹಿದವರನ್ನು ದೂರ ಮಾಡಿಕೊಂಡು ಮನೆಬಿಟ್ಟು ಬಂದು,  ಪ್ರೀತಿಸಿದ ಪ್ರಿಯಕರನ ಜೊತೆಗೆ  ಮದುವೆಯಾಗಿದ್ದ ನವ ವಿವಾಹಿತೆ ಕೊರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳ ಕಾರಣ ಎಂಬುದಾಗಿ ಮೃತಳ ತಂದೆ ಪ್ರಕರಣ ದಾಖಲಿಸಿದ್ದು ಈ ಸಂಬಂಧ ಇಬ್ಬರ ಬಂಧನವಾಗಿದೆ. 

ಮೃತ ಭವಾನಿಯ ಪತಿ ಅಜಯ್ ಹಾಗೂ ಅಜಯ್ ತಂದೆ ದಿನೇಶ್ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ  ಆರೋಪಿಯಾದ ಶಾರದಾಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಮಹಿಳೆಯ ಅಶ್ಲೀಲಫೋಟೋ ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿ ಅಂದರ್


ಶಿವಮೊಗ್ಗ ಮೂಲದ ಮೃತ ಭವಾನಿ ಹಾಗೂ ಶೃಂಗೇರಿಯ ಉಳುವೆ ನಿವಾಸಿ ಅಜಯ್ ಕುಮಾರ್ ನಡುವೆ ಕಾಲೇಜು ಓದುತ್ತಿರುವಾಗ ಪ್ರೀತಿ ಉಂಟಾಗಿದೆ ಎನ್ನಲಾಗಿದ್ದು 2021 ರ ಸೆಪ್ಟೆಂಬರ್ 09 ರಂದು ಇಬ್ಬರೂ ಶೃಂಗೇರಿಯಲ್ಲಿ ಮದುವೆಯಾಗಿದ್ದರು. 

22 ಜುಲೈ 22 ರಂದು ಸಂಜೆಯ ವೇಳೆಗೆ ಅಜಯ್ ಪತ್ನಿ ಭವಾನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತಾಗಿ ಶಾರದಮ್ಮ ಅವರೇ ಕರೆ ಮಾಡಿ ಹುಡುಗಿಯ ತಂದೆಗೆ ತಿಳಿಸಿದ್ದಾರೆ.

ವರದಕ್ಷಿಣೆ ನೀಡುವಂತೆ ಮೃತಳ ಪತಿ ಅಜಯ್ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮೃತ ಭವಾನಿ ಸಂಬಂಧಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಯುವಕನ ಜೊತೆಗೆ ಉತ್ತಮವಾದ ಜೀವನವನ್ನು ರೂಪಿಸಿಕೊಂಡು ಬದುಕಬೇಕಿದ್ದ ನವವಿವಾಹಿತೆ ಕೇವಲ 11 ತಿಂಗಳಿನೊಳಗೆ ನೇಣಿಗೆ ಶರಣಾಗಿರುವುದು ಕುಟುಂಬಸ್ಥರಲ್ಲಿ ಅತೀವವಾದ ನೋವನ್ನು ಉಂಟುಮಾಡಿದೆ.